ವಿಜ್ಞಾನಿಗಳಿಗೆ ಆಮ್ಲಜನಕದ ತಲೆಬಿಸಿ!
Team Udayavani, Nov 19, 2019, 6:41 AM IST
ವಾಷಿಂಗ್ಟನ್: ಮಂಗಳ ಗ್ರಹದಲ್ಲಿ ಆಮ್ಲಜನಕವು ಅಲ್ಲಿನ ಪ್ರತಿ ವಸಂತ ಋತುವಿನಲ್ಲಿ ಶೇ.30ರಷ್ಟು ಏರಿಕೆಯಾಗಿ, ಅನಂತರ ನಿಧಾನವಾಗಿ ಕುಸಿಯುವ ವೈಚಿತ್ರ್ಯವೊಂದು ಪತ್ತೆಯಾಗಿದೆ. ಮಂಗಳನಲ್ಲಿ ಅಧ್ಯಯನ ನಡೆಸುತ್ತಿರುವ ಕ್ಯೂರಿಯಾಸಿಟಿ ರೋವರ್ ಇದನ್ನು ಪತ್ತೆ ಹಚ್ಚಿದ್ದು, ಬಾಹ್ಯಾಕಾಶ ವಿಜ್ಞಾನಿಗಳು ಹಾಗೂ ಮಂಗಳ ಗ್ರಹದ ತಜ್ಞರು ಈ ವಿದ್ಯಮಾನದ ಹಿಂದಿನ ಕಾರಣ ಹುಡುಕುವಲ್ಲಿ ನಿರತರಾಗಿದ್ದಾರೆ.
ಈ ಬಗ್ಗೆ ‘ಜರ್ನಲ್ ಆಫ್ ಜಿಯೋ ಫಿಸಿಕಲ್ ರಿಸರ್ಚ್: ಪ್ಲಾನೆಟ್ಸ್’ ಎಂಬ ನಿಯತಕಾಲಿಕೆಯಲ್ಲಿ ವರದಿ ಪ್ರಕಟವಾಗಿದೆ. ಅದರಲ್ಲಿ, ಮಂಗಳನ ವಾತಾವರಣದಲ್ಲಿ ಇರುವ ಕಾರ್ಬನ್ ಡೈ ಆಕ್ಸೈಡ್ (CO2) ಹಾಗೂ ನೀರಿನ ಕಣಗಳ (H2O) ವಿಭಜನೆಯಿಂದಾಗಿ ಅಲ್ಲಿ ಆಮ್ಲಜನಕ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.
ಆದರೆ, ಇದನ್ನು ಅಲ್ಲಗಳೆದಿರುವ ನಾಸಾ, ಮಂಗಳನಲ್ಲಿನ ಆಮ್ಲಜನಕ ಏಕಾಏಕಿ ಹೆಚ್ಚಾಗಲು ಅಲ್ಲಿನ ನೀರಿನ ಪ್ರಮಾಣ ಈಗಿರುವುದಕ್ಕಿಂತ 5 ಪಟ್ಟು ಹೆಚ್ಚಿರಬೇಕು ಹಾಗೂ CO2 ಕಣಗಳು ನಿಧಾನವಾಗಿ ವಿಭಜನೆಗೊಳ್ಳಬೇಕು. ಮಂಗಳನಲ್ಲಿ ಇದು ಸಾಧ್ಯವೇ ಎಂಬ ಅನುಮಾನ ವ್ಯಕ್ತಪಡಿಸಿದೆ. ಹಾಗಾಗಿ, ವಿಜ್ಞಾನಿಗಳು, ತಜ್ಞರು ಹೊಸ ಸಿದ್ಧಾಂತಗಳನ್ನು ಪ್ರತಿಪಾದಿಸುವುದು ಸವಾಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.