Gaza War; ಹಮಾಸ್ ವಿರುದ್ಧ ಯುದ್ಧ ನಿಲ್ಲಿಸಬೇಕಾದರೆ….: ಷರತ್ತು ಹಾಕಿದ ಇಸ್ರೇಲ್
Team Udayavani, Nov 9, 2023, 11:44 AM IST
ಟೆಲ್ ಅವಿವ್: ಹಮಾಸ್ ಉಗ್ರರ ವಿರುದ್ಧ ಹೋರಾಟ ನಡೆಸುತ್ತಿರುವ ಇಸ್ರೇಲ್ ಇದೀಗ ಮತ್ತೆ ತಮ್ಮ ಯುದ್ಧ ನಿಲುವಿನ ಬಗ್ಗೆ ಸ್ಪಷ್ಟಪಡಿಸಿದೆ. ಹಮಾಸ್ ಉಗ್ರರು ಇರಿಸಿಕೊಂಡಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಕದನ ವಿರಾಮ ಸಾಧ್ಯವಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಗುರುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಒತ್ತೆಯಾಳುಗಳ ಬಿಡುಗಡೆ ಮಾಡುವವರೆಗೆ ಕದನ ವಿರಾಮವಾಗಲಿ, ಗಾಜಾಗೆ ಇಂಧನ ಪೂರೈಕೆಯಾಗಲಿ ಮಾಡುವ ಪ್ರಶ್ನೆಯೇ ಇಲ್ಲ” ಎಂದಿದ್ದಾರೆ.
ಹಮಾಸ್ ವಿರುದ್ಧದ ಯುದ್ಧವಾರಂಭವಾಗಿ ಒಂದು ತಿಂಗಳಾದ ಹಿನ್ನೆಲೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ನೆತನ್ಯಾಹು ಅವರು, ಇರಾನ್ ಬೆಂಬಲಿತ ಹೆಜಬುಲ್ಲಾಗೂ ಎಚ್ಚರಿಕೆ ನೀಡಿದ್ದಾರೆ. “ಅದು ತಪ್ಪು ಮಾಡುತ್ತಿದೆ” ಎಂದು ಗುಡುಗಿದ್ದಾರೆ.
ಕಳೆದ ಅಕ್ಟೋಬರ್ 7ರಂದು ಇಸ್ಲಾಮಿಕ್ ಗುಂಪು ಹಮಾಸ್ ಗಾಜಾ ಗಡಿಯನ್ನು ದಾಟಿ ಇಸ್ರೇಲ್ ಮೇಲೆ ದಾಳಿ ಆರಂಭಿಸಿದ ಬಳಿಕ ಇಸ್ರೇಲ್ ಯುದ್ಧ ಘೋಷಣೆ ಮಾಡಿತ್ತು. “ನಾವು ಹಮಾಸ್ ಅನ್ನು ಗೆಲ್ಲಲು ಬಿಡುವುದಿಲ್ಲ. ನಾವು ದಕ್ಷಿಣ ಇಸ್ರೇಲಿನಲ್ಲಿ ನಮ್ಮ ಸಮುದಾಯಗಳನ್ನು ಪುನರ್ನಿರ್ಮಿಸುತ್ತೇವೆ ಮತ್ತು ನಮ್ಮ ಜೀವನವನ್ನು ಮುಂದುವರಿಸುತ್ತೇವೆ” ಎಂದು ಇಸ್ರೇಲ್ ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.