“ಭಗವಂತನ ಹಸ್ತ’ ಕಂಡು ನಿಬ್ಬೆರಗಾದ ಜನ!
Team Udayavani, Sep 27, 2021, 6:51 PM IST
ಲಂಡನ್: ಬಾಹ್ಯಾಕಾಶ ಎನ್ನುವುದು ಒಂದು ಅಚ್ಚರಿಯ ತಾಣ. ಈ ವಿಸ್ಮಯಗಳ ಕೂಪದಲ್ಲಿ ಸೆರೆಹಿಡಿಯಲಾಗುವ ಫೋಟೋಗಳನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿರುತ್ತದೆ.
ಅದೇ ರೀತಿ ಅಪ್‌ಲೋಡ್ ಆದ ಹೊಸ ಫೋಟೋ ಇದು. ಇದನ್ನು ನೆಟ್ಟಿಗರು “ಹ್ಯಾಂಡ್ ಆಫ್ ಗಾಡ್'(ಭಗವಂತನ ಹಸ್ತ) ಎಂದು ಬಣ್ಣಿಸಿದ್ದಾರೆ.
“ಬಾಹ್ಯಾಕಾಶದ ಕಗ್ಗತ್ತಲಲ್ಲೊಂದು ಚಿನ್ನದ ಬಣ್ಣದಿಂದ ಹೊಳೆಯುತ್ತಿರುವ ಆಕಾರ. ನೋಡಲು ಮನುಷ್ಯನ “ಕೈ’ಯನ್ನು ಹೋಲುವ ಆಕಾರವಿದು. ಯಾವುದೋ ಅಗೋಚರ ಶಕ್ತಿಯೊಂದು ಭೂಮಿಯನ್ನು ಹರಸಿದಂತೆ’ ಭಾಸವಾಗುವ ಫೋಟೋ ಇದು.
ನೆಟ್ಟಿಗರು ಏನೇ ಹೇಳಿದರೂ, ಈ ಚಿತ್ರದ ಕುರಿತು ವಿವರಣೆ ನೀಡಿರುವ ನಾಸಾ, “ಇದು ಸೂಪರ್‌ನೋವಾ ಸ್ಫೋಟದಿಂದ ನಕ್ಷತ್ರವೊಂದು ಜೀವ ಕಳೆದುಕೊಂಡು ಉಂಟಾದ “ಕೈ’ಯ ಆಕಾರ. ಸ್ಫೋಟದ ತೀವ್ರತೆಯಿಂದ ಹೊರಬಂದ “ಪಲ್ಸರ್’ ಎಂಬ ಚಿನ್ನದ ಬಣ್ಣದ ಕಣಗಳು ಈ ಆಕಾರವನ್ನು ತಳೆದಿವೆ’ ಎಂದು ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.