30 ವರ್ಷದವರೆಗೆ… ಯುವತಿಗೆ ಡೇಟಿಂಗ್ ಸಲಹೆ ಕೊಟ್ಟ ಅಧ್ಯಕ್ಷ ಜೋ ಬಿಡೆನ್: ವಿಡಿಯೋ ವೈರಲ್
Team Udayavani, Oct 16, 2022, 5:56 PM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಯುವತಿಯೊಬ್ಬಳಿಗೆ ಹೇಳಿದ ಮಾತಿನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶುಕ್ರವಾರ ಕ್ಯಾಲಿಫೋರ್ನಿಯಾದ ಇರ್ವಿನ್ ವ್ಯಾಲಿ ಕಾಲೇಜಿನಲ್ಲಿ ಆಡಳಿತದ ನೀತಿಗಳು ಮತ್ತು ಹಣದುಬ್ಬರವನ್ನು ಕಡಿಮೆ ಮಾಡುವ ಯೋಜನೆಗಳ ಬಗ್ಗೆ ಮಾತಾನಾಡಿದ ಬಳಿಕ ವೇದಿಕೆಯಿಂದಿಳಿದು ಬಂದು, ವಿದ್ಯಾರ್ಥಿಗಳ ಜೊತೆ ವಿದ್ಯಾರ್ಥಿಗಳ ಜೊತೆ ಫೋಟೋ ತೆಗೆಯುವ ವೇಳೆ ಆಪ್ತವಾಗಿ ನಗುಮುಖದಿಂದ ಪೋಸ್ ಕೊಟ್ಟ ಜೋ ಬಿಡೆನ್ ವಿದ್ಯಾರ್ಥಿಯೊಬ್ಬಳಿಗೆ ಕೊಟ್ಟ ಸಲಹೆ ವೈರಲ್ ಆಗಿದೆ.
ಯುವತಿಯ ಹೆಗಲ ಮೇಲೆ ಮೆಲ್ಲಗೆ ಕೈಯಿಟ್ಟು, “ನಾನು ನನ್ನ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಬಹಳ ಮುಖ್ಯವಾದ ವಿಷಯ ಹೇಳುತ್ತೇನೆ, 30 ವರ್ಷದವರೆಗೆ ಯಾವುದನ್ನು ಗಂಭೀರವಾಗಿ ಮಾಡಬೇಡಿ” ಎಂದಿದ್ದಾರೆ.
ಅಧ್ಯಕ್ಷರು ಹೆಗಲ ಮೇಲೆ ಕೈ ಹಾಕಿ ಈ ರೀತಿ ಹೇಳಿದಕ್ಕೆ ಪೇಚಿಗೆ ಸಿಲುಕಿದ ಯುವತಿ, ನಾಚಿಕೆಯಿಂದ ನಕ್ಕು, “ ಆಯಿತು ನಾನು ಇದನ್ನು ತಲೆಯಲ್ಲಿಟ್ಟುಕೊಳ್ಳುತ್ತೇನೆ” ಎಂದು ಹೇಳಿ ನಕ್ಕಿದ್ದಾರೆ.
ಈ ವಿಡಿಯೋ 5 ಮಿಲಿಯನ್ ಗೂ ಹೆಚ್ಚಿಗೆ ವೀವ್ಸ್ ಪಡೆದುಕೊಂಡಿದ್ದು, ಉಚಿತವಾಗಿ ಡೇಟಿಂಗ್ ಸಲಹೆ ನೀಡಿದ ಜೋ ಬಿಡೆನ್ ಬಗ್ಗೆ ನೆಟ್ಟಿಗರು ‘ಯುವತಿ ಅಲ್ಲಿ ಆರಾಮದಾಯಕವಾಗಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ‘ಇಲ್ಲ ಅವಳು ಆರಾಮದಾಯಕವಾಗಿ ಇದ್ದಾಳೆ. ಅದು ಅವಳ ಶಿಸ್ತಿನ ಅಪ್ಪ ಹೇಳಿದ ಮಾತಿನಂತಿದೆ’ ಎಂದಿದ್ದಾರೆ.
President Joe Biden grabs a young girl by the shoulder and tells her “no serious guys till your 30” as she looks back appearing uncomfortable, secret service appears to try to stop me from filming it after Biden spoke @ Irvine Valley Community College | @TPUSA @FrontlinesShow pic.twitter.com/BemRybWdBI
— Kalen D’Almeida (@fromkalen) October 15, 2022
I’m surprised they didn’t try and take your phone?
— Gwen Smith ?? (@gwenssmith) October 15, 2022
She doesn’t look uncomfortable. It was a typical dad thing to say.
— Penna Proud (@ProudPenna) October 15, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.