ಹ್ಯಾಲೆ ರಾಜೀನಾಮೆಗೆ ಹಲವು ವ್ಯಾಖ್ಯಾನ
Team Udayavani, Oct 11, 2018, 6:00 AM IST
ವಾಷಿಂಗ್ಟನ್: ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿ ಸ್ಥಾನಕ್ಕೆ ಭಾರತೀಯ -ಅಮೆರಿಕನ್ ನಿಕ್ಕಿ ಹ್ಯಾಲೆ ರಾಜೀನಾಮೆ ನೀಡಿದ ಬಳಿಕ, 2020ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರೂ, ಬೆಳವಣಿಗೆಯಲ್ಲಿ ಬೇರೆ ಏನೋ ವಿಚಾರ ಇದೆ ಎನ್ನುವುದು ಅಮೆರಿಕದ ಮಾಧ್ಯಮಗಳ ಲೆಕ್ಕಾಚಾರ. ಅಮೆರಿಕದ ಏಪ್ರಿಲ್ ಕ್ವಿನಿಪಿಯಾಕ್ ವಿವಿ ನಡೆಸಿದ ಸಮೀಕ್ಷೆ ಪ್ರಕಾರ, ಹ್ಯಾಲೆ ಜನಪ್ರಿಯತೆ ಪ್ರಮಾಣ ಶೇ.63ರಷ್ಟಿದೆ. ಅಂದರೆ, ಅಧ್ಯಕ್ಷ ಟ್ರಂಪ್ ಪಡೆದಿರುವ ಶೇಕಡಾವಾರು ಮತಕ್ಕಿಂತ ಶೇ.20ರಷ್ಟು ಹೆಚ್ಚು. ಹೀಗಾಗಿ, ಹ್ಯಾಲೆ ಚುನಾವಣೆ ಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ಬಣ್ಣಿಸಿವೆ. ಟ್ರಂಪ್‌ರ ನಿಕಟವರ್ತಿಗಳು ಎಂದು ಖ್ಯಾತಿ ಪಡೆದಿದ್ದ ವಿದೇಶಾಂಗ ಸಚಿವರಾಗಿದ್ದ ರೆಕ್ಸ್ ಟಿಲ್ಲರ್ಸನ್, ರಾಷ್ಟ್ರೀಯ ಭದ್ರತೆಯ ಮಾಜಿ ಸಲಹೆಗಾರ ಎಚ್.ಆರ್. ಮ್ಯಾಕ್ ಮಾಸ್ಟರ್ ಸೇರಿದಂತೆ ಪ್ರಮುಖರು ಒಂದು ಹಂತದಲ್ಲಿ ಹುದ್ದೆ ಕಳೆದುಕೊಂಡವರೇ. ಆದರೆ, ನಿಕ್ಕಿ ಹ್ಯಾಲೆ ಮಾತ್ರ ವಿಶ್ವಸಂಸ್ಥೆಯಲ್ಲಿ ಮತ್ತು ಟ್ರಂಪ್ ನೇತೃತ್ವದ ಸರ್ಕಾರದಲ್ಲಿ ಚಾಕಚಕ್ಯತೆಯಿಂದ ಹುದ್ದೆ ನಿಭಾಯಿಸುತ್ತಾ ಬಂದಿದ್ದರು.
ರಿಪಬ್ಲಿಕನ್ ಪಕ್ಷದಲ್ಲಿ ಟ್ರಂಪ್‌ರ ಪ್ರಬಲ ಟೀಕಾಕಾರರಾಗಿರುವ ಮೈಕ್ ಮರ್ಫಿ ರಾಜಕೀಯವಾಗಿ ಯಾರೂ ಬೆಳೆಯುವುದು ಟ್ರಂಪ್‌ಗೆ ಬೇಕಾಗಿಲ್ಲ. ಅಲ್ಲಿ ಒಬ್ಬನೇ ಸೂರ್ಯ ದೇವ ಅಂದರೆ ಟ್ರಂಪ್ ಮಾತ್ರ ಎಂದು ಕಿಚಾಯಿಸಿದ್ದಾರೆ. ಟ್ರಂಪ್ ಆಡಳಿತ ದಲ್ಲಿರುವ ಕೆಲವೇ ಮಹಿಳಾ ಆಡಳಿತಗಾರರ ಪೈಕಿ ಹ್ಯಾಲೆ ಒಬ್ಬರು. ರಾಯಭಾರಿಯಾಗಿ ನಿಕ್ಕಿ ಹ್ಯಾಲೆ ಧೈರ್ಯದಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ಬರೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.