ಟ್ವಿಟರ್‌ ದಿವಾಳಿಯಾಗುತ್ತಾ?: ಸ್ವತಃ ಎಲಾನ್‌ ಮಸ್ಕ್ ಆತಂಕ!

ಉದ್ಯೋಗಿಗಳನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ನೂತನ ಮಾಲಿಕರ ಕಳವಳ

Team Udayavani, Nov 12, 2022, 6:55 AM IST

thumb-5

ಸ್ಯಾನ್‌ಫ್ರಾನ್ಸಿಸ್ಕೊ: ಟ್ವಿಟರ್‌ ನೂತನ ಮಾಲಿಕರಾಗಿ ಎಲಾನ್‌ ಮಸ್ಕ್ ಅಧಿಕಾರ ವಹಿಸಿಕೊಂಡಿದ್ದೇ ತಡ, ದಿನಕ್ಕೊಂದು ವಿಚಿತ್ರ ವರ್ತಮಾನಗಳು ಬರುತ್ತಿವೆ. ವಿಶ್ವವಿಖ್ಯಾತ ಸಾಮಾಜಿಕ ತಾಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಚಿಂತೆ ಬಳಕೆದಾರರಲ್ಲಿ ಶುರುವಾಗಿದೆ. 44 ಬಿಲಿಯನ್‌ ಡಾಲರ್‌ ಕೊಟ್ಟು ಟ್ವಿಟರ್‌ ಅನ್ನು ಖರೀದಿಸಿರುವ ಮಸ್ಕ್, ತಾವೇ ಸ್ವತಃ ಈ ತಾಣ ದಿವಾಳಿಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರಂತೆ!

ಮೊದಲ ಬಾರಿಗೆ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿರುವ ಮಸ್ಕ್, “ಹೆಚ್ಚು ನಗದು ಉತ್ಪತ್ತಿ ಆರಂಭಿಸದೇ ಇದ್ದರೆ ಕಂಪನಿ ದಿವಾಳಿಯಾಗಲಿದೆ’ ಎಂದಿದ್ದಾರೆ. ಅಲ್ಲದೇ, ವಾರಕ್ಕೆ 80 ಗಂಟೆ ಕೆಲಸ ಮಾಡಬೇಕು, ಕಚೇರಿಯಲ್ಲಿನ್ನು ಉಚಿತ ಆಹಾರ ಸಿಗುವುದಿಲ್ಲ ಎಂದೂ ಹೇಳಿದ್ದಾರೆ. ಈಗಾಗಲೇ ಅರ್ಧದಷ್ಟು ಉದ್ಯೋಗಿಗಳನ್ನು ಕಿತ್ತುಹಾಕಿರುವ ಮಸ್ಕ್, ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಜಾಹೀರಾತುದಾರರಲ್ಲಿ ಗೊಂದಲ ಹುಟ್ಟಿಸಿದೆ.

ಇದು ಆ ಸಂಸ್ಥೆಯ ಆರ್ಥಿಕಸ್ಥಿತಿ ಬಿಗಡಾಯಿಸುವ ಆತಂಕ ಹುಟ್ಟು ಹಾಕಿದೆ. ಜಾಹೀರಾತುದಾರರ ಆತಂಕವನ್ನು ಮಸ್ಕ್ಗೆ ತಲುಪಿಸಲು ಯತ್ನಿಸಿದ ವ್ಯಕ್ತಿಯೇ ರಾಜೀನಾಮೆ ಕೊಟ್ಟು ಹೊರ ನಡೆದಿದ್ದಾರೆ! ಟ್ವಿಟರ್‌ನ ಅತಿಮುಖ್ಯ ವ್ಯಕ್ತಿಗಳು ಹೀಗೆ ಸತತವಾಗಿ ರಾಜೀನಾಮೆ ನೀಡುತ್ತಿರುವುದನ್ನು ಅಮೆರಿಕದ ವಾಣಿಜ್ಯ ಆಯೋಗವೂ ಕಳವಳದಿಂದ ಪರಿಶೀಲಿಸುತ್ತಿದೆ.

ಜೀಸಸ್‌ ಕ್ರೈಸ್ಟ್‌ ಖಾತೆಗೇ ನೀಲಿ ಗುರುತು!
ಟ್ವಿಟರ್‌ ಆದಾಯ ವೃದ್ಧಿಸಲು 8 ಡಾಲರ್‌ ನೀಡಿದವರಿಗೆ ನೀಲಿ ಗುರುತನ್ನು ನೀಡಿ ಎಂದಿದ್ದಾರೆ

ಮಸ್ಕ್. ಇದು ತಮ್ಮ ಖಾತೆಯನ್ನು ಅಧಿಕೃತ ಮಾಡಿಕೊಳ್ಳಲು ಬಳಕೆದಾರರಿಗೆ ಇರುವ ಅವಕಾಶ. ಆದರೆ ಇದೇ ದೊಡ್ಡಪ್ರಮಾಣದಲ್ಲಿ ದುರುಪಯೋಗಕ್ಕೆ ಕಾರಣವಾಗಿದೆ. ಟ್ವಿಟರ್‌ನಲ್ಲಿ ನಿಷೇಧಕ್ಕೊಳಗಾಗಿರುವ ಡೊನಾಲ್ಡ್‌ ಟ್ರಂಪ್‌ ಹೆಸರಿನಲ್ಲೂ ನೀಲಿ ಗುರುತಿನ ಖಾತೆ ತೆರೆದುಕೊಂಡಿದೆ.

ಬಾಸ್ಕೆಟ್‌ಬಾಲ್‌ ದಂತಕಥೆ ಲೆಬ್ರಾನ್‌ ಜೇಮ್ಸ್‌, ಸೂಪರ್‌ ಮಾರಿಯೊ ಹೆಸರಲ್ಲೂ ಖಾತೆಗಳು ಹುಟ್ಟಿಕೊಂಡಿವೆ. ಅಷ್ಟು ಮಾತ್ರ ಯಾಕೆ ಕ್ರೈಸ್ತರು ದೇವರೆಂದು ಪೂಜಿಸುವ ಯೇಸುಕ್ರಿಸ್ತನ ಹೆಸರಿನಲ್ಲಿರುವ ಖಾತೆಗೇ ನೀಲಿ ಗುರುತನ್ನು ನೀಡಲಾಗಿದೆ. ಇದೊಂದು ನಕಲಿ ಖಾತೆ, ಆದರೆ ಕ್ರಿಸ್ತನ ಹೆಸರಿನಲ್ಲಿದೆ!

 

ಟಾಪ್ ನ್ಯೂಸ್

BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ

BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ

1-roh

Rohingya; ತ್ರಿಪುರಾದಲ್ಲಿ 6 ರೋಹಿಂಗ್ಯಾ ಮಹಿಳೆಯರ ಬಂಧನ

Randeep-surgewala

ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel: ಒತ್ತೆಯಾಳು ಬಿಡುಗಡೆ & ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್‌ ಸರ್ಕಾರ ಅಂಕಿತ

Israel: ಒತ್ತೆಯಾಳು ಬಿಡುಗಡೆ & ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್‌ ಸರ್ಕಾರ ಅಂಕಿತ

1-star

Elon Musk ಸ್ಟಾರ್‌ಶಿಪ್‌ ರಾಕೆಟ್‌ ಪರೀಕ್ಷೆ ವೇಳೆ ನಭದಲ್ಲಿ ಛಿದ್ರ

1-hbbb

H1B ಹೊಸ ನಿಯಮ ಜಾರಿ: ಭಾರತಕ್ಕೆ ಅನುಕೂಲ

1-chin

ಸತತ 3ನೇ ವರ್ಷ ಜನಸಂಖ್ಯೆ ಕುಸಿತ: ಚೀನಕ್ಕೆ ಆತಂಕ

Sunita williams

Sunita Williams; 6 ಗಂಟೆ ಬಾಹ್ಯಾಕಾಶ ನಡಿಗೆ, 8ನೇ ಬಾರಿ ಸಾಹಸ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ

BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ

1-roh

Rohingya; ತ್ರಿಪುರಾದಲ್ಲಿ 6 ರೋಹಿಂಗ್ಯಾ ಮಹಿಳೆಯರ ಬಂಧನ

Randeep-surgewala

ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.