ಷರೀಫ್ಗೆ ಜೈಲಲ್ಲಿ ರಾಜಾತಿಥ್ಯ
Team Udayavani, Jul 15, 2018, 6:00 AM IST
ಇಸ್ಲಾಮಾಬಾದ್/ಹೊಸದಿಲ್ಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಪುತ್ರಿ ಮರ್ಯಮ್‌ಗೆ ಜೈಲು ಕೋಣೆಯಲ್ಲೇ ಸಕಲ ರಾಜಾತೀಥ್ಯ ಘಿಕಲ್ಪಿಸಲಾಗಿದೆ.
ಇವರನ್ನು ಸಮಾಜದಲ್ಲಿನ ಸ್ಥಾನ ಮತ್ತು ಸುಶಿಕ್ಷಿತರು ಎಂಬ ಕಾರಣಕ್ಕೆ “ಬಿ’ ದರ್ಜೆ ಕೈದಿಗಳು ಎಂಬ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಈ ಇಬ್ಬರಿಗೆ ಏಸಿ, ಮಂಚ, ಕುರ್ಚಿ, ಬಟ್ಟೆ ತೊಳೆಯಲು, ಅಡುಗೆ ಮಾಡಿಕೊಳ್ಳಲು ಬೇಕಾದ ಯಂತ್ರಗಳ ವ್ಯವಸ್ಥೆ ಮಾಡಿಕೊಡ ಲಾಗಿದೆ. ಸದ್ಯಕ್ಕೆ ಇವರನ್ನು ಅಡಿಯಾಲ ಜೈಲಿನಲ್ಲಿ ಇಡಲಾಗಿದೆ.
ಇದಷ್ಟೇ ಅಲ್ಲ, ಇವರಿಗೆ ಯಾವುದೇ ದೈಹಿಕ ದಂಡನೆಯಾಗುವಂಥ ಕೆಲಸವನ್ನೂ ಜೈಲಿನಲ್ಲಿ ನೀಡಲಾಗುವುದಿಲ್ಲ. ಬದಲಾಗಿ ಸಿ ದರ್ಜೆ, ಅಂದರೆ ಓದಲು, ಬರೆಯಲು ಬಾರದವರಿಗೆ ಹೇಳಿಕೊಡುವ ಶಿಕ್ಷಕ ಕೆಲಸವನ್ನು ನೀಡ ಲಾಗುತ್ತದೆ. ಇದೇ ವೇಳೆ, ಷರೀಫ್ ಹಾಗೂ ಪುತ್ರಿಗೆ ಅವರ ಕುಟುಂಬ ಸದಸ್ಯರ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ.
50 ಮಂದಿಗೆ ಗಾಯ: ಈ ಮಧ್ಯೆ ಇವರಿಬ್ಬರ ಬಂಧನದ ನಂತರ ಪಾಕಿಸ್ಥಾನದ ಕೆಲವೆಡೆ ಘರ್ಷಣೆಗಳಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸಾವಿನ ಸಂಖ್ಯೆ 150ಕ್ಕೆ ಏರಿಕೆ: ಬಲೂಚಿಸ್ಥಾನ ಸೇರಿದಂತೆ ಪಾಕಿಸ್ಥಾನದ ವಿವಿಧೆಡೆ ಸಂಭವಿಸಿದ ಮೂರು ಸ್ಫೋಟಗಳಲ್ಲಿ ಸಾವನ್ನ ಪ್ಪಿದವರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್