![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Aug 7, 2022, 7:50 AM IST
ತಲ್ಲಹಸ್ಸೀ (ಫ್ಲೋರಿಡಾ): ಸಮುದ್ರದ ದಡದಲ್ಲಿ ಮೊಟ್ಟೆ ಇಟ್ಟು ಹೋಗುತ್ತಿರುವ ಆಮೆಗಳಲ್ಲಿ ಇತ್ತೀಚೆಗೆ ಗಂಡು ಆಮೆಗಳು ಹುಟ್ಟುತ್ತಲೇ ಇಲ್ಲ! ಮೊಟ್ಟೆಗಳಿಂದ ಶೇ. 99ರಷ್ಟು ಬರೀ ಹೆಣ್ಣು ಆಮೆಗಳೇ ಜನ್ಮ ಪಡೆಯುತ್ತಿವೆ. ಫ್ಲೋರಿಡಾದಲ್ಲಿ ಕರಾವಳಿ ತೀರದಲ್ಲಿ ನಡೆಸಲಾಗಿರುವ ಅಧ್ಯಯನದಿಂದ ಈ ವಿಚಾರ ಬೆಳಕಿಗೆ ಬಂದಿದೆ. ಅದಕ್ಕೆ ಜಾಗತಿಕ ತಾಪಮಾನ ಕಾರಣ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ!
ಆಮೆಗಳ ಲಿಂಗ, ಇತರ ಪ್ರಾಣಿಗಳಂತೆ ಅನುವಂಶಿಕವಲ್ಲ. ಅದು ಸಮುದ್ರದ ಸುತ್ತಲಿನ ವಾತಾವರಣದ ಉಷ್ಣಾಂಶವನ್ನು ಅವಲಂಬಿಸಿರುತ್ತದೆ. ಹೆಣ್ಣು ಆಮೆಗಳು, ಸಮುದ್ರದ ದಡಕ್ಕೆ ಬಂದು ಮೊಟ್ಟೆಯಿಟ್ಟು ಹೋಗುತ್ತವೆ. ಮರಳಿನಲ್ಲಿರುವ ಉಷ್ಣಾಂಶ 27 ಡಿಗ್ರಿ ಸೆಲ್ಸಿಯೆಸ್‌ಗಿಂತ ಕಡಿಮೆಯಿದ್ದರೆ, ಮೊಟ್ಟೆಯಲ್ಲಿರುವ ಭ್ರೂಣ ಗಂಡು ಆಮೆಯಾಗಿ ಮಾರ್ಪಡುತ್ತದೆ. 31 ಡಿಗ್ರಿ ಸೆಲ್ಸಿಯೆಸ್‌ಗಿಂತ ಹೆಚ್ಚಿದ್ದರೆ ಅದು ಹೆಣ್ಣು ಆಮೆಯಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ತಾಪಮಾನ ಏರಿಕೆಯಾಗಿರುವುದರಿಂದಾಗಿ ಶೇ. 99ರಷ್ಟು ಮೊಟ್ಟೆಗಳಿಂದ ಹೆಣ್ಣು ಆಮೆಗಳೇ ಜನಿಸುತ್ತಿವೆ ಎಂದು ಅಧ್ಯಯನ ವರದಿ ಹೇಳಿದೆ. 2018ರ ವರದಿಯ ಪ್ರಕಾರ ಆಸ್ಟ್ರೇಲಿಯಾದಲ್ಲಿ ಶೇ.90 ಆಮೆಗಳು ಹೆಣ್ಣಾಗಿದ್ದರೆ, ಬೇರೆ ತಂಪಾದ ರಾಷ್ಟ್ರಗಳಲ್ಲಿ ಶೇ.65ರಿಂದ ಶೇ.69 ಹೆಣ್ಣು ಆಮೆಗಳಾಗಿವೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಪರಿಣಾಮವೇನು?
ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ, ಹೆಣ್ಣು ಆಮೆಗಳೇ ಹೆಚ್ಚು ಜನಿಸುತ್ತಾ ಹೋದರೆ, ಮುಂದೊಂದು ದಿನ ಆಮೆಗಳ ಆಮೆಗಳ ಸಂತಾನೋತ್ಪತ್ತಿಗೆ ಸಮಸ್ಯೆಯಾಗಿ ಅವುಗಳ ಸಂತತಿಯೇ ಅಳಿಸಿಹೋಗುವ ಸಾಧ್ಯತೆಗಳಿರುತ್ತವೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.