ಬೀಜಿಂಗ್ ಬಾರ್: 10ಕ್ಕಿಂತ ಹೆಚ್ಚು ವಿದೇಶೀಯರಿಗೆ ಪ್ರವೇಶ ಇಲ್ಲ
Team Udayavani, Mar 15, 2018, 3:27 PM IST
ಬೀಜಿಂಗ್ : ಬೀಜಿಂಗ್ ಪೊಲೀಸರು ನಗರ ಒಂದು ಭಾಗದಲ್ಲಿನ ಬಾರ್ ಮತ್ತು ರೆಸ್ಟೋರಾಂಟ್‌ಗಳಿಗೆ ವಿಚಿತ್ರ ಆದೇಶವೊಂದನ್ನು ಹೊರಡಿಸಿದ್ದಾರೆ. ಹತ್ತಕ್ಕಿತ ಹೆಚ್ಚು ವಿದೇಶಿಗರನ್ನು ಬಾರಿಗೆ ಒಳ ಬಿಡಕೂಡದು; ಶನಿವಾರ ಮತ್ತು ಭಾನುವಾರಗಳಲ್ಲಿ ಹತ್ತಕ್ಕಿಂತ ಹಚ್ಚು ವಿದೇಶೀಯರು ಇರುವುದು ಕಂಡು ಬಂದಲ್ಲಿ ಅಂತಹ ಬಾರ್ ಮತ್ತು ರೆಸ್ಟೋರಾಂಟ್‌ಗಳನ್ನು ಒಡನೆಯೇ ಮಚ್ಚಲಾಗುವುದು ಎಂದು ಬಾರ್, ರೆಸ್ಟೋರಾಂಟ್ ಮಾಲಕರಿಗೆ ಪೊಲೀಸರು ಕಟ್ಟಪ್ಪಣೆ ಮಾಡಿದ್ದಾರೆ.
ಚೀನ ಸರಕಾರದ ಎರಡು ಅಧಿವೇಶನಗಳ ವಾರ್ಷಿಕ ಸಭೆ ನಡೆಯಲಿರುವ ಕಾರಣ ಬಾರ್ ಮತ್ತು ರೆಸ್ಟೋರಾಂಟ್‌ಗಳ ಮೇಲೆ ಈ ನಿರ್ಬಂಧವನ್ನು ಹೇರಲಾಗಿದೆ ಎಂದು ತಿಳಿದು ಬಂದಿದೆ.
ಚೀನದ ಕಮ್ಯುನಿಸ್ಟ್ ಪಾರ್ಟಿಯ ವಾರ್ಷಿಕ ಎರಡು ಅಧಿವೇಶನಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ದೇಶಾದ್ಯಂತದ ಪಕ್ಷದ ಸದಸ್ಯರು ಬೃಹತ್ ಸಂಖ್ಯೆಯಲ್ಲಿ ಬೀಜಿಂಗ್‌ಗೆ ಬರುತ್ತಾರೆ. ಸರಕಾರದ ಮುಂದಿನ ವರ್ಷದ ಗುರಿಗಳು ಮತ್ತು ಆದ್ಯತೆಗಳಿಗೆ ಸಂಬಂಧಿಸಿದಂತೆ ಸೂಚನೆಗಳು ಮತ್ತು ಆದೇಶಗಳನ್ನು ಪಡೆಯಲು ಅವರು ಬೀಜಿಂಗ್ ಸಮಾವೇಶಕ್ಕೆ ಬರುವುದು ಕಡ್ಡಾಯವಾಗಿದೆ.
ಚೀನ ಕಮ್ಯುನಿಸ್ಟ್ ಪಕ್ಷದ ಈ ಬಾರಿಯ ವಾರ್ಷಿಕ ಅಧಿವೇಶನದ 2 ಸಮಾವೇಶಗಳು ಅತ್ಯಂತ ಮಹತ್ವದ್ದಾಗಿವೆ. ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅಜೀವ ಅವಧಿ(ಅನಿರ್ದಿಷ್ಟಾವಧಿ) ಗೆ ದೇಶದ ಅಧ್ಯಕ್ಷರಾಗಿರುವುದೇ ಇದಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಕೆಲವು ಸಮೂಹದವರಲ್ಲಿ ಅತೃಪ್ತಿ, ಅಸಮಾಧಾನ ವ್ಯಕ್ತವಾಗುವ ನಿರೀಕ್ಷೆ ಇದೆ. ಹಲವು ದಶಕಗಳ ಹಿಂದೆ ಚೀನದ ತಿಯನಾನಮನ್ ಚೌಕದಲ್ಲಿ ನಡೆದಿದ್ದ ವಿದ್ಯಾರ್ಥಿಗಳ ಬೃಹತ್ ಪ್ರಜಾಸತ್ತೆ ಪರ ಆಂದೋಲನವನ್ನು ನಿರ್ದಯವಾಗಿ ನಿಷ್ಕರುಣೆಯಿಂದ ಹತ್ತಿಕ್ಕಲಾಗಿತ್ತು.
ಇಂತಹ ಸ್ಥಿತಿ ಪುನಃ ಬಾರದಿರಲೆಂಬ ಕಾರಣ ಈ ಬಾರಿ ಬೀಜಿಂಗ್ ಬಿಗಿ ಭದ್ರತೆಗೆ ಒಳಪಡಲಿದೆ. ವಿದೇಶೀಯರ ಕರಾಮತ್ತು ನಡೆಯುವ ಸಾಧ್ಯತೆಯನ್ನು ಹತ್ತಿಕ್ಕಲು ಬಾರ್ ಮತ್ತು ರಸ್ಟೋರೆಂಟ್‌ಗಳ ಮೇಲೆ ವಿದೇಶೀಯರ ಪ್ರವೇಶಕ್ಕೆ ನಿರ್ಬಂಧಲಾಗಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.