ಭೂತದ ಬಾಯಲ್ಲಿ ಭಗವದ್ಗೀತೆ…ಬೇರೆ ದೇಶದ ಒಂದಿಂಚೂ ಜಾಗ ಕಬಳಿಸಿಲ್ಲ ಎಂದ ಚೀನಾ!
ಲಡಾಖ್ ನ ಪ್ಯಾಂಗಾಂಗ್ ನಲ್ಲಿ ಚೀನಾ ಸೇನೆಯನ್ನು ಭಾರತ ಹಿಮ್ಮೆಟ್ಟಿಸಿದ ಹಲವು ಗಂಟೆಗಳ ನಂತರ ಚೀನಾ ಈ ಹೇಳಿಕೆಯನ್ನು ನೀಡಿದೆ
Team Udayavani, Sep 1, 2020, 4:37 PM IST
ನವದೆಹಲಿ:ನಾವು ಯಾವತ್ತೂ ಯುದ್ಧವನ್ನು ಪ್ರಚೋದಿಸುವುದಾಗಲಿ ಮತ್ತು ಬೇರೆ ಯಾವುದೇ ದೇಶದ ಒಂದಿಂಚೂ ಜಾಗವನ್ನು ಆಕ್ರಮಿಸಿಕೊಂಡಿಲ್ಲ ಎಂದು ಚೀನಾ ಮಂಗಳವಾರ (ಸೆಪ್ಟೆಂಬರ್ 01, 2020) ಪ್ರತಿಕ್ರಿಯೆ ನೀಡಿದೆ!
ಪೂರ್ವ ಲಡಾಖ್ ನ ಪ್ಯಾಂಗಾಂಗ್ ತ್ಸೋ ಸರೋವರ ಪ್ರದೇಶದಲ್ಲಿ ಒಳನುಗ್ಗಲು ಯತ್ನಿಸಿದ್ದ ಚೀನಾ ಸೇನೆಯನ್ನು ಭಾರತ ಪ್ರಬಲ ವಿರೋಧದಿಂದ ಹಿಮ್ಮೆಟ್ಟಿಸಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಚೀನಾ ತನ್ನ ವರಸೆ ಬದಲಾಯಿಸಿ, ತಾನು ಬೇರೆ ದೇಶದ ಒಂದಿಂಚೂ ಜಾಗವನ್ನು ಕಬಳಿಸಿಲ್ಲ ಎಂಬುದಾಗಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನೈಂಗ್ ತಿಳಿಸಿದ್ದಾರೆ.
ಚೀನಾ ಯಾವತ್ತೂ ಯಾವುದೇ ಯುದ್ಧ ಅಥವಾ ಸಂಘರ್ಷಕ್ಕೆ ಪ್ರಚೋದಿಸಿಲ್ಲ. ಅಷ್ಟೇ ಅಲ್ಲ ಬೇರೆ ದೇಶದ ಒಂದಿಂಚೂ ಜಾಗವನ್ನು ಆಕ್ರಮಿಸಿಕೊಂಡಿಲ್ಲ. ಚೀನಾ ಗಡಿ ಭದ್ರತಾ ಪಡೆ ಕೂಡಾ ಯಾವತ್ತೂ ಗಡಿಯನ್ನು ದಾಟಿಲ್ಲ. ಆದರೂ ಕೆಲವೊಂದು ಸಂವಹನ ಸಮಸ್ಯೆ ಇದ್ದಿರಬಹುದು ಎಂದು ಸಮಜಾಯಿಷಿ ನೀಡಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ: ಡ್ರ್ಯಾಗನ್ ರಾಷ್ಟ್ರದೊಂದಿಗಿನ ತಿಕ್ಕಾಟದ ಮೂಲ ಗೊತ್ತೇ?
ಉಭಯ ದೇಶಗಳು ಸತ್ಯಾಂಶವನ್ನು ಗಮನಿಸಬೇಕು. ಅಲ್ಲದೇ ದ್ವಿಪಕ್ಷೀಯ ಸಂಬಂಧವನ್ನು ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಇದರೊಂದಿಗೆ ಶಾಂತಿ ಕಾಪಾಡಿಕೊಳ್ಳುವ ಮೂಲಕ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದು ಚೀನಾ ತಿಳಿಸಿದೆ.
ಲಡಾಖ್ ನ ಪ್ಯಾಂಗಾಂಗ್ ನಲ್ಲಿ ಚೀನಾ ಸೇನೆಯನ್ನು ಭಾರತ ಹಿಮ್ಮೆಟ್ಟಿಸಿದ ಹಲವು ಗಂಟೆಗಳ ನಂತರ ಚೀನಾ ಈ ಹೇಳಿಕೆಯನ್ನು ನೀಡಿದೆ ಎಂಬುದನ್ನು ಗಮನಿಸಬಹುದಾಗಿದೆ. ಭಾರತದಲ್ಲಿರುವ ಚೀನಾ ರಾಯಭಾರಿ ಕೂಡಾ ಹೇಳಿಕೆಯನ್ನು ನೀಡಿದ್ದರು. ಭಾರತೀಯ ಸೇನೆ ಕಾನೂನು ಬಾಹಿರವಾಗಿ ಎಲ್ ಎಸಿ ಒಳಗೆ ನುಗ್ಗಿ ಶಾಂತಿ, ಸೌಹಾರ್ದತೆ ಕದಡಿದೆ ಎಂದು ಆರೋಪಿಸಿದ್ದರು.
ಚೀನಾ ಜತೆಗಿನ ಭಾರತದ ಗಡಿ ವಿವಾದ 1914ರಷ್ಟು ಹಿಂದಿನದ್ದಾಗಿದೆ. ಗಡಿ ಸಂಘರ್ಷದ ಪರಿಣಾಮವಾಗಿಯೇ 1962ರಲ್ಲಿ ಯುದ್ಧ ನಡೆದಿತ್ತು. ಆ ನಂತರ ಮೂರು ಒಪ್ಪಂದಗಳು ಆಗಿದ್ದರೂ ಗಡಿ ಸಮಸ್ಯೆ ಬಗೆಹರಿದಿಲ್ಲವಾಗಿತ್ತು. ಅಷ್ಟೇ ಅಲ್ಲ ಭಾರತದ ಅರುಣಾಚಲ ಪ್ರದೇಶ ತನ್ನದೆಂದು ಚೀನಾ ಪ್ರತಿಪಾದಿಸುತ್ತಲೇ ಬಂದಿದೆ! 2017ರಲ್ಲಿ ಚೀನಾ ಸೈನಿಕರು ಭೂತಾನ್ ದೋಕಲಾ ಪ್ರದೇಶವನ್ನು ಅತಿಕ್ರಮಿಸಿ ರಸ್ತೆ ಮತ್ತು ಗಡಿಯನ್ನು ನಿರ್ಮಿಸಲು ಮುಂದಾಗಿತ್ತು. ಆದರೆ ಭಾರತದ ಸೈನಿಕರ ಪ್ರಬಲ ವಿರೋಧದಿಂದ ಚೀನಾ ಸೈನಿಕರು ಹಿಮ್ಮೆಟ್ಟುವಂತಾಗಿತ್ತು. ದೋಕಲಾ ಪ್ರದೇಶ ಕೂಡಾ ತನ್ನದು ಎಂಬುದು ಚೀನಾದ ವಾದವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.