NASA Developing: ಶನಿಯ ಉಪ ಗ್ರಹದತ್ತ “ಹಾವಿನ’ ಸಂಚಾರ!
ಎನ್‌ಸೆಲಡಸ್ ಅಧ್ಯಯನಕ್ಕೆ ಉರಗ ರೂಪದ ರೊಬೋಟ್
Team Udayavani, May 9, 2023, 7:45 AM IST
ವಾಷಿಂಗ್ಟನ್: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಪ್ರಯೋಗವೊಂದಕ್ಕೆ ಈಗ ನಾಸಾ ಮುಂದಾಗಿದೆ. ಶನಿ ಗ್ರಹದ ಉಪ ಗ್ರಹವಾದ “ಎನ್‌ಸೆಲಡಸ್’ನ ಅಂಗಳದಲ್ಲಿ ಅಧ್ಯಯನ ನಡೆಸಲು ಹಾವಿನ ಆಕಾರದ ರೊಬೋಟ್‌ವೊಂದನ್ನು ನಾಸಾ ಅಭಿವೃದ್ಧಿಪಡಿಸುತ್ತಿದೆ!
ಎನ್‌ಸೆಲಡಸ್‌ನಲ್ಲಿನ ಭೌಗೋಳಿಕ ರಚನೆಯನ್ನು ಅಭ್ಯಸಿಸಿ, ಅದು ವಾಸಯೋಗ್ಯವೇ, ಅಲ್ಲಿ ಜೀವಸಂಕುಲದ ಕುರುಹೇನಾದರೂ ಇದೆಯೇ ಎಂಬ ಬಗ್ಗೆ ಈ ರೊಬೋಟ್ ಅಧ್ಯಯನ ನಡೆಸಲಿದೆ.
ಈ ಅಧ್ಯಯನಕ್ಕೆಂದೇ ಎಕೊಬಯಾಲಜಿ ಎಕ್ಸ್‌ಟೆಂಟ್ ಲೈಫ್ ಸರ್ವೇಯರ್(ಈಲ್ಸ್) ಎಂಬ ಸಂಚಾರಿ ಸಾಧನವನ್ನು ನಾಸಾ ಅಭಿವೃದ್ಧಿಪಡಿಸುತ್ತಿದೆ. ಈ ಸಾಧನವು ನೋಡಲು ಥೇಟ್ ಹಾವಿನಂತಿರಲಿದೆ. ಉಬ್ಬು, ತಗ್ಗು ಸೇರಿದಂತೆ ಎಲ್ಲ ರೀತಿಯ ಭೂ ಪ್ರದೇಶದಲ್ಲೂ ಸುಗಮವಾಗಿ ಸಂಚರಿಸಲು ಆಗಬೇಕು ಎಂಬ ಕಾರಣದಿಂದಲೇ ಇದಕ್ಕೆ ಹಾವಿನ ಆಕಾರ ನೀಡಲಾಗುತ್ತಿದೆ.
ಏನಿದು ಎನ್‌ಸೆಲಡಸ್?
ಇದು ಶನಿ ಗ್ರಹದ ಉಪ ಗ್ರಹವಾಗಿದ್ದು, ಇದನ್ನು 1789ರಲ್ಲಿ ಆವಿಷ್ಕರಿಸಲಾಯಿತು. ಮಂಜುಗಡ್ಡೆ ಆವೃತ ಪುಟ್ಟ ಗ್ರಹ ಇದಾಗಿದ್ದು, ಇದನ್ನು “ವೈಜ್ಞಾನಿಕವಾಗಿ ಅತ್ಯಂತ ಆಸಕ್ತಿದಾಯಕ ತಾಣ’ ಎಂದು ಪರಿಗಣಿಸಲಾಗಿದೆ. ಎನ್‌ಸೆಲಡಸ್‌ನಲ್ಲಿನ ಮಂಜುಗಡ್ಡೆಯ ತಿರುಳಿನ ತಳಭಾಗದಲ್ಲಿ ದ್ರವರೂಪದ ಸಾಗರವೇ ಇದೆ. ಅಲ್ಲದೇ, ಇದರ ಮೇಲ್ಮೈ ತಾಪಮಾನ ಸುಮಾರು ಮೈನಸ್ 201 ಡಿ.ಸೆ.ನಷ್ಟಿದೆ ಎಂದು ಕ್ಯಾಸಿನಿ ಬಾಹ್ಯಾಕಾಶ ನೌಕೆಯ ದತ್ತಾಂಶ ಹೇಳಿದೆ.
ಅಧ್ಯಯನದ ಉದ್ದೇಶ
ಎನ್‌ಸೆಲಡಸ್‌ನಲ್ಲಿರುವ ಸಮುದ್ರ ಮತ್ತು ಆಂತರಿಕ ಉಷ್ಣತೆಯ ಕಾರಣಕ್ಕೆ ಇದು ವಾಸಯೋಗ್ಯವೇ ಎಂಬ ಪ್ರಶ್ನೆ ನಾಸಾಗೆ ಹುಟ್ಟಿದೆ. ಇದಕ್ಕೆ ಉತ್ತರ ಕಂಡುಕೊಳ್ಳಲೆಂದೇ ಈಲ್ಸ್ ಅನ್ನು ಕಳುಹಿಸಲಾಗುತ್ತದೆ. ಹಾವಿನ ರೂಪದಲ್ಲಿರುವ ಈಲ್ಸ್‌ನಲ್ಲಿ ಟ್ರ್ಯಾಕ್‌ಗಳು, ಬಿಗಿಹಿಡಿತದ ಮತ್ತು ನೀರಿನಡಿಯೂ ಸಂಚರಿಸಬಲ್ಲ ವ್ಯವಸ್ಥೆಯಿರುತ್ತದೆ. ಹೀಗಾಗಿ, ಎನ್‌ಸೆಲಡಸ್‌ನಲ್ಲಿನ ಸಮುದ್ರದ ಕಡೆಗೂ ಇದು ಹೋಗಲು ಸಾಧ್ಯವಾಗಲಿದೆ. ಈ ಮೂಲಕ ಹಿಂದೆಂದೂ ಆವಿಷ್ಕರಿಸಿರದ ಪ್ರದೇಶಗಳಲ್ಲಿ ಅಧ್ಯಯನ ನಡೆಸಲು ಅನುಕೂಲವಾಗಲಿದೆ ಎನ್ನುತ್ತದೆ ನಾಸಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.