ಅಮೆರಿಕದಲ್ಲಿ ಮೋದಿಗೆ ಸಿಗುತ್ತೆ ರೆಡ್ ಕಾರ್ಪೆಟ್ ವೆಲ್‌ಕಮ್
Team Udayavani, Jun 25, 2017, 3:45 AM IST
ವಾಷಿಂಗ್ಟನ್/ಲಿಸºನ್: ಪ್ರಧಾನಿ ನರೇಂದ್ರ ಮೋದಿ ಶನಿವಾರದಿಂದ ಮೂರು ದಿನಗಳ ಪೋರ್ಚುಗಲ್ ಮತ್ತು ಅಮೆರಿಕ ಪ್ರವಾಸ ಆರಂಭಿಸಿದ್ದಾರೆ.
ಪ್ರಧಾನಿ ಅವರ ಪ್ರವಾಸಕ್ಕೆ ಪ್ರಾಮುಖ್ಯತೆ ಬರುವುದೇ ರವಿವಾರ ಮತ್ತು ಸೋಮವಾರ. ಅಂದರೆ ಅಮೆರಿಕ ನೆಲಕ್ಕೆ ಕಾಲಿಟ್ಟ ಬಳಿಕ. ದಕ್ಷಿಣ ಏಷ್ಯಾದಲ್ಲಿ ಚೀನ ತನ್ನ ಪ್ರಭಾವಳಿ ವೃದ್ಧಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅಮೆರಿಕ ಭೇಟಿಯಿಂದ ಅದರ ಬೆಳವಣಿಗೆ ವೇಗಕ್ಕೂ ಕೊಂಚ ಕಡಿವಾಣ ಹಾಕುವ ಇರಾದೆ ಅಮೆರಿಕ ಮತ್ತು ಭಾರತಕ್ಕೂ ಇದೆ. ಅದಕ್ಕೆ ಇರುವ ಪ್ರಮುಖ ಕಾರಣ ದಕ್ಷಿಣ ಸಮುದ್ರ ಚೀನ ವ್ಯಾಪ್ತಿಯ ವಿಯೆಟ್ನಾಂ ಗುಂಟ ಇರುವ ದ್ವೀಪಗಳಲ್ಲಿ ಚೀನ ಮಿಲಿಟರಿ ನೆಲೆ ವಿಸ್ತರಣೆಯನ್ನು ಯಾವ ರೀತಿ ತಡೆಯಬಹುದು ಎಂಬುದರ ಬಗ್ಗೆಯೂ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಚರ್ಚಿಸಬಹುದು ಎಂದು ಹೇಳಲಾಗಿದೆ.
ಸಿಗಲಿದೆ ಕೆಂಪು ಹಾಸಿನ ಸ್ವಾಗತ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಭೇಟಿ ನಡೆಯುವುದು ಸೋಮವಾರ. ಈ ಸಂದರ್ಭದಲ್ಲಿ ಅಧ್ಯಕ್ಷ ಟ್ರಂಪ್ ದಿನವಿಡೀ ಪ್ರಧಾನಿಯವರ ಜತೆಗೆ ಇರಲಿದ್ದಾರೆ. ಜತೆಗೆ ಪ್ರವಾಸ ಕೈಗೊಂಡಿರುವ ಮೋದಿಗೆ ಕೆಂಪು ಹಾಸಿನ ಸ್ವಾಗತ (ರೆಡ್ ಕಾಪೆìಟ್ ವೆಲ್‌ಕಮ್) ನೀಡಲಾಗುತ್ತದೆ. ಅದೇ ದಿನ ಎರಡೂ ರಾಷ್ಟ್ರಗಳಿಗೆ ಸಂಬಂಧಿಸಿದ ನಾಗರಿಕ ಪರಮಾಣು ಒಪ್ಪಂದ, ಉಗ್ರವಾದದ ವಿರುದ್ಧ ಸಮರ ಮತ್ತಿತರ ವಿಚಾರಗಳ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಲಿದ್ದಾರೆ. ಮೋದಿ- ಟ್ರಂಪ್ 1 ಗಂಟೆ ಕಾಲ ಮಾತುಕತೆ ಬಳಿಕ ದ್ವಿಪಕ್ಷೀಯ ಮಾತುಕತೆಯತ್ತ ಹೊರಳಿಕೊಳ್ಳಲಿದ್ದಾರೆ.
ಭೋಜನ ಸ್ವೀಕರಿಸಲಿರುವ ಮೊದಲ ನಾಯಕ: ಅಧ್ಯಕ್ಷ ಟ್ರಂಪ್ ಜತೆ ಪ್ರಧಾನಿ ಮೋದಿ ಮೂರು ಬಾರಿ ದೂರವಾ ಣಿ ಯಲ್ಲಿ ಮಾತುಕತೆ ನಡೆಸಿದ್ದರೂ ಅಲ್ಲಿ ಸರಕಾರ ಬದಲಾದ ಬಳಿಕ ಮೊದಲ ಬಾರಿಗೆ ಇಬ್ಬರು ನಾಯಕರ ಭೇಟಿ ನಡೆಯುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಪ್ರಸಕ್ತ ವರ್ಷ ಅಮೆರಿಕ ಅಧ್ಯಕ್ಷರ ಜತೆ ಔತಣ ಕೂಟದಲ್ಲಿ ಭಾಗವಹಿ ಸಲಿರುವ ಮೊದಲ ನಾಯಕ ಭಾರತದ ಪ್ರಧಾನಿ ನರೇಂದ್ರ ಮೋದಿ ಎಂಬ ಹೆಗ್ಗಳಿಕೆಯೂ ಅವರದ್ದಾಗಲಿದೆ.
ನಾಲ್ಕನೇ ಭೇಟಿ: ಪ್ರಧಾನಿಯವರ ಅಮೆರಿಕ ಭೇಟಿ ನಾಲ್ಕನೆಯದ್ದಾಗಿದ್ದು, ರಕ್ಷಣಾ ಸಹಕಾರ, ಭಯೋ ತ್ಪಾದನೆ ಮತ್ತು ಇಂಧನ ಕ್ಷೇತ್ರಗಳಲ್ಲಿ ಎರಡು ದೇಶಗಳ ಸಹಕಾರ ಪ್ರಮುಖವಾಗಿ ಅಜೆಂಡಾದಲ್ಲಿರಲಿದೆ. ಇದರ ಜತೆಗೆ ಆರ್ಥಿಕ ಸಹಕಾರ ಕೂಡ ಸೇರ್ಪಡೆಯಾಗಿದೆ. ಪ್ರಧಾನಿ ಭೇಟಿ ಬಗ್ಗೆ ಶನಿವಾರ ಮಾತನಾಡಿದ ಶ್ವೇತಭವನದ ವಕ್ತಾರ ಭಯೋತ್ಪಾದಕರ ಬಗ್ಗೆ ಮಾಹಿತಿ ಮತ್ತು ಗುಪ್ತಚರ ವಿಚಾರ ಹಂಚಿಕೆ, ಇಂಟರ್‌ನೆಟ್ ಬಳಕೆ ಸೇರ್ಪಡೆ ಯಾಗಲಿದೆ ಎಂದಿದ್ದಾರೆ. ಉತ್ತರ ಕೊರಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಅಮೆರಿಕಕ್ಕೆ ಭಾರತ ನೀಡಿದ ಬೆಂಬಲ ಸ್ತುತ್ಯರ್ಹವಾದದ್ದು ಎಂದಿದ್ದಾರೆ ಅವರು.
ವೀಸಾ ವಿಚಾರವಿಲ್ಲ: ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ತಲೆನೋವಾಗಿರುವ ಎಚ್1ಬಿ ವೀಸಾದ ಬಗ್ಗೆ ಪ್ರಧಾನಿ ಮೋದಿ, ಟ್ರಂಪ್ ಜತೆಗೆ ಪ್ರಸ್ತಾವ ಮಾಡುವ ಸಾಧ್ಯತೆ ಬಹುತೇಕ ಕಡಿಮೆ. ಆದರೆ ಭಾರತ ಈ ವಿಚಾರ ಪ್ರಸ್ತಾವಿಸಿದರೆ ಅಮೆರಿಕ ಪರಿಗಣಿಸುವ ಸಾಧ್ಯತೆ ಇದೆ ಎಂದು ಆ ದೇಶದ ವಿದೇಶಾಂಗ ಇಲಾಖೆ ವಕ್ತಾರ ತಿಳಿಸಿದ್ದಾರೆ.
ಸಿಗಲಿದೆ ಗುಪ್ತಚರ ಡ್ರೋನ್
ದೇಶದ ನೌಕಾಪಡೆಗೆ ಅಗತ್ಯವಾ ಗಿರುವ 22 ಪ್ರಿಡೇಟರ್ ಡ್ರೋನ್ (ಗುಪ್ತಚರ) ಖರೀದಿಯ ಬಗ್ಗೆಯೂ ಈ ಪ್ರವಾಸದ ವೇಳೆ ಹಸುರು ನಿಶಾನೆ ಸಿಗಲಿದೆ. ಅದರ ಮೊತ್ತ 130 ರಿಂದ 190 ಶತಕೋಟಿ ರೂ. ಆಗಲಿದೆ. ಇತರ ಜತೆಗೆ ಹವಾಮಾನ ಬದಲಾವಣೆ ಬಗ್ಗೆಯೂ ಚರ್ಚಿಸಲಿದ್ದಾರೆ.
ಪಿಎಂ ಮೋದಿ ಕಾರ್ಯಕ್ರಮ
ರವಿವಾರ
ಅಮೆರಿಕದ ಪ್ರಮುಖ ಕಂಪೆನಿಗಳ ಸಿಇಒಗಳ ಒಕ್ಕೂಟದ ಸಭೆಯಲ್ಲಿ ಭಾಗಿ ಭಾರತೀಯ ಸಮುದಾಯ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ. ಹಿಂದಿನ ವರ್ಷದಂತೆ ಅದ್ದೂರಿ ಸಾರ್ವಜನಿಕ ಸಮಾರಂಭದ ಬದಲಿಗೆ ಹೊಟೇಲ್ ಆವರಣಕ್ಕೆ ಸೀಮಿತ.
ಸೋಮವಾರ
ಅಮೆರಿಕ ಅಧ್ಯಕ್ಷರ ಜತೆಗೆ ಪ್ರಧಾನಿ ಮೋದಿ ಮೊದಲ ಬಾರಿಗೆ ಮುಖಾಮುಖೀ ಭೇಟಿ. ಇಡೀ ದಿನ ಅಧ್ಯಕ್ಷ ಟ್ರಂಪ್ ಶ್ವೇತಭವನದಲ್ಲಿ ಪಿಎಂ ಜತೆಗೇ ಇರಲಿದ್ದಾರೆ.
ಎರಡು ದೇಶಗಳ ನಡುವೆ ಮಾತುಕತೆ ಬಗ್ಗೆ ಸಮಗ್ರ ರೂಪುರೇಷೆ ಪೂರ್ಣ. ನಿಯೋಗ ಮಟ್ಟದಿಂದ ತೊಡಗಿ ಮೋದಿ-ಟ್ರಂಪ್ ನಡುವಿನ ಭೇಟಿ ವರೆಗಿನ ಮಾತುಕತೆ.
ಮಧ್ಯಾಹ್ನ ಪ್ರಧಾನಿ ಮೋದಿ ಮತ್ತು ಟ್ರಂಪ್ ಜತೆಗೆ ಭೋಜನ ಸ್ವೀಕಾರ. ರಾತ್ರಿ ಪ್ರಧಾನಿ ಗೌರವಾರ್ಥ ಟ್ರಂಪ್‌ರಿಂದ ಔತಣಕೂಟ. ಅಮೆರಿಕ ಅಧ್ಯಕ್ಷ ಟ್ರಂಪ್ ಜತೆಗೆ ಈ ವರ್ಷ ಔತಣ ಸ್ವೀಕರಿಸಲಿರುವ ಮೊದಲ ನಾಯಕ ಎಂಬ ಹೆಗ್ಗಳಿಕೆ ಪ್ರಧಾನಿ ಮೋದಿಗೆ
ಪೋರ್ಚುಗಲ್‌ನಲ್ಲಿ ಪ್ರಧಾನಿಗೆ ಗುಜರಾತ್ ಮಾದರಿ ಊಟ
ಅಮೆರಿಕ ಪ್ರವಾಸದ ದಾರಿಯಲ್ಲಿ ಪ್ರಧಾನಿ ಮೋದಿ ಮೊದಲು ಇಳಿದದ್ದು ಪೋರ್ಚುಗಲ್ ರಾಜಧಾನಿ ಲಿಸºನ್‌ಗೆ. ಅಲ್ಲಿನ ಪ್ರಧಾನಿ, ಗೋವಾ ಮೂಲದ ಆ್ಯಂಟೋನಿಯೋ ಕೋಸ್ಟಾ ಜತೆ ವಿಜ್ಞಾನ ಮತ್ತು ತಂತ್ರಜ್ಞಾನ, ಉದ್ದಿಮೆಗಳು ಮತ್ತು ಕಂಪನಿಗಳ ನಡುವಿನ ಸಹಕಾರ, ಸಾಂಸ್ಕೃತಿಕ ವಿನಿಮಯ ಕ್ಷೇತ್ರದಲ್ಲಿ ಸಹಕಾರಕ್ಕೆ ಮಾತುಕತೆ ನಡೆಸಲಾಗಿದೆ. ಒಟ್ಟು 11 ಒಪ್ಪಂದಗಳಿಗೆ ಸಹಿಯನ್ನೂ ಹಾಕ ಲಾಗಿದೆ. 2 ಸಾವಿರನೇ ಇಸ್ವಿಯಲ್ಲಿ ಅಟಲ್‌ಪ್ರಧಾನಿ ಆಗಿದ್ದಾಗ ಐರೋಪ್ಯ ಒಕ್ಕೂಟ ಸಭೆಗೆಂದು ಅಲ್ಲಿಗೆ ಭೇಟಿ ನೀಡಿದ್ದರು.
ಮೋದಿ ಗೌರವಾರ್ಥ ಆಯೋಜಿಸಿದ್ದ ಔತಣ ಕೂಟದಲ್ಲಿ ಮಾವಿನ ಶ್ರೀಖಂಡ, “ಅಖು ಸಾಖ್’ ಎಂಬ ವಿಶೇಷ ಖಾದ್ಯ ಬಡಿಸಲಾಗಿತ್ತು. ಸಾಖ್ ಅಂದರೆ ಕರಿ. ಅಖು ಅಂದರೆ ಪೂರ್ತಿ ಎಂಬ ಅರ್ಥ. ಅಂದರೆ ವಿವಿಧ ತರಕಾರಿಗಳನ್ನೇ ಉಪಯೋಗಿಸಿ ಮಾಡಿದ ವಿಶೇಷ ಖಾದ್ಯ. ಖಾರವೇ ಪ್ರಧಾನವಾಗಿರುವ ಅದನ್ನು ದೊಡ್ಡ ದೊಡ್ಡ ಔತಣಕೂಟಕ್ಕೆ ಸಿದ್ಧಪಡಿಸುತ್ತಾರೆ. ಸಾಗ್ ಕೋಫ್ತಾ, ರಾಜ್‌ಮಾ ಔರ್ ಮಕಾಯ್, ತಖಾÅ ದಾಲ್, ಕೇಸರ್ ರೈಸ್, ಪರೋಟ, ಹಪ್ಪಳ, ಜಾಮೂನ್ ಊಟ ಇತರ ವಸ್ತುಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.