ನಾಸಾ ಸ್ಪರ್ಧೆ: ದೇಶದ ಎರಡು ತಂಡಗಳಿಗೆ ಪ್ರಶಸ್ತಿ
Team Udayavani, May 5, 2022, 7:40 AM IST
ವಾಷಿಂಗ್ಟನ್: ಅಮೆರಿಕದ ವಿಶ್ವವಿಖ್ಯಾತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ನಡೆಸುವ ವಾರ್ಷಿಕ “ಹ್ಯೂಮನ್ ಎಕ್ಸ್ಪ್ಲೊರೇಶನ್ ರೋವರ್ ಚಾಲೆಂಜ್’ನಲ್ಲಿ ಭಾರತದ 2 ವಿದ್ಯಾರ್ಥಿಗಳ ತಂಡಗಳು ಗೆಲುವು ಸಾಧಿಸಿವೆ.
ವಿಶ್ವಾದ್ಯಂತ ಒಟ್ಟು 91 ತಂಡಗಳು ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಶಾಲಾ ವಿಭಾಗದಲ್ಲಿ ಪಂಜಾಬ್ನ ಡೀಸೆಂಟ್ ಚಿಲ್ಡ್ರನ್ ಮಾಡೆಲ್ ಪ್ರಸಿಡೆನ್ಸಿ ಶಾಲೆ “ಸ್ಟೆಮ್ ಎಂಗೇಜ್ಮೆಂಟ್’ ಪ್ರಶಸ್ತಿ ಪಡೆದಿದೆ.
ತಮಿಳುನಾಡಿನ ವೆಲ್ಲೂರು ತಾಂತ್ರಿಕ ಸಂಸ್ಥೆ, ಕಾಲೇಜು ವಿವಿ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಏನಿದು ಸ್ಪರ್ಧೆ?: ನಾಸಾ ಚಾಲೆಂಜ್ನಲ್ಲಿ ವಿಶ್ವದ ವಿವಿಧ ಶಾಲಾಕಾಲೇಜುಗಳಿಗೆ ಮಾನವ ಚಾಲಿತ ರೋವರ್ಗಳನ್ನು (ಚಲಿಸುವ ಸಣ್ಣ ವಾಹನ) ನಿರ್ಮಿಸುವಂತೆ ಸವಾಲು ಹಾಕಿತ್ತು.
ಇವುಗಳನ್ನು ವಿನ್ಯಾಸ ಮಾಡಬೇಕು, ಸಿದ್ಧಪಡಿಸಬೇಕು, ಪರೀಕ್ಷೆ ಮಾಡಿ ಸಾಬೀತುಮಾಡಬೇಕು. ಇವುಗಳು ಚಂದ್ರ ಮತ್ತು ಮಂಗಳನ ನೆಲದಲ್ಲೂ ಚಲಿಸುವ ಸಾಮರ್ಥ್ಯ ಪಡೆದಿರಬೇಕು ಎನ್ನುವುದು ನಾಸಾದ ಸವಾಲಿನಲ್ಲಿ ಒಂದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.