Neuralink; ಮತ್ತೊಬ್ಬನ ಮೆದುಳಿಗೆ ಚಿಪ್ : ಏನಿದು ತಂತ್ರಜ್ಞಾನ?
ಇನ್ನೂ 20-30 ರೋಗಿಗಳಿಗೆ ಅಳವಡಿಸುವ ಗುರಿ.. ಮಸ್ಕ್ ಸಂಸ್ಥೆಯಿಂದ 3ನೇ ವ್ಯಕ್ತಿಗೆ ಚಿಪ್ ಅಳವಡಿಕೆ
Team Udayavani, Jan 12, 2025, 6:55 AM IST
ಹೊಸದಿಲ್ಲಿ: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ನ್ಯೂರಾಲಿಂಕ್ ಕಾರ್ಪೋರೇಶನ್ ಈಗ 3ನೇ ರೋಗಿಗೆ ಯಶಸ್ವಿಯಾಗಿ ಮೆದುಳು ಚಿಪ್ ಅಳವಡಿಸಿದೆ. ಈ ವರ್ಷದಲ್ಲಿ ಇನ್ನೂ 20ರಿಂದ 30 ರೋಗಿಗಳಿಗೆ ಚಿಪ್ ಅಳವಡಿಸುವ ಗುರಿಯನ್ನು ಕಂಪೆನಿಯು ಹಾಕಿಕೊಂಡಿದೆ.
ಈ ಕುರಿತು ಮಾಹಿತಿ ಹಂಚಿ ಕೊಂಡಿರುವ ಎಲಾನ್ ಮಸ್ಕ್, ನ್ಯೂರಾಲಿಂಕ್ ಚಿಪ್ ಅಳವಡಿಸಿ ಕೊಂಡಿರುವ ಮೂವರು ನಮ್ಮ ಬಳಿ ಇದ್ದಾರೆ. ಅವ ರೆಲ್ಲರೂ ಚೆನ್ನಾಗಿದ್ದಾರೆ ಎಂದಿದ್ದಾರೆ.
ಪಾರ್ಶ್ವವಾಯು, ಎಎಲ್‌ಎಸ್(ಮಾಂಸಖಂಡಗಳಿಗೆ ಮೆದುಳಿನ ಸಂಪರ್ಕ ಕಡಿತ) ನಂಥ ರೋಗ ಗಳ ಚಿಕಿತ್ಸೆಗೆ ಈ ಚಿಪ್‌ಗ್ಳು ನೆರವು ನೀಡುತ್ತವೆ. ರೋಗಿಯ ತಲೆಬುರುಡೆ ಬಿಚ್ಚಿ ಮೆದುಳಿನ ಅಂಗಾಂಶದಲ್ಲಿ ಈ ಎಲೆಕ್ಟ್ರೋಡನ್ನು ರೊಬೋಟಿಕ್ ಶಸ್ತ್ರಕ್ರಿಯೆ ಮೂಲಕ ಕಸಿ ಮಾಡಲಾಗುತ್ತದೆ. ಬಳಿಕ ಪಾರ್ಶ್ವವಾಯು ರೋಗಿಯ ಆಲೋಚನೆಗಳನ್ನು ಬಳಸಿಕೊಂಡು ಬಾಹ್ಯ ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್ ಮೂಲಕ ನಿಯಂತ್ರಿಸಲಾಗುತ್ತದೆ.
ವರ್ಷದ ಹಿಂದೆ ಮೊದಲ ಬಾರಿಗೆ ನೊಲಾಂಡ್ ಎಂಬವರಿಗೆ ಈ ಚಿಪ್ ಕಸಿ ಮಾಡಲಾಗಿತ್ತು. ಈ ವ್ಯಕ್ತಿಯು ವೀಡಿಯೋ ಗೇಮ್, ಇಂಟರ್ನೆಟ್ ಬ್ರೌಸಿಂಗ್, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು ಮತ್ತಿತರ ಚಟುವಟಿಕೆ ಮಾಡುತ್ತಿದ್ದಾರೆ.
ಏನಿದು ತಂತ್ರಜ್ಞಾನ?
ನ್ಯೂರಾಲಿಂಕ್ ಕಂಪೆನಿ ಅಭಿವೃದ್ಧಿಪಡಿಸಿರುವ ಬ್ರೈನ್ ಕಂಪ್ಯೂಟರ್-ಇಂಟರ್‌ಫೇಸ್ (ಬಿಸಿಐ) ಪ್ರಯೋಗದ ಚಿಪ್ ಅನ್ನು ಪಾರ್ಶ್ವವಾಯು ಹಾಗೂ ಇತರ ನರ ಸಂಬಂಧಿ ರೋಗಿಗಳ ಮೆದುಳಿನಲ್ಲಿ ಅಳ ವಡಿಸಲಾಗುತ್ತದೆ. ರೋಗಿಯ ಮನಸ್ಸಿನ ಆಲೋಚನೆಗಳನ್ನು ಈ ಚಿಪ್ ಬಾಹ್ಯ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ಗಳಿಗೆ ರವಾನಿಸುತ್ತದೆ ಮತ್ತು ಆ ಮೂಲಕ ಅವರನ್ನು ನಿಯಂತ್ರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Wildfires; ಲಾಸ್ ಏಂಜಲೀಸ್ ಬೆಂಕಿಗೆ 10000 ಕೋಟಿ ಬಂಗಲೆ ಭಸ್ಮ
Donald Trump ಸೋಲಿಸುತ್ತಿದ್ದೆ, ಪಕ್ಷಕ್ಕಾಗಿ ಹಿಂದೆ ಸರಿದೆ: ಅಧ್ಯಕ್ಷ ಜೋ ಬೈಡೆನ್
ಹವಾಮಾನ ಇಲಾಖೆಗೆ 150: ಕಾರ್ಯಕ್ರಮಕ್ಕೆ ಬರಲ್ಲ ಬಾಂಗ್ಲಾ
AI ನಿಂದ 2 ಲಕ್ಷಕ್ಕೂ ಅಧಿಕ ಉದ್ಯೋಗಗಳಿಗೆ ಕತ್ತರಿ: ಅಮೆರಿಕ ವರದಿ
MUST WATCH
ಹೊಸ ಸೇರ್ಪಡೆ
Chikkamagaluru: ಮಲಗಿದ್ದ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ…
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Champions Trophy: ನ್ಯೂಜಿಲ್ಯಾಂಡ್ ತಂಡ ಪ್ರಕಟ; ತಂಡಕ್ಕೆ ಮರಳಿದ ಮೂವರು ಘಟಾನುಘಟಿಗಳು
Bengaluru Crime: ಪ್ರಿಯಕರ ಆತ್ಮಹತ್ಯೆ: ಪ್ರೇಯಸಿಯೂ ನೇಣಿಗೆ ಶರಣು
Shivamogga: ಖ್ಯಾತ ಫೋಟೋ ಜರ್ನಲಿಸ್ಟ್ ಗೆ ಹೃದಯಾಘಾತ, ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.