ಕೋವಿಡ್ 19 ವೈರಸ್ ಸುಳ್ಳು: ಕಣ್ಣೀರು ಹಾಕುತ್ತಿರುವ ಫೋಟೋ ಇಟಲಿ ಪ್ರಧಾನಿಯದ್ದಲ್ಲ
Team Udayavani, Mar 25, 2020, 1:34 AM IST
ಕೋವಿಡ್ 19 ವೈರಸ್ ವ್ಯಾಪಿಸುತ್ತಿರುವಷ್ಟೇ ವೇಗದಲ್ಲಿ ಅದರ ಕುರಿತಾದ ಸುಳ್ಳು ಸುದ್ದಿಗಳೂ ವ್ಯಾಪಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವ ಸುದ್ದಿಗಳ ಸತ್ಯ ದರ್ಶನ ಇಲ್ಲಿರುತ್ತದೆ.
ಕೋವಿಡ್ 19 ವೈರಸ್ ನಿಂದ ತತ್ತರಿಸಿರುವ ಇಟಲಿಯಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ನಿಜ. ಆದರೆ ಭಾರೀ ಪ್ರಮಾಣದ ಸಾವು-ನೋವಿನಿಂದ ದುಃಖಿತರಾಗಿ ಹಾಗೂ ಶ್ಮಶಾನದಲ್ಲಿ ಮೃತದೇಹಗಳನ್ನು ಹೂಳಲು ಜಾಗವೂ ಸಿಗುತ್ತಿಲ್ಲ ಎಂದು ಹೇಳುತ್ತಾ ಇಟಲಿ ಪ್ರಧಾನಿ ಕಣ್ಣೀರು ಹಾಕುತ್ತಿದ್ದಾರೆ ಎಂದು ಹೇಳಲಾದ ಫೋಟೋ ಸಮೇತ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೊರೊನಾ ಸಂಕಟವನ್ನು ತಾಳಲಾರದೇ ಇಟಲಿ ಪ್ರಧಾನಿ ಕಣ್ಣೀರಿಟ್ಟಿದ್ದು ಹೀಗೆ ಎಂಬ ಶೀರ್ಷಿಕೆಯನ್ನೂ ಆ ಫೋಟೋಗೆ ನೀಡಲಾಗಿದೆ.
ಆದರೆ ಇದು ಕೂಡ ಸುಳ್ಳು ಸುದ್ದಿಯ ಸರಣಿಗೆ ಸೇರ್ಪಡೆಯಾಗಿದೆ. ಏಕೆಂದರೆ ಆ ಫೋಟೋದಲ್ಲಿರುವ ವ್ಯಕ್ತಿ ಇಟಲಿ ಪ್ರಧಾನಿ ಅಲ್ಲ. ಬದಲಿಗೆ ಅದು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೋ ಅವರದ್ದು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸೆರೆಹಿಡಿಯಲಾದ ಫೋಟೋ ಇದು. ತಮ್ಮ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೋಲ್ಸೊನಾರೋ ಅವರು, 2018ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮ್ಮ ಮೇಲಾದ ಚೂರಿ ದಾಳಿಯನ್ನು ಸ್ಮರಿಸಿಕೊಂಡು ಕಣ್ಣೀರು ಹಾಕಿದ್ದರು. ಅದೇ ಫೋಟೋವನ್ನು ಈಗ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಅದನ್ನು ಇಟಲಿ ಪ್ರಧಾನಿ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ಅಮೆರಿಕದಲ್ಲಿ ಔಷಧ
ಸದ್ಯ ಕೊರೊನಾ ಮಹಾಮಾರಿ ಜಗತ್ತಿನ ಅನೇಕ ದೇಶಗಳ ಜನರ ಬಲಿ ಪಡೆಯುತ್ತಿರುವಂತೆಯೇ, ಅದನ್ನು ತಡೆಯುವ ನಿಟ್ಟಿನಲ್ಲಿ ಲಸಿಕೆಗಳು ಮತ್ತು ಔಷಧಗಳ ಸಂಶೋಧನೆಯಲ್ಲಿ ವಿಜ್ಞಾನಿಗಳು ನಿರತರಾಗಿದ್ದಾರೆ. ಇದೇ ವೇಳೆ ಅಮೆರಿಕದ ವಿಜ್ಞಾನಿಗಳು ಕೋವಿಡ್ – 19 ತಡೆಗೆ ಲಸಿಕೆ ಕಂಡು ಹಿಡಿದಿದ್ದಾರೆ.
ಇದನ್ನು ರೋಗಿಗೆ ನೀಡಿದ 3 ಗಂಟೆಗಳಲ್ಲಿ, ಚೇತರಿಕೆ ಕಾಣಲಿದೆ. ಈ ವಿಷಯವನ್ನು ಅಮೆರಿಕ ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ 2-3 ದಿನಗಳಿಂದ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟಪಡಿಸಿರುವ ವೈದ್ಯಕೀಯ ವಿಜ್ಞಾನಿಗಳು, ಇದೆಲ್ಲವೂ ಸದ್ಯಕ್ಕೆ ಸತ್ಯಕ್ಕೆ ದೂರವಾದ ಸಂಗತಿಗಳು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.