ಯಶಸ್ವಿಯಾಗಿ ಕ್ಷುದ್ರಗ್ರಹಕ್ಕೆ ಡಿಕ್ಕಿಯಾದ ಡಾರ್ಟ್! ಮೊದಲ ಬಾರಿಗೆ ನಾಸಾದಿಂದ ಇಂಥ ಪ್ರಯೋಗ
ಕ್ಷುದ್ರಗ್ರಹದ ಅಪ್ಪಳಿಸುವಿಕೆಯಿಂದ ಭೂಮಿಯನ್ನು ರಕ್ಷಿಸಲು ಈ ಪ್ರಯತ್ನ
Team Udayavani, Sep 28, 2022, 7:50 AM IST
ವಾಷಿಂಗ್ಟನ್: ಬಾಹ್ಯಾಕಾಶದಲ್ಲಿ ಸತತ 10 ತಿಂಗಳ ಕಾಲ ಹಾರಾಟ ನಡೆಸುತ್ತಿದ್ದ ನಾಸಾದ “ಡಾರ್ಟ್’ ಬಾಹ್ಯಾಕಾಶ ನೌಕೆಯು ಮಂಗಳವಾರ ಯಶಸ್ವಿಯಾಗಿ ಕ್ಷುದ್ರಗ್ರಹವೊಂದಕ್ಕೆ ಅಪ್ಪಳಿಸಿದೆ.
ಭವಿಷ್ಯದಲ್ಲಿ ಭೂಮಿಗೆ ಅಪ್ಪಳಿಸಿ ಹಾನಿ ಉಂಟುಮಾಡಬಹುದಾದ ಬಾಹ್ಯಾಕಾಶ ಶಿಲೆಗಳನ್ನು ಸುರಕ್ಷಿತವಾಗಿ ತಳ್ಳಬಹುದೇ ಎಂಬುದನ್ನು ಪರೀಕ್ಷಿಸುವುದೇ ಈ ಯೋಜನೆಯ ಉದ್ದೇಶವಾಗಿತ್ತು. ಇದೇ ಮೊದಲ ಬಾರಿಗೆ ನಾಸಾ ಇಂಥದ್ದೊಂದು ಪರೀಕ್ಷೆಗೆ ಕೈಹಾಕಿದೆ.
ಜಗತ್ತಿನ ಮೊದಲ ಗ್ರಹೀಯ ರಕ್ಷಣಾ ತಂತ್ರಜ್ಞಾನ ಎಂದು ಪರಿಗಣಿಸಲ್ಪಟ್ಟಿರುವ ದಿ ಡಬಲ್ ಆ್ಯಸ್ಟರಾಯ್ಡ ರೀಡೈರೆಕ್ಷನ್ ಟೆಸ್ಟ್(ಡಾರ್ಟ್) ಎಂಬ ಬಾಹ್ಯಾಕಾಶ ನೌಕೆಯು ಭೂಮಿಯಿಂದ 6.8 ದಶಲಕ್ಷ ಮೈಲು ದೂರದಲ್ಲಿದ್ದ ಕೇವಲ 160 ಮೀಟರ್ ವ್ಯಾಸ ಹೊಂದಿರುವ ಡೈಮಾಫìಸ್ ಎಂಬ ಕ್ಷುದ್ರಗ್ರಹಕ್ಕೆ ಅಪ್ಪಳಿಸಿದೆ. ಡೈಮಾಫìಸ್ ಕ್ಷುದ್ರಗ್ರಹವು ಬರೋಬ್ಬರಿ 780 ಮೀಟರ್‌ನ ಡಿಡಿಮೋಸ್ ಎಂಬ ದೊಡ್ಡ ಕ್ಷುದ್ರಗ್ರಹದ ಕಕ್ಷೆಯಲ್ಲಿ ಸುತ್ತುತ್ತಿದೆ.
ಬಾಹ್ಯಾಕಾಶ ನೌಕೆಯು ಅಪ್ಪಳಿಸುವ ತೀವ್ರತೆಗೆ ಕ್ಷುದ್ರಗ್ರಹವು ಅಲುಗಾಡುವುದೇ ಅಥವಾ ತಳ್ಳಲ್ಪಡುವುದೇ ಎಂಬುದನ್ನು ನಾಸಾ ಅಧ್ಯಯನ ನಡೆಸಲಿದೆ. ಮಂಗಳವಾರದ ಪರೀಕ್ಷೆಯ ಫಲಿತಾಂಶ ತಿಳಿಯಲು ಇನ್ನೂ ಕೆಲವು ವಾರಗಳು ಬೇಕಾಗಬಹುದು.
ಭೂಮಿಯಲ್ಲಿರುವಂಥ ದೂರದರ್ಶಕಗಳನ್ನು ಬಳಸಿಕೊಂಡು ಅದನ್ನು ಅರಿಯಲಾಗುತ್ತದೆ. ನೌಕೆಯ ಅಪ್ಪಳಿಸುವಿಕೆಯಿಂದ ಕ್ಷುದ್ರಗ್ರಹವನ್ನು ತಳ್ಳಲು ಸಾಧ್ಯವಾದರೆ, ಭವಿಷ್ಯದಲ್ಲಿ ಭೂಮಿಯನ್ನು ರಕ್ಷಿಸಲು ಅನುಕೂಲವಾಗುತ್ತದೆ ಎಂದು ನಾಸಾ ಹೇಳಿದೆ.
IMPACT SUCCESS! Watch from #DARTMIssion’s DRACO Camera, as the vending machine-sized spacecraft successfully collides with asteroid Dimorphos, which is the size of a football stadium and poses no threat to Earth. pic.twitter.com/7bXipPkjWD
— NASA (@NASA) September 26, 2022
ರಕ್ಷಣಾತ್ಮಕ ಕ್ರಮ ಅತಿ ಮುಖ್ಯ
ನಾಸಾದ ಈ ಯೋಜನೆಯಿಂದಾಗಿ ಭೂಮಿಯನ್ನು ಭವಿಷ್ಯದ ಸಂಭಾವ್ಯ ಕ್ಷುದ್ರಗ್ರಹ ಅಪ್ಪಳಿಸುವಿಕೆಯಿಂದ ರಕ್ಷಿಸಲು ಸಾಧ್ಯವಾಗಲಿದೆ. ಸುಮಾರು 66 ದಶಲಕ್ಷ ವರ್ಷಗಳ ಹಿಂದೆ ಬೃಹತ್ ಕ್ಷುದ್ರಗ್ರಹ ಅಪ್ಪಳಿಸಿದ್ದರಿಂದಲೇ ಭೂಮಿಯಲ್ಲಿದ್ದ ಡೈನೋಸಾರ್ ಸಂತತಿ ಅಳಿಸಿಹೋಯಿತು. ಭೂಮಿಯು ಹಲವು ಕ್ಷುದ್ರಗಳಿಂದ ಸುತ್ತುವರಿದಿದೆ. ಆ ಪೈಕಿ ಕೆಲವು ಅತ್ಯಂತ ಅಪಾಯಕಾರಿ. ಮುಂದೆ ಭೂಮಿಗೆ ಅವು ಅಪ್ಪಳಿಸದಂತೆ ರಕ್ಷಣಾತ್ಮಕ ಕ್ರಮಗಳನ್ನು ನಾವು ಕೈಗೊಳ್ಳಬೇಕಾದ್ದು ಮುಖ್ಯ ಎಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆ್ಯಸ್ಟ್ರೋಫಿಸಿಕ್ಸ್ ವಿಜ್ಞಾನಿ ಕ್ರಿಸಿ#ನ್ ಕಾರ್ತಿಕ್ ಹೇಳಿದ್ದಾರೆ.
ಎಷ್ಟು ದೂರದಲ್ಲಿತ್ತು ಕ್ಷುದ್ರಗ್ರಹ? – 6.8 ದಶಲಕ್ಷ ಮೈಲು
ಕ್ಷುದ್ರಗ್ರಹದ ವ್ಯಾಸ – 160 ಮೀಟರ್
ಡಾರ್ಟ್ ನೌಕೆಯ ತೂಕ- 570 ಕೆ.ಜಿ.
ಅಪ್ಪಳಿಸಿದ ವೇಗ ಗಂಟೆಗೆ- 22,530 ಕಿ.ಮೀ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.