![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Nov 24, 2021, 9:45 PM IST
ವಾಷಿಂಗ್ಟನ್: ವಿಶ್ವದ ಮೊಟ್ಟಮೊದಲ ಉಪಗ್ರಹಾಧಾರಿತ ರಕ್ಷಣಾ ವ್ಯವಸ್ಥೆ ಎಂದೇ ಖ್ಯಾತವಾಗಿರುವ ಡಾರ್ಟ್ ಅನ್ನು ನಭಕ್ಕೆ ಉಡಾಯಿಸಲಾಗಿದೆ.
ಭಾರತೀಯ ಕಾಲಮಾನದ ಪ್ರಕಾರ ಬುಧವಾರ ಬೆಳಗ್ಗೆ 11:51ಕ್ಕೆ ಉಡಾವಣೆ ಮಾಡಲಾಯಿತು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ , ನಾಸಾ ಅದನ್ನು ಅಭಿವೃದ್ಧಿಪಡಿಸಿದೆ. ಭೂಮಿಯಿಂದ ಲಕ್ಷಾನುಲಕ್ಷ ಕಿ.ಮೀ. ದೂರದಲ್ಲಿರುವ “ಡಿಮಾರ್ಫಸ್’ ಎಂಬ ಕ್ಷುದ್ರಗ್ರಹವನ್ನು ನಾಶ ಮಾಡುವ ಉದ್ದೇಶದಿಂದ ಈ ಕ್ಷಿಪಣಿ ಮಾದರಿಯ ಅಸ್ತ್ರ ಪ್ರಯೋಗ ಮಾಡಲಾಗಿದೆ.
“ಸ್ಪೇಸ್ ಎಕ್ಸ್‌ನ ಫಾಲ್ಕನ್ 9′ ರಾಕೆಟ್‌ನ ಮೂಲಕ ಆಕಾಶಕ್ಕೆ ನೆಗೆದ ಈ ಕ್ಷಿಪಣಿ, ಉಡಾವಣೆಯಾಗಿ 55 ನಿಮಿಷಗಳ ನಂತರ ಫಾಲ್ಕನ್ ರಾಕೆಟ್‌ನಿಂದ ಬೇರ್ಪಟ್ಟಿದ್ದು, ಇದು ಸೂರ್ಯನಿರುವ ದಿಕ್ಕಿನ ಕಡೆಗೆ ಸಾಗುತ್ತಿದೆ ಎಂದು ನಾಸಾ ತಿಳಿಸಿದೆ.
ಇದನ್ನೂ ಓದಿ:ಸುಬ್ರಹ್ಮಣ್ಯ: ಬಳ್ಪ ಸಮೀಪ ರಸ್ತೆಯಲ್ಲೇ ಹೊತ್ತಿ ಉರಿದ ಕಾರು
ಡಿಕ್ಕಿಹೊಡೆದು ನಾಶ:
ಈ ಕ್ಷಿಪಣಿಯು 160 ಮೀಟರ್‌ನಷ್ಟು ವ್ಯಾಸವಿರುವ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದು ಅದನ್ನು ನಾಶಪಡಿಸಲಿದೆ. ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಭೀತಿ ಆವರಿಸಿತ್ತು. ಆದರೆ, ಕ್ರಮೇಣ ಅದು ಭೂಮಿಗೆ ಅಪ್ಪಳಿಸುವುದಿಲ್ಲ ಎಂಬುದು ಖಾತ್ರಿಯಾಯಿತಾದರೂ ಭವಿಷ್ಯದಲ್ಲಿ ಇಂಥ ಕ್ಷುದ್ರಗ್ರಹಗಳ ಅಪಾಯವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿರುವ ತಂತ್ರಜ್ಞಾನದ ಕಾರ್ಯವೈಖರಿಯನ್ನು ಮನಗಾಣಲು ಈ ಕ್ಷಿಪಣಿಯನ್ನು ಹಾರಿಬಿಡಲಾಗಿದೆ.
ಬಾಹ್ಯಾಕಾಶದಲ್ಲಿ ಇದು ಸೆಕೆಂಡಿಗೆ 6.6 ಕಿ.ಮೀ. ಅಥವಾ ಗಂಟೆಗೆ 24,000 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದು ಸದ್ಯದಲ್ಲೇ “ಡಿಮಾರ್ಫಸ್’ಗೆ ಅಪ್ಪಳಿಸಲಿದೆ. 2022ರ ಸೆ. 26ರಿಂದ ಅ. 1ರ ಅವಧಿಯಲ್ಲಿ ಈ ಢಿಕ್ಕಿ ಸಂಭವಿಸುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.