ಸೋಚಿಯಲ್ಲಿ ಮೋದಿ, ಪುಟಿನ್ ಮಾತುಕತೆ
Team Udayavani, May 22, 2018, 6:00 AM IST
ಮಾಸ್ಕೋ: ರಷ್ಯಾದ ಸೋಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ವ ವ್ಲಾಡಿಮಿರ್ ಪುಟಿನ್ ಸೋಮವಾರ ವಿವಿಧ ವಿಷಯಗಳಿಗೆ ಸಂಬಂಧಿಸಿ ಅನೌ ಪಚಾರಿಕ ಮಾತುಕತೆ ನಡೆಸಿದ್ದಾರೆ. ಪುಟಿನ್ ರಷ್ಯಾ ಅಧ್ಯಕ್ಷ ರಾಗಿ ಪುನಃ ಆಯ್ಕೆಯಾದ ನಂತರದಲ್ಲಿ ಇದೇ ಮೊದಲ ಬಾರಿಗೆ ಉಭಯ ಮುಖಂಡರು ಭೇಟಿಯಾಗಿದ್ದಾರೆ.
ಭಾರತ ಮತ್ತು ರಷ್ಯಾ ವಿಶೇಷ ಪಾಲುದಾರಿಕೆ ಹೊಂದಿವೆ ಎಂದು ಈ ವೇಳೆ ಪ್ರಧಾನಿ ಮೋದಿ ಹೇಳಿದ್ದಾರೆ. ಹಿಂದಿನಿಂದಲೂ ಮಹತ್ವದ ಸಹಕಾರವನ್ನು ಉಭಯ ದೇಶಗಳು ಹೊಂದಿದ್ದವು. ಈಗ ಇದು ಇನ್ನೊಂದು ಹಂತ ತಲುಪಿದ್ದು, ಮಹತ್ವದ ಸಾಧನೆಯಾಗಿದೆ ಎಂದಿದ್ದಾರೆ. ಉಭಯ ದೇಶಗಳು ತುಂಬಾ ಹಿಂದಿನಿಂದಲೂ ಸ್ನೇಹಿತರಾಷ್ಟ್ರಗಳಾ ಗಿವೆ.2001ರಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯೊಂದಿಗೆ ರಷ್ಯಾಗೆ ಮೊದಲ ಬಾರಿಗೆ ಆಗಮಿಸಿದ್ದನ್ನು ಮೋದಿ ನೆನಪಿಸಿಕೊಂಡಿದ್ದಾರೆ. ಅಲ್ಲದೆ ಗುಜರಾತ್ ಮುಖ್ಯಮಂತ್ರಿ ಹುದ್ದೆಗೇರಿದಾಗ ನಾನು ಭೇಟಿ ಮಾಡಿದ ಮೊದಲ ವಿಶ್ವನಾಯಕರೂ ಪುಟಿನ್ ಆಗಿದ್ದಾರೆ. ಹೀಗಾಗಿ ನನ್ನ ರಾಜಕೀಯ ಜೀವನದಲ್ಲಿ ರಷ್ಯಾ ಮತ್ತು ಪುಟಿನ್ ಮಹತ್ವದ ಸ್ಥಾನ ಹೊಂದಿದ್ದಾರೆ ಎಂದೂ ಮೋದಿ ಹೇಳಿದ್ದಾರೆ.
ಈ 18 ವರ್ಷಗಳಲ್ಲಿ ಪುಟಿನ್‌ರನ್ನು ಭೇಟಿ ಮಾಡುವ ಅನೇಕ ಅವಕಾಶಗಳು ಒದಗಿ ಬಂದಿವೆ. ಹಲವು ವಿಷಯಗಳನ್ನು ಚರ್ಚಿಸಿದ್ದೇವೆ. ಭಾರತ – ರಷ್ಯಾದ ಸಂಬಂಧವನ್ನು ನಾವು ಇನ್ನೊಂದು ಎತ್ತರಕ್ಕೆ ಕೊಂಡೊಯ್ದಿದ್ದೇವೆ. ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (ಐಎನ್‌ಎಸ್‌ಟಿಸಿ) ನಿರ್ಮಾಣ ಹಾಗೂ ಬ್ರಿಕ್ಸ್ ಶೃಂಗದ ಬಗ್ಗೆಯೂ ಚರ್ಚಿಸಿದ್ದೇವೆ ಎಂದೂ ಹೇಳಿದ್ದಾರೆ.
ಶಾಂಘೈ ಸಹಕಾರ ಸಂಘಟನೆಯಲ್ಲಿ (ಎಸ್‌ಸಿಒ) ಭಾರತದ ಕಾಯಂ ಸದಸ್ಯತ್ವಕ್ಕೆ ರಷ್ಯಾ ಬೆಂಬಲ ನೀಡಿರುವುದಕ್ಕೆ ಮೋದಿ ಧನ್ಯವಾದ ತಿಳಿಸಿದ್ದಾರೆ. ಎಸ್‌ಸಿಒ 8 ದೇಶಗಳ ಒಕ್ಕೂಟವಾಗಿದ್ದು, ಸದಸ್ಯ ರಾಷ್ಟ್ರಗಳ ಮಿಲಿಟರಿ ಹಾಗೂ ಆರ್ಥಿಕ ಸಹಕಾರದ ಉದ್ದೇಶ ಹೊಂದಿದೆ. ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ಈ ಒಕ್ಕೂಟಕ್ಕೆ ಸೇರ್ಪಡೆಯಾಗಿವೆ.
ಮಹತ್ವದ ಮಾತುಕತೆ: ಮೂಲಗಳ ಪ್ರಕಾರ ಅನೌಪಚಾರಿಕ ಮಾತುಕತೆಯಲ್ಲಿ ಅಮೆರಿಕದ ಹೊಸ ರಕ್ಷಣಾ ಖರೀದಿ ನೀತಿ ಹಾಗೂ ಇರಾನ್ ಅಣುವಿದ್ಯುತ್ ಘಟಕದ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಟ್ರೂಂಫ್ ಶಸ್ತ್ರಾಸ್ತ್ರಗಳನ್ನು ಭಾರತವು ರಷ್ಯಾದಿಂದ ಖರೀದಿಸಲು ನಿರ್ಧರಿಸಿದ್ದು, ಅಮೆರಿಕದ ಹೊಸ ಕಾನೂನಿನಿಂದಾಗಿ ಭಾರತದ ಮೇಲೆ ಅಮೆರಿಕ ಆರ್ಥಿಕ ದಿಗ್ಬಂಧನ ಹೇರುವ ಭೀತಿ ಉಂಟಾಗಿದೆ. ಇನ್ನೊಂದೆಡೆ, ಭಯೋತ್ಪಾದನೆ ನಿಗ್ರಹದ ಬಗೆಗೂ ಚರ್ಚೆ ನಡೆದಿದೆ ಎನ್ನಲಾಗಿದೆ.
ಸಂಬಂಧ ವೃದ್ಧಿ ಸದ್ಯದ ಅಗತ್ಯ
ಭಾರತ ಹಾಗೂ ಅಮೆರಿಕದ ಸೇನಾ ಸಂಬಂಧ ಸುಧಾರಿಸಿರುವುದರಿಂದಾಗಿ ಚೀನಾ ಹಾಗೂ ಪಾಕಿಸ್ತಾನದತ್ತ ರಷ್ಯಾ ಒಲವು ತೋರಿರುವುದು ಭಾರತಕ್ಕೆ ಆತಂಕದ ಸಂಗತಿಯಾಗಿದೆ. ಆದರೆ ಅಮೆರಿಕದ ಜೊತೆಗಿನ ಭಾರತ ಸಂಬಂಧ ಸುಧಾ ರಿಸಿದರೂ, ರಷ್ಯಾದ ಜೊತೆಗಿನ ಸಂಬಂಧಕ್ಕೆ ಧಕ್ಕೆಯಾಗದು ಎಂಬುದನ್ನು ಭಾರತವು ಮನ ದಟ್ಟು ಮಾಡಿಕೊಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೋದಿ ಭೇಟಿ ಮಹತ್ವದ್ದಾಗಿದೆ. ಅಫ್ಘಾನಿ ಸ್ತಾನದಲ್ಲಿ ಪರಿಸ್ಥಿತಿ ಹದಗೆಡುತ್ತಿರುವು ದರಿಂದ ರಷ್ಯಾ ಮತ್ತು ಭಾರತ ಒಂದಾಗುವ ಅಗತ್ಯವೂ ಇದೆ. ಉಭಯ ದೇಶಗಳು ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವುದಕ್ಕೆ ಶ್ರಮಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.