ಸಂಗಾತಿಯ ಪ್ರೀತಿ ಹೆಚ್ಚಬೇಕಾ?; ಅದಕ್ಕೆ ನಿರ್ಲಕ್ಷ್ಯವೇ ಮದ್ದು!
Team Udayavani, Oct 15, 2019, 9:30 PM IST
ವಾಷಿಂಗ್ಟನ್: ದಿನ ಬೆಳಗ್ಗಾದರೆ ಅವನಿಗೆ/ಳಿಗೆ ನನ್ನ ಮೇಲೆ ಆಸಕ್ತಿ ಕಡಿಮೆಯಾಗಿದೆ ಅಂತ ಅನಿಸ್ತಿದೆಯಾ? ಮದುವೆಯಾದ ಮೇಲೆ ನನ್ನ ಕಡೆ ಗಮನವೇ ಇಲ್ಲ ಎಂಬ ದೂರು ನಿಮ್ಮದೇ? ಹಾಗಾದರೆ ಇದಕ್ಕೊಂದು ಒಳ್ಳೇ ಔಷಧವಿದೆ. ಅದೇ ನಿರ್ಲಕ್ಷ್ಯ!
ಸಂಗಾತಿ ನಮ್ಮನ್ನು ಪ್ರೀತಿಸಬೇಕು, ಬೇಕು ಬೇಕಾದ್ದನ್ನೆಲ್ಲ ಕೇಳುತ್ತಿರಬೇಕು ಎನ್ನುವ ಆಸೆ ಎಲ್ಲರಿಗೂ ಇದ್ದಿದ್ದೇ. ಆದರೆ ಪ್ರೀತಿ ಕಡಿಮೆಯಾಗುತ್ತಿದೆ ಎಂದು ಗೊತ್ತಾಗುತ್ತಿರುವಾಗ ಇನ್ನಿಲ್ಲದ ಕಸಿವಿಸಿ. ಇಂಥದ್ದರಿಂದ ಪಾರಾಗಲು ಅವರನ್ನು ನಿರ್ಲಕ್ಷ್ಯ ಮಾಡಿಬಿಡಿ ಎನ್ನುತ್ತಿದೆ ಸಮೀಕ್ಷೆ. ಸಂಗಾತಿಯನ್ನು ನಿರ್ಲಕ್ಷ್ಯ ಮಾಡುವುದರಿಂದ ಅವನಿಗೆ/ಅವಳಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ಇದರಿಂದ ಜಗಳ ಏನೂ ಸೃಷ್ಟಿಯಾಗುವುದಿಲ್ಲ. ನಿರ್ಲಕ್ಷ್ಯಕ್ಕೆ ಪ್ರತಿಯಾಗಿ, ಪ್ರೀತಿ ಒಲಿಸುವುದಿಕೆ ಶುರುವಾಗುತ್ತದೆ ಎಂದು ಸಮೀಕ್ಷೆ ಹೇಳಿದೆ. ಅಷ್ಟೇ ಅಲ್ಲ ಹೀಗೆ ನಿರ್ಲಕ್ಷ್ಯ ಮಾಡುವುದರಿಂದ ಸಂಬಂಧವೂ ಗಟ್ಟಿಯಾಗುತ್ತದಂತೆ. ಈ ಸಮೀಕ್ಷೆಯನ್ನು ಜರ್ನಲ್ ಆಫ್ ಪರ್ಸ್‌ನಾಲಿಟಿ ಆ್ಯಂಡ್ ಸೋಷಿಯಲ್ ಸೈಕಾಲಾಜಿ ನಿಯತಕಾಲಿಕೆ ವರದಿ ಮಾಡಿದೆ.
ಇನ್ನೂ ಸಮೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಿದ್ದು, ಒಟ್ಟು ನಾಲ್ಕು ಗುಂಪುಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ ಎರಡು ಗುಂಪುಗಳು ನವವಿವಾಹಿತರಾಗಿದ್ದು, ಇನ್ನುಳಿದ ಎರಡು ಗುಂಪುಗಳಲ್ಲಿ ವಿವಾಹವಾಗಿ 5 ವರ್ಷ ಕಳೆದಿರುವ ದಂಪತಿಗಳಿದ್ದರು ಎಂದು ಸಮೀಕ್ಷೆಯ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.