ರಂಜಾನ್: ಸೌದಿ ನಿರ್ಬಂಧಗಳಿಗೆ ಮುಸ್ಲಿಮರ ಅಸಮಾಧಾನ
Team Udayavani, Mar 18, 2023, 7:30 AM IST
ರಿಯಾದ್: ಮಾ.22ರಿಂದ ಆರಂಭವಾಗುವ ರಂಜಾನ್ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಸೌದಿ ಅರೇಬಿಯಾ ಹೊರಡಿಸಿರುವ ನೂತನ ನಿರ್ಬಂಧಗಳು ಜಗತ್ತಿನಾದ್ಯಂತ ಮುಸ್ಲಿಮರ ಅಸಮಾಧಾನಕ್ಕೆ ಕಾರಣವಾಗಿದೆ.
ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಹೊರಡಿಸಿರವ ನಿಯಮಗಳ ಪ್ರಕಾರ, ರಂಜಾನ್ ತಿಂಗಳಲ್ಲಿ ಮಸೀದಿಗಳು ದಾನ ಪಡೆಯುವುದನ್ನು ನಿಷೇಧಿಸಲಾಗಿದೆ. ಮಸೀದಿಗಳಲ್ಲಿ ಸೂರ್ಯಾಸ್ತ ನಂತರ ಇಫ್ತಾರ್ ಕೂಟ ಆಯೋಜಿಸುವಂತಿಲ್ಲ.
ಮೆಕ್ಕಾ ಮತ್ತು ಮದೀನಾ ಹೊರತುಪಡಿಸಿ, ಉಳಿದೆಡೆ ಧ್ವನಿವರ್ಧಕಗಳ ಬಳಕೆಗೆ ಮಿತಿ ಇರಬೇಕು. ಪ್ರಾರ್ಥನೆಯನ್ನು ಪ್ರಸಾರ ಮಾಡುವಂತಿಲ್ಲ. ಮಸೀದಿಗೆ ಬರುವ ಪ್ರತಿಯೊಬ್ಬರೂ ಐಡಿ ಕಾರ್ಡ್ ಹೊಂದಿರಬೇಕು.
ಪ್ರಾರ್ಥನೆ ಅವಧಿ ಕಡಿಮೆ ಇರಬೇಕು. ಪ್ರಾರ್ಥನೆ ಸಮಯದ ಫೋಟೋಗಳನ್ನು ಕ್ಲಿಕ್ಕಿಸುವಂತಿಲ್ಲ. ಉಪವಾಸ ಇರುವವರಿಗೆ ಆಹಾರ ವಿತರಣೆಗಾಗಿ ನಿಧಿ ಸಂಗ್ರಹಿಸುವಂತಿಲ್ಲ. ಇಫ್ತಾರ್‌ಗಾಗಿ ತಾತ್ಕಾಲಿಕ ಟೆಂಟ್ ಅಥವಾ ಕೊಠಡಿಗಳನ್ನು ತೆರೆಯುವಂತಿಲ್ಲ. ಸೂಕ್ತ ಐಡಿ ಕಾರ್ಡ್ ಇಲ್ಲದೇ ಇತ್ತಿಕಾಫ್ಗೆ ಯಾರಿಗೂ ಪ್ರವೇಶ ನೀಡುವಂತಿಲ್ಲ ಎಂದು ತಿಳಿಸಲಾಗಿದೆ. ಇದಕ್ಕೆ ಜಗತ್ತಿನಾದ್ಯಂತ ಮುಸ್ಲಿಮರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.