ಕ್ಯಾಲಿಫೋರ್ನಿಯಾ ಕಾಂಡರ್ಸ್ ಕುತೂಹಲಕಾರಿ ಸಂತಾನೋತ್ಪತ್ತಿ: ಗಂಡಿನ ಸಂಪರ್ಕವಿಲ್ಲದೆ ಜನನ
Team Udayavani, Nov 19, 2021, 7:10 AM IST
ವಾಷಿಂಗ್ಟನ್: ಕ್ಯಾಲಿಫೋರ್ನಿಯಾ ಕಾಂಡರ್ಸ್ ಎಂಬ ಜಾತಿಯ ಪಕ್ಷಿಗಳು, ಈಗ ತನ್ನ ಜಾತಿಯ ಪುರುಷ ಹಕ್ಕಿಯ ಸಹಾಯವಿಲ್ಲದೆ ಜನಿಸಬಲ್ಲ ಜೀವಿಗಳ ವರ್ಗಕ್ಕೆ ಹೊಸದಾಗಿ ಸೇರಲ್ಪಟ್ಟಿವೆ! ಇತ್ತೀಚಿನ ವರ್ಷಗಳಲ್ಲಿ ಈ ಜಾತಿಯಲ್ಲಿ ಜನಿಸಿರುವ ಎರಡು ಗಂಡು ಹಕ್ಕಿಗಳ ಡಿಎನ್ಎಯನ್ನು ಪರೀಕ್ಷಿಸಿದಾಗ ಇವು ಕೇವಲ ತಾಯಿಯ ಅಂಡಾಣುವಿನಿಂದ ರೂಪುಗೊಂಡಿರುವ ಪಕ್ಷಿಗಳೆಂಬುದು ಪತ್ತೆಯಾಗಿವೆ. ಇವುಗಳಲ್ಲಿ ಯಾವುದೇ ಪುರುಷ ಹಕ್ಕಿಯ ಅಂಶಗಳು ಪತ್ತೆಯಾಗಿಲ್ಲದಿರುವುದು ವಿಜ್ಞಾನಿಗಳಿಗೇ ಅಚ್ಚರಿ ತಂದಿದೆ!
1980ರ ದಶಕದಲ್ಲಿ ಅಮೆರಿಕದ ನೈಋತ್ಯ ಭಾಗದಲ್ಲಿ ಅಳಿವಿನಂಚಿಗೆ ಸರಿದಿದ್ದ 22 ಕಾಂಡೊರ್ಗಳನ್ನು ಗಂಡು-ಹೆಣ್ಣುಗಳ ಪ್ರತ್ಯೇಕ ಜೋಡಿಯಾಗಿಸಿ, ಪ್ರತಿಯೊಂದು ಜೋಡಿಯನ್ನೂ ಪ್ರತ್ಯೇಕ ಗೂಡುಗಳಲ್ಲಿ ಇರಿಸಲಾಗಿತ್ತು. ಅಲ್ಲಿ ಜನಿಸಿದ ಹೊಸ ಹಕ್ಕಿಗಳ ಡಿಎನ್ಎ ಪರೀಕ್ಷೆ ನಡೆಸಿದಾಗ ವಿಜ್ಞಾನಿಗಳು ಕೇವಲ ತಾಯಿಯಿಂದ ಜನಿಸಿದ ಎರಡು ಗಂಡು ಹಕ್ಕಿಗಳನ್ನು ಪತ್ತೆ ಹಚ್ಚಿದ್ದಾರೆ. ಹಾಗೆಂದು ಈ ರೀತಿಯ ಸಂತಾ ನೋತ್ಪತ್ತಿ ಇದೇ ಮೊದಲೇನಲ್ಲ. ಅಳಿವಿನಂಚಿನಲ್ಲಿರುವ ಕೆಲವು ಪ್ರಾಣಿ, ಪಕ್ಷಿಗಳಲ್ಲಿ ಇದು ನಿಸರ್ಗವೇ ದಯಪಾಲಿಸಿ ರುವ ಒಂದು ಸಂತಾನೋತ್ಪತ್ತಿ ಸೌಲಭ್ಯ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಪಾರ್ಥೋಜೆನಿಸಿಸ್ನಿಂದ ಇದು ಸಾಧ್ಯ!: ಸಾಮಾನ್ಯವಾಗಿ ಜೀವಿಗಳಲ್ಲಿ ಲೈಂಗಿಕ ಸಂಪರ್ಕಾಧಾರಿತ (ಸೆಕ್ಸುವಲ್), ಅಲೈಂಗಿಕಾಧಾರಿತ (ಅಸ್ಸೆಕ್ಸುವಲ್) ಗರ್ಭಧಾರಣೆ ವ್ಯವಸ್ಥೆಯಿದೆ. ಮೇಲಿನ ಎರಡೂ ಕ್ರಮಗಳಲ್ಲಿ, ಹೆಣ್ಣಿನ ಅಂಡಾಣು ಹಾಗೂ ಗಂಡಿನ ವೀರ್ಯಾಣು ಸಮ್ಮಿಲನಗೊಂಡು ಭ್ರೂಣವಾಗಿ, ಆನಂತರ ಜೀವಿಯಾಗಿ ಮಾರ್ಪಾಡಾಗುತ್ತದೆ. ಲೈಂಗಿಕತೆಯಿಲ್ಲದ ಸಂತಾನೋತ್ಪತ್ತಿಯಲ್ಲಿ ಪಾಥೋìಜೆನಿಸಿಸ್ ಎಂಬ ಮತ್ತೂಂದು ಬಗೆಯಿದೆ. ಇಲ್ಲಿ ಹೆಣ್ಣಿನ ಅಂಡಾಣು ತನ್ನಿಂತಾನೇ ಭ್ರೂಣವಾಗಿ ಬದಲಾಗಿ, ಅನಂತರ ಜೀವಿಯಾಗುತ್ತದೆ. ಕ್ಯಾಲಿಫೋರ್ನಿಯಾ ಕಾಂಡರ್ಸ್ಗಳ ವಿಚಾರದಲ್ಲೂ ಹಾಗೇ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.