ಮುಳುಗಿದ ನ್ಯೂಯಾರ್ಕ್; ಇಡಾ ಚಂಡಮಾರುತಕ್ಕೆ ಅಮೆರಿಕ ತತ್ತರ
ಹಲವಾರು ಪ್ರದೇಶ ಜಲಾವೃತ; ಒಟ್ಟು 9 ಮಂದಿ ಸಾವು
Team Udayavani, Sep 2, 2021, 10:30 PM IST
ನ್ಯೂಯಾರ್ಕ್: ಇಡಾ ಚಂಡಮಾರುತಕ್ಕೆ ತುತ್ತಾಗಿರುವ ಅಮೆರಿಕದ ನ್ಯೂಯಾರ್ಕ್, ಇತಿಹಾಸದಲ್ಲಿ ಎಂದೂ ಕಂಡಿರದಂಥ ಅಗಾಧ ಪ್ರವಾಹದ ಸುಳಿಗೆ ಸಿಲುಕಿದೆ.
ನೆರೆ, ಪ್ರವಾಹಕ್ಕೆ ಸಿಕ್ಕು 2 ವರ್ಷದ ಮಗು ಸೇರಿ ಒಟ್ಟು 9 ಮಂದಿ ಅಸುನೀಗಿದ್ದಾರೆ. ಮ್ಯಾನ್‌ಹಟನ್, ಬ್ರೂಕ್ಲಿನ್ ಹಾಗೂ ನ್ಯೂ ಜೆರ್ಸಿಯಲ್ಲಿ ಸುರಿಯುತ್ತಿರುವ ಮಳೆಗೆ ಆ ನಗರದ ತಗ್ಗು ಪ್ರದೇಶಗಳು, ಸಾರಿಗೆ ಸುರಂಗ ಮಾರ್ಗಗಳು ಮುಂತಾದ ಕಡೆಯಲ್ಲೆಲ್ಲಾ ಪ್ರವಾಹದಂತೆ ನೀರು ನುಗ್ಗಿದೆ. ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಕೇವಲ 1 ಗಂಟೆಯಲ್ಲೇ 3.15 ಇಂಚು ಮಳೆ ಸುರಿದಿದೆ. ಎರಡು ವಾರಗಳ ಅವಧಿಯಲ್ಲಿ 20 ಮಂದಿ ಸಾವಿಗೀಡಾಗಿದ್ದಾರೆ.
ರಸ್ತೆಗಳಲ್ಲಿ ನಿಲ್ಲಿಸಿದ್ದ ಕಾರುಗಳು, ಇತರ ವಾಹನಗಳು ನೀರಿನಲ್ಲಿ ತೇಲುತ್ತಿವೆ. ಜಲಾವೃತಗೊಂಡಿರುವ ಪ್ರದೇಶಗಳಿಂದ ಜನರನ್ನು ತೆರವುಗೊಳಿಸಲಾಗುತ್ತಿದೆ.
ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಹಾಗೂ ಮೇಯರ್ ಬಿಲ್ ಡೆ ಬ್ಲಾಸಿಯೊ, ನ್ಯೂಯಾರ್ಕ್ ವ್ಯಾಪ್ತಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಸಾರಿಗೆ ಸುರಂಗ ಮಾರ್ಗಗಳಲ್ಲಿ ನೀರು ನುಗ್ಗಿದ್ದರಿಂದಾಗಿ, ಮೆಟ್ರೋಪಾಲಿಟನ್ ಅಥಾರಿಟಿ ಎಲ್ಲಾ ಸಾರಿಗೆ ಸೇವೆಗಳನ್ನು ರದ್ದುಗೊಳಿಸಿದೆ.
ಇದನ್ನೂ ಓದಿ:ಹಿರಿಯ ಪತ್ರಕರ್ತ,ಮಾಜಿ ರಾಜ್ಯಸಭಾ ಸದಸ್ಯ ಚಂದನ್ ಮಿತ್ರಾ ನಿಧನ
ಸೆ.4ರಿಂದ ಮಹಾರಾಷ್ಟ್ರಕ್ಕೆ ಮಳೆ
ಮಹಾರಾಷ್ಟ್ರದ ಮರಾಠವಾಡ, ಕೊಂಕಣ, ಗೋವಾ, ಕರಾವಳಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡುಗಳಲ್ಲಿ ಸೆ.4ರಿಂದ ಸೆ.6ರ ವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆ. ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.