ಕೊರೊನಾ ವೈರಸ್‌ನ ಮೂಲ “ರಕೂನ್ ಡಾಗ್’? ಹೊಸ ವಾದ ಮುಂದಿಟ್ಟ ವಿಜ್ಞಾನಿಗಳು
ಚೀನದ ವುಹಾನ್ ಮಾರುಕಟ್ಟೆಯಿಂದಲೇ ವ್ಯಾಪಿಸಿತ್ತು ಸೋಂಕು
Team Udayavani, Mar 18, 2023, 7:52 AM IST
ನ್ಯೂಯಾರ್ಕ್: ಕೊರೊನಾ ವೈರಸ್‌ನ ಮೂಲ ಚೀನ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.ವುಹಾನ್ ಮಾರುಕಟ್ಟೆಯಿಂದ 2020ರ ಜನವರಿಯಲ್ಲಿ ಅನುವಂಶಿಕ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಅದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಇಲ್ಲಿ ಮಾರಾಟ ಮಾಡುತ್ತಿದ್ದ ರಕೂನ್ ಪ್ರಾಣಿಯ ಮಾಂಸದಲ್ಲಿ ಸಾರ್ಸ್-ಕೊವ್-2 ವೈರಸ್ ಪತ್ತೆಯಾಗಿದೆ ಎಂದು ಅಂತಾರಾಷ್ಟ್ರೀಯ ತಜ್ಞರ ತಂಡವು ತಿಳಿಸಿದೆ.
ಕೊರೊನಾ ಸ್ಫೋಟದ ಹಿನ್ನೆಲೆಯಲ್ಲಿ 2020ರ ಜನವರಿಯಲ್ಲಿ ಚೀನ ಸರ್ಕಾರ ವುಹಾನ್ ಮಾರುಕಟ್ಟೆ ಬಂದ್ ಮಾಡಿದ ಕೂಡಲೇ ಸಂಶೋಧಕರು ಅಲ್ಲಿದ್ದ ಗೋಡೆಗಳು, ನೆಲ, ಪ್ರಾಣಿಗಳನ್ನು ಸಾಗಾಟ ಮಾಡುತ್ತಿದ್ದ ಲೋಹದ ಪಂಜರಗಳು, ಬಂಡಿಗಳು, ಉಳಿದ ಮಾಂಸದಿಂದ ಮಾದರಿಗಳನ್ನು ಸಂಗ್ರಹಿಸಿದ್ದರು. ಇದನ್ನು ಅನುವಂಶಿಕ ಪರೀಕ್ಷೆಗೆ ಒಳಪಡಿಸಿ, ಇದರ ಆಧಾರದಲ್ಲಿ ಗುರುವಾರ ವರದಿಯನ್ನು ತಜ್ಞರು ಬಿಡುಗಡೆಗೊಳಿಸಿದ್ದಾರೆ.
ಮಾದರಿಯ ಜೈವಿಕ ಅಂಶವನ್ನು ಪರೀಕ್ಷಿಸಿದಾಗ ಇದು ರಕೂನ್ ಪ್ರಾಣಿಗೆ ಸೇರಿರುವುದು ಹಾಗೂ ಇದರಲ್ಲಿ ಕೊರೊನಾ ವೈರಸ್ ಇರುವುದು ಬಹಿರಂಗವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ತಜ್ಞರ ತಂಡದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ, ಅಸ್ಟ್ರೇಲಿಯಾದ ಸಿಡ್ನಿ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ತಜ್ಞರು ಇದ್ದಾರೆ.
ಕಳೆದ ವಾರವಷ್ಟೇ ವುಹಾನ್ ವೈರಾಲಜಿ ಪ್ರಯೋಗಾಲಯದಿಂದ ಆಕಸ್ಮಿಕವಾಗಿ ವೈರಸ್ ಸೋರಿಕೆಯಾದ ಪರಿಣಾಮ ಜಗತ್ತಿನಾದ್ಯಂತ ಕೊರೊನಾ ಮಾರಿಗೆ ಕಾರಣವಾಯಿತು ಎಂದು ಅಮೆರಿಕ ಪ್ರತಿಪಾದಿಸಿತ್ತು.
ಈ ನಡುವೆ, ಇಸ್ರೇಲ್‌ನಲ್ಲಿ ಕೊರೊನಾ ಸೋಂಕಿನ ಹೊಸ ರೂಪಾಂತರಿಯೊಂದು ಪತ್ತೆಯಾಗಿದೆ. ವಿದೇಶದಿಂದ ಆಗಮಿಸಿದ್ದ ಇಬ್ಬರು ವ್ಯಕ್ತಿಗಳಿಗೆ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.