![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 9, 2019, 3:53 PM IST
ಕಾಠ್ಮಂಡು : ನೇಪಾಲದಲ್ಲಿ 14 ವರ್ಷದ ಬಾಲಕಿ ಮತ್ತು ಆಕೆಗಿಂತ 1 ವರ್ಷ ಕಿರಿಯನಾಗಿರುವ ಆಕೆಯ ಪತಿ ಈಗ ಹೆತ್ತವರಾಗಿದ್ದಾರೆ.
ಈ ದಂಪತಿಯ ಮದುವೆಯನ್ನು ನೋಂದಾಯಿಸುವುದು ಮತ್ತು ಅವರ ನವಜಾತ ಗಂಡು ಶಿಶುವಿಗೆ ಜನನ ಪರಿಪತ್ರ ನೀಡುವುದು ನೇಪಾಲದ ಅಧಿಕಾರಿಗಳಿಗೆ ಈಗ ಕಾನೂನು ತೊಡಕಿನ ವಿಷಯವಾಗಿ ಪರಿಣಮಿಸಿದೆ.
ನೇಪಾಲದಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಕಾನೂನು ಸಮ್ಮತ ಮದುವೆಯ ವಯಸ್ಸು 20.
ನವಜಾತ ಗಂಡು ಶಿಶುವಿನ ತಂದೆಯಾಗಿರುವ 13 ವರ್ಷದ ರಮೇಶ್ ತಮಾಂಗ್ ಈಗ ಐದನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಆತ ಪ್ರೀತಿಸಿದ ಬಾಲಕಿ 6ನೇ ತರಗತಿಯಲ್ಲಿ ಓದುತ್ತಿದ್ದು ಆಕೆಯ ಹೆಸರು ಪಬಿತ್ರಾ ತಮಾಂಗ್. ಈಚೆಗೆ ಆಕೆ ಶಾಲೆ ತೊರೆದಿದ್ದಾಳೆ.
ರಮೇಶ್ ಮತ್ತು ಪಬಿತ್ರಾ ನಡುವಿನ ಒಂದು ವರ್ಷದ ಪತಿ-ಪತ್ನಿ ಸಂಬಂಧದಲ್ಲಿ ಈಗ ಎರಡು ತಿಂಗಳ ಹಿಂದೆ ಅವರಿಗೆ ಗಂಡು ಮಗು ಜನಿಸಿದೆ ಎಂದು ಹಿಮಾಲಯನ್ ಟೈಮ್ಸ್ ಇಂದು ಬುಧವಾರ ವರದಿ ಮಾಡಿದೆ.
ಇವರ ಮದುವೆ ಮತ್ತು ಇವರಿಗೆ ಜನಿಸಿರುವ ಗಂಡು ಮಗುವಿಗೆ ಜನನ ಪರಿಪತ್ರ ನೀಡಲು ಕಾನೂನು ಪ್ರಕಾರ ಸಾಧ್ಯವಿಲ್ಲ ಎಂದು ರೂಬೇ ಕಣಿವೆಯ ಮುನಿಸಿಪಾಲಿಟಿ ಅಧ್ಯಕ್ಷ ಧೀರಜ್ ತಮಾಂಗ್ ಹೇಳಿದ್ದಾರೆ.
ಈ ದಂಪತಿ ಅತೀ ದೂರದ ರೂಬೇ ಕಣಿವೆಯ ಧದಿಂಗ್ ಜಿಲ್ಲೆಯ (ಇಲ್ಲಿಂದ ಸುಮಾರು 80 ಕಿ.ಮೀ. ದೂರ) ಗ್ರಾಮೀಣ ಮುನಿಸಿಪಾಲಿಟಿಯ ನಿವಾಸಿಗಳು.
ರಮೇಶ್ ಮತ್ತು ಪಬಿತ್ರಾ ಇನ್ನೂ ವಿಧ್ಯುಕ್ತವಾಗಿ ಮದುವೆಯಾಗಿಲ್ಲ. ಏಕೆಂದರೆ ಅವರ ತಮಾಂಗ್ ಸಮುದಾಯದಲ್ಲಿ ಹುಡುಗನು ತಾನು ಇಷ್ಟಪಡುವ ಹುಡುಗಿಯನ್ನು ಪತ್ನಿ ಎಂದು ಪರಿಗಣಿಸಿ ಆಕೆಯ ಜತೆಗೆ ಇರುವುದಕ್ಕೆ ಮತ್ತು ಅನಂತರದಲ್ಲಿ ವಿಧ್ಯುಕ್ತವಾಗಿ ಮದುವೆಯಾಗುವುದಕ್ಕೆ ಅವಕಾಶವಿದೆ.
ರಮೇಶ್ ಮತ್ತು ಪಬಿತ್ರಾ ಗೆ ಜನಿಸಿರುವ ಗಂಡು ಮಗು ಆರೋಗ್ಯದಿಂದಿದೆ; ಆದರೆ ಅದರ ಎರಡೂ ಕೈಗಳಲ್ಲಿ ಮಧ್ಯದ ಬೆರಳು ಇಲ್ಲ. ಧದಿಂಗ್‌ನ ಜಿಲ್ಲಾ ಆರೋಗ್ಯಾಧಿಕಾರಿ ಬಿಷ್ಣು ರಿಜಾಲ್ ಅವರ ಪ್ರಕಾರ ಅಪೌಷ್ಟಿಕತೆಯೇ ಇದಕ್ಕೆ ಕಾರಣವಾಗಿದೆ ಮತ್ತು ತಾಯಿಯ ಮೊಲೆ ಹಾಲು ಇಲ್ಲದಿರುವ ಕಾರಣ ಮಗುವಿಗೆ ಈಗಿನ್ನು ಆರೋಗ್ಯ ಸಮಸ್ಯೆ ಎದುರಾಗುವ ಭೀತಿ ಇದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.