ಇಮ್ರಾನ್‌ಗೆ ಗೇಟ್‌ಪಾಸ್; ನವಾಜ್‌ಗೆ ಸ್ವಾಗತ?
ಮಾಜಿ ಪಿಎಂಗೆ ಮಣೆ ಹಾಕಲು ಪಾಕ್ ಸೇನೆ ಒಲವು
Team Udayavani, Nov 17, 2021, 6:20 AM IST
ಇಸ್ಲಾಮಾಬಾದ್: ಸದ್ಯ ದೇಶಭ್ರಷ್ಟರಾಗಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಾಸಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಶೀಘ್ರವೇ ದೇಶಕ್ಕೆ ಆಗಮಿಸಲಿದ್ದಾರೆಯೇ?
ಹಾಲಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಸೇನಾ ಮುಖ್ಯಸ್ಥ ಜ.ಖಮರ್ ಜಾವೇದ್ ಬಾಜ್ವಾ ನಡುವಿನ ವೈಮನಸ್ಸು ತಣಿಯದೇ ಇರುವ ಹಿನ್ನೆಲೆಯಲ್ಲಿ ಪಾಕ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಈ ಅಂಶವನ್ನು ಪುಷ್ಟೀಕರಿಸುತ್ತಿವೆ.
ಸೇನೆಯ ಹಿರಿಯ ಅಧಿಕಾರಿಗಳೇ ಪಾಕಿಸ್ತಾನದ ರಾಜಕೀಯದ ನೇತೃತ್ವ ವಹಿಸಲು ಮಾಜಿ ಪ್ರಧಾನಿ ಆಗಮಿಸಬೇಕಾದ ಅಗತ್ಯವಿದೆ ಎಂದು ಅನೌಪಚಾರಿಕವಾಗಿ ಸೂಚಿಸಿದ್ದಾರೆ.
ಪಾಕಿಸ್ತಾನ ಮುಸ್ಲಿಂ ಲೀಗ್- ನವಾಜ್ (ಪಿಎಂಎಲ್-ಎನ್)ನ ಪ್ರಮುಖ ನೇತಾರರೂ ಆಗಿರುವ ನವಾಜ್ ಷರೀಫ್ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. 2019ರಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಅವರನ್ನು ಘೋಷಿತ ಅಪರಾಧಿ ಎಂದು ಪ್ರಕಟಿಸಿತ್ತು.
ಇದನ್ನೂ ಓದಿ:ದ್ರಾವಿಡ್ ಸರ್ ಜತೆ ಕೆಲಸ ಮಾಡಲು ಕಾತರ: ಕೆ.ಎಲ್. ರಾಹುಲ್
ಮತ್ತೊಂದು ಪ್ರಕರಣದಲ್ಲಿ ನಿಯಮ ಮೀರಿ ಹೂಡಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಏಳು ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ. ಅನಾರೋಗ್ಯದ ನಿಮಿತ್ತ ಷರೀಫ್ಗೆ ಲಾಹೋರ್ ಹೈಕೋರ್ಟ್ ಯು.ಕೆ.ಗೆ ತೆರಳಿ ಚಿಕಿತ್ಸೆ ಪಡೆಯಲು ಅನುಮತಿ ನೀಡಿತ್ತು. ಆ ಬಳಿಕ ಅವರು ಪಾಕಿಸ್ತಾನ ಪ್ರವೇಶ ಮಾಡಿಲ್ಲ. ಒಂದು ವೇಳೆ ಷರೀಫ್ ನ.20ರೊಳಗೆ ಪಾಕಿಸ್ತಾನ ಪ್ರವೇಶ ಮಾಡಿದ್ದೇ ಆದರೆ, ಹಾಲಿ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆ ನೀಡಲೇಬೇಕಾಗುತ್ತದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.