ಕಿಕ್ಕಿರಿದ ಜೈಲಲ್ಲಿ ನೀರವ್ ಮೋದಿ!
Team Udayavani, Mar 22, 2019, 12:30 AM IST
ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ಮೋಸ ಮಾಡಿ ಲಂಡನ್‌ಗೆ ತೆರಳಿದ್ದ ನೀರವ್ ಮೋದಿ ಮೊನ್ನೆ ಮೊನ್ನೆಯವರೆಗೂ ಐಷಾರಾಮಿ ಅಪಾರ್ಟ್ ಮೆಂಟ್‌ಗಳಲ್ಲಿ ವಾಸಿಸುತ್ತಿದ್ದ.
ಈಗ ಲಂಡನ್‌ನ ಅತ್ಯಂತ ಕಿಕ್ಕಿರಿದ ಜೈಲಿ ನಲ್ಲಿ ವಾಸ ಮಾಡುತ್ತಿದ್ದಾನೆ.ಮಂಗಳವಾರ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಈತನನ್ನು ಬಂಧಿಸಿದ್ದು, ಲಂಡನ್ನ ವ್ಯಾಂಡ್ಸ್‌ವರ್ತ್ ಜೈಲಿನಲ್ಲಿಡಲಾಗಿದೆ. ಇತ್ತೀಚೆಗಷ್ಟೇ ಈ ಜೈಲಿನ ಬಗ್ಗೆ ನಡೆಸಿದ ಅಧ್ಯಯನದ ಪ್ರಕಾರ ಲಂಡನ್‌ನಲ್ಲೇ ಈ ಜೈಲು ಅತ್ಯಂತ ಕಿಕ್ಕಿರಿದಿದೆ. ಒಬ್ಬರಿಗೆಂದು ನಿರ್ಮಿಸಿದ ಸೆಲ್‌ನಲ್ಲಿ ಇಬ್ಬರನ್ನು ಇಡಲಾಗಿದೆ. ಶೌಚಾಲಯ ಗಳು ಕೊಳಕಾಗಿವೆ. ಇಲ್ಲಿರುವ ಕ್ರಿಮಿನಲ್‌ಗಳು ಹಾಗೂ ದರೋಡೆಕೋರ ರಿಂದಾಗಿ ವಾರ್ಡನ್‌ಗಳು ಆಯುಧವಿಲ್ಲದೇ ವರಾಂಡದಲ್ಲಿ ಸುಳಿದಾ ಡು ವುದೂ ಇಲ್ಲ. ಪದೇ ಪದೇ ಇಲ್ಲಿ ಕೈದಿಗಳು ಹೊಡೆದಾಡಿಕೊಂಡು ಸತ್ತ ವರದಿ ಗಳು ಲಭ್ಯವಾ ಗುತ್ತವೆ ಎಂದು ವರದಿ ಮಾಡಲಾಗಿತ್ತು. ಅಲ್ಲದೆ ಇಲ್ಲಿನ ಜೈಲಿನಿಂದ ಕೈದಿಗಳನ್ನು ಹೊರಗೆ ಬಿಡುವ ಅವಧಿಯೂ ಇತರ ಜೈಲುಗಳಿಗಿಂತ ಕಡಿಮೆಯಾಗಿರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನೊಂದೆಡೆ ವಿಜಯ್ ಮಲ್ಯ ಪ್ರಕರಣದಲ್ಲಿ ನ್ಯಾಯದಾನ ವಿಳಂಬವಾಗಿದ್ದು,ನೀರವ್ ಪ್ರಕರಣದಲ್ಲಿ ಈ ಪ್ರಕ್ರಿಯೆ ತ್ವರಿತವಾಗಿ ನಡೆಯುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿಗಳು ಭಾವಿಸಿದ್ದಾರೆ. ಮಾರ್ಚ್ 29 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.