![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 18, 2017, 6:52 AM IST
ಲಂಡನ್: ಸಾಮಾನ್ಯವಾಗಿ ಕಾಡುಗಳಲ್ಲಿ ಹುಲಿ, ಸಿಂಹಗಳು ಒಂದು ಮತ್ತೂಂದರ ಪ್ರದೇಶಕ್ಕೆ ಹೋಗುವುದಿಲ್ಲ. ಅವುಗಳ ಬಾಂಧವ್ಯ ಅಷ್ಟಕ್ಕಷ್ಟೆ. ಆದರೆ, ಕರ್ನಾಟಕದ ಭದ್ರಾ, ನಾಗರಹೊಳೆ, ಬಿಳಿಗಿರಿ ರಂಗನಬೆಟ್ಟ ಪ್ರದೇಶ, ಬಂಡೀಪುರ ವ್ಯಾಪ್ತಿಯ ದಟ್ಟಡವಿಯಲ್ಲಿ ಈ ಅಂಶ ಅಪವಾದ. ಹುಲಿ, ಚಿರತೆ ಮತ್ತು ಸೀಳುನಾಯಿಗಳು ಕಾಡಿನಲ್ಲಿ ಒಂದೇ ಕಡೆ ವಾಸಿಸುತ್ತವೆ. ಇದು ಹೇಗೆ ಸಾಧ್ಯ ಎಂದು
ಆಶ್ಚರ್ಯ ಪಡುತ್ತಿದ್ದೀರಾ. ವನ್ಯಜೀವಿ ಸಂರಕ್ಷಣಾ ಸಂಸ್ಥೆ (ಡಬ್ಲೂಸಿಎಸ್) ಭಾರತದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ದೊಡ್ಡ ಬೆಕ್ಕುಗಳು ಮತ್ತು ಕಾಡು ನಾಯಿಗಳಿಗೆ ಬೇಟೆ ವಿಷಯವಾಗಿ ನೇರ ಸ್ಪರ್ಧೆ ಇರುತ್ತದೆ. ಆದರೂ, ಸ್ವಲ್ಪ ಮಟ್ಟಿನ ಸಂಘರ್ಷಗಳ ನಡುವೆ ಇವುಗಳು ಸಾಮರಸ್ಯದಿಂದ ಬದುಕುತ್ತವೆ. ಅವುಗಳು ಒಂದೇ ರೀತಿಯ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಆದರೆ, ಬೇಟೆಗೆ ತೆರಳುವ ಸಮಯವನ್ನು ಪ್ರಾಣಿಗಳೇ ನಿಗದಿಪಡಿಸಿಕೊಂಡಿವೆ. ಸೀಳುನಾಯಿಗಳು ಹಗಲಿನಲ್ಲಿ ಚಟುವಟಿಕೆಯಿಂದ ಇರುತ್ತವೆ. ಹಗಲಿನಲ್ಲೇ ಬೇಟೆಯಾಡುತ್ತವೆ. ರಾತ್ರಿ ವೇಳೆ ಹುಲಿ ಮತ್ತು ಚಿರತೆಗಳು ತಮ್ಮ ಬೇಟೆ ಹುಡುಕಿಕೊಂಡು ಹೋಗುತ್ತವೆ. ಭದ್ರಾ
ಸಂರಕ್ಷಿತಾರಣ್ಯದಲ್ಲಿ ಬೇಟೆ ವಿರಳವಾಗಿರುತ್ತವೆ. ಆದರೂ, ಸೀಳುನಾಯಿಗಳು ದೊಡ್ಡ ಬೆಕ್ಕುಗಳು ಮುಖಾಮುಖೀಯಾಗುವುದನ್ನು ತಪ್ಪಿಸಿಕೊಳ್ಳುತ್ತವೆ. ನಾಗರಹೊಳೆಯಲ್ಲಿ ಚಿರತೆಗಳು ಹುಲಿಗಳ ಬಳಿ ಹೋಗುವುದನ್ನು ತಡೆಯುತ್ತವೆ. ಇವುಗಳು ಬೇಟೆಯಾಡುವ ಪ್ರಾಣಿಗಳಾದ ಹಂದಿ, ಜಿಂಕೆ ಮೊಲಗಳ ಸಂಖ್ಯೆ ವಿರಳವಾಗಿರುವುದೇ ಈ ಸಾಮರಸ್ಯಕ್ಕೆ ಕಾರಣ ಎನ್ನುತ್ತಾರೆ ಡಬ್ಲೂéಸಿಎಸ್‌ನ
ಏಷ್ಯಾ ವಲಯದ ನಿರ್ದೇಶಕ ಡಾ.ಉಲ್ಲಾಸ್ ಕಾರಂತ್. ಮಾಂಸಾಹಾರಿ ಪ್ರಾಣಿಗಳ ಜೀವನ ಅಭ್ಯಸಿಸುವ ಸಲುವಾಗಿ 12ಕ್ಕೂ ಹೆಚ್ಚು ಕ್ಯಾಮರಾಗಳನ್ನು ಇರಿಸಿ, 2,500 ಚಿತ್ರಗಳನ್ನು ತೆಗೆಯಲಾಗಿದೆ. ಈ ವೇಳೆ, ಮೃಗಗಳ ಬೇಟೆ ಮತ್ತು ಜೀವನ ಕ್ರಮಗಳ ಕುರಿತು ಹಲವಾರು ಮಾಹಿತಿಗಳು ಬಹಿರಂಗವಾಗಿವೆ. ಹೆಚ್ಚಾಗಿ ದೊಡ್ಡ ಬೆಕ್ಕುಗಳು ಮತ್ತು ಕಾಡು ನಾಯಿಗಳು ಬೇರೆ ಬೇರೆ ಸ್ಥಳಗಳಲ್ಲಿ
ವಾಸಿಸುತ್ತವೆ. ಆದರೆ, ಪಶ್ಚಿಮ ಘಟ್ಟದಲ್ಲಿ ಒಂದೇ ಕಡೆ ವಾಸಿಸುತ್ತವೆ.
ಅಂತಾರಾಷ್ಟ್ರೀಯ ಪ್ರಾಕೃತಿಕ ಸಂಪತ್ತಿನ ರಕ್ಷಣೆಯ ಒಕ್ಕೂಟ (ಐಯುಸಿಎನ್) ಹುಲಿಗಳು ಮತ್ತು ಸೀಳುನಾಯಿಗಳನ್ನು ಅಳಿವಿನಂಚಿನಲ್ಲಿರುವ ಮತ್ತು ಚಿರತೆಗಳನ್ನು ಅತ್ಯಂತ ಸೂಕ್ಷ್ಮ ಪ್ರಾಣಿ ಎಂದು ಗುರುತಿಸಿದೆ. ಜನಸಂಖ್ಯೆಯನ್ನು ನಿಯಂತ್ರಿಸಿದಾಗ
ಹುಲಿಗಳು ಮತ್ತು ಇತರ ಪ್ರಾಣಿಗಳ ಸಂರಕ್ಷಣೆಯನ್ನೂ ನಡೆಸಿ ಜೀವ ವೈವಿಧ್ಯವನ್ನು ಕಾಪಾಡಿಕೊಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ವೈಜ್ಞಾನಿಕ ಅಂಶಗಳಿರುವ ಲೇಖನ “ದ ರಾಯಲ್ ಸೊಸೈಟಿ ಬಿ-ಬಯಲಾಜಿಕಲ್ ಸೈನ್ಸಸ್’ನಲ್ಲಿ ಪ್ರಕಟವಾಗಿದೆ.
ಈ ಅಧ್ಯಯನದ ಫಲಿತಾಂಶ ದಿಂದ ನಮಗೇ ಅಚ್ಚರಿಯಾಗಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಾಣಿಗಳು ತಮ್ಮ ಮೂಲ ಬೇಟೆಯನ್ನು ಬಿಟ್ಟು ಮತ್ತೂಂದನ್ನು ಅವಲಂಬಿಸುತ್ತವೆ. ಇಂಥ ವ್ಯವಸ್ಥೆ ಜೀವ ವೈವಿಧ್ಯ ಕಾಪಾಡಲು ನೆರವಾಗುತ್ತದೆ.
ಡಾ.ಉಲ್ಲಾಸ ಕಾರಂತ್, ಡಬ್ಲೂéಸಿಎಸ್ ಏಷ್ಯಾ ವಲಯದ ನಿರ್ದೇಶಕ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.