ಬ್ಯಾಂಕ್ ಖಾತೆ ಇಲ್ಲದ 2 ಬಿಲಿಯ ಜನರಿಗಾಗಿ ಎಪಿಕ್ಸ್: ಮೋದಿ ಅನಾವರಣ
Team Udayavani, Nov 13, 2018, 3:54 PM IST
ಸಿಂಗಾಪುರ : ಬ್ಯಾಂಕ್ ಖಾತೆ ಇಲ್ಲದ ಜಗತ್ತಿನ ಸುಮಾರು ಎರಡು ಶತಕೋಟಿ ಜನರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರ ಎಪಿಕ್ಸ್ (APIX) ಎಂಬ ಹೆಸರಿನ ತಂತ್ರಾಂಶವನ್ನು ಇಲ್ಲಿ ಬಿಡುಗಡೆ ಮಾಡಲಿದ್ದಾರೆ.
ಸಿಂಗಾಪುರದಲ್ಲಿ ಈ ವಾರಾಂತ್ಯ ನಡೆಯುವ ಹಣಕಾಸು ತಂತ್ರಜ್ಞಾನ ಕಂಪೆನಿಗಳ ವಿಶ್ವದ ಅತೀ ದೊಡ್ಡದೆನಿಸುವ, ಸುಮಾರು 30,000 ಜನರು ಸೇರುವ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದು ಆ ಸಂದರ್ಭದಲ್ಲೇ ಎಪಿಕ್ಸ್ ಅನಾವರಣಗೊಳ್ಳಲಿದೆ.
ಪೂರ್ವ ಏಶ್ಯ ಮತ್ತು ಆಸಿಯಾನ್ ಸೇರಿದಂತೆ ನ.14ರಿಂದ 15ರ ವರೆಗೆ ನಡೆಯಲಿರುವ ಸರಣಿ ಶೃಂಗದಲ್ಲಿ ಭಾಗವಹಿಸುವುದಕ್ಕಾಗಿ ಪ್ರಧಾನಿ ಮೋದಿ ಅವರು ಸಿಂಗಾಪುರದಲ್ಲಿರುತ್ತಾರೆ. ಈ ಸಂದರ್ಭದಲ್ಲೇ ಅವರು ಜಾಗತಿಕ ಫಿನ್ಟೆಕ್ ಕಂಪೆನಿಗಳ ಪ್ರತಿನಿಧಿಗಳು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಫಿನ್ಟೆಕ್ ಫೆಸ್ಟಿವಲ್ನಲ್ಲಿ ಭಾಗವಹಿಸುತ್ತಾರೆ. ಈ ಸಮಾವೇಶದಲ್ಲಿ 400 ಪ್ರದರ್ಶಕರನ್ನು ಒಳಗೊಂಡ ಭಾರತದ ಅತೀ ದೊಡ್ಡ ತಂಡ ಪಾಲ್ಗೊಳ್ಳಲಿದೆ.
ಬ್ಯಾಂಕ್ ಖಾತೆಯೇ ಇಲ್ಲದೆ ವಿಶ್ವದ ಸುಮಾರು ಎರಡು ಶತಕೋಟಿ ಜನರಿಗೆ ಬ್ಯಾಂಕಿಂಗ್ ಸೌಕರ್ಯ ಕಲ್ಪಿಸುವ ಎಪಿಕ್ಸ್ ತಂತ್ರಾಂಶವನ್ನು ಹೈದರಾಬಾದ್, ಕೊಲಂಬೋ ಮತ್ತು ಲಂಡನ್ನಲ್ಲಿರುವ ಟೆಕ್ ಪರಿಣತರು ವಿನ್ಯಾಸಗೊಳಿಸಿದ್ದಾರೆ.
ಬಾಸ್ಟನ್ನಲ್ಲಿ ಪ್ರಧಾನ ಕಾರ್ಯಾಲಯ ಹೊಂದಿರುವ ವಿರ್ಟುಸಾ ಅಭಿವೃದ್ಧಿ ಪಡಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ಎಪಿಕ್ಸ್, ಅತ್ಯಂತ ದೂರ ಪ್ರದೇಶಗಳಲ್ಲಿರುವ ಜನರನ್ನು ಸಣ್ಣ ಬ್ಯಾಂಕುಗಳು ಮತ್ತು 3 ಹಾಗೂ 4ನೇ ಹಂತದ ಬ್ಯಾಂಕಿಂಗ್ ಸಂಸ್ಥೆಗಳು ತಲುಪುವುದಕ್ಕೆ ಅವಕಾಶ ಕಲ್ಪಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಪ್ರತ್ಯೇಕ ಅಪಘಾತ ಇಬ್ಬರು ಮೃತ್ಯು..
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.