ಪಾಕ್ ನಲ್ಲಿ ರಾಜಕೀಯ ಹೈಡ್ರಾಮಾ: ಅವಿಶ್ವಾಸ ನಿರ್ಣಯವನ್ನೇ ವಜಾಗೊಳಿಸಿದ ಡೆಪ್ಯುಟಿ ಸ್ಪೀಕರ್
Team Udayavani, Apr 3, 2022, 1:13 PM IST
ಇಸ್ಲಮಾಬಾದ್: ಪಾಕಿಸ್ಥಾನದ ರಾಜಕೀಯ ಅನಿಶ್ಚಿತತೆ ಮುಂದುವರಿದಿದೆ. ಪ್ರಧಾನ ಮಂತ್ರಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಡೆಪ್ಯುಟಿ ಸ್ಪೀಕರ್ ವಜಾಗೊಳಿಸಿದ್ದಾರೆ. ಇದರಿಂದ ಇಮ್ರಾನ್ ಖಾನ್ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಭದ್ರತಾ ಬೆದರಿಕೆಯನ್ನು ಉಲ್ಲೇಖಿಸಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಡೆಪ್ಯುಟಿ ಸ್ಪೀಕರ್ ವಜಾಗೊಳಿಸಿದ್ದಾರೆ. ಇಂದು ಸಂಸತ್ ಕಲಾಪ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ, ಡೆಪ್ಯುಟಿ ಸ್ಪೀಕರ್ ಕಲಾಪವನ್ನು ಏಪ್ರಿಲ್ 25ರವರೆಗೆ ಮುಂದೂಡಿದ್ದಾರೆ.
ತಮ್ಮ ಸರ್ಕಾರದ ವಿರುದ್ಧ ರೂಪಿಸಲಾದ ವಿದೇಶಿ ಪಿತೂರಿ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ನಡೆಸುವಂತೆ ದೇಶದ ಯುವಕರಿಗೆ ಇಮ್ರಾನ್ ಖಾನ್ ಇಂದು ಬೆಳಗ್ಗೆ ಕರೆ ನೀಡಿದ್ದರು.
ಒಟ್ಟು 342 ಸಂಸದರನ್ನು ಹೊಂದಿರುವ ಪಾಕ್ ನಲ್ಲಿ ಪ್ರಧಾನಿಯಾಗಿ ಮುಂದುವರೆಯಲು ಇಮ್ರಾನ್ ಖಾನ್ 172 ಸಂಸದರ ಬೆಂಬಲ ಪಡೆಯಬೇಕಿತ್ತು. ಪ್ರತಿಪಕ್ಷಗಳು ತಮಗೆ 175 ಸಂಸದರ ಬೆಂಬಲವಿದೆ ಎಂದು ಹೇಳಿಕೊಂಡಿವೆ.
ಇದನ್ನೂ ಓದಿ:ಮಹಿಳೆಗೆ ಹಲ್ಲೆ ಪ್ರಕರಣ: ಆಸಿಫ್ ಆಪದ್ಭಾಂಧವ ಸೇರಿ ಮೂವರ ಬಂಧನ
ಮಾರ್ಚ್ 8ರಂದು ರಾಷ್ಟ್ರದ ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರ ಹೆಚ್ಚಳಕ್ಕೆ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವೇ ಕಾರಣ ಎಂದು ಆರೋಪಿಸಿ, ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ಸೆಕ್ರೆಟರಿಯೇಟ್ ಗೆ ಮಾರ್ಚ್ 8ರಂದು ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದ್ದವು.
ಮಾರ್ಚ್ 25ರಂದು ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಕುರಿತು ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ನಿರ್ಣಾಯಕ ಅಧಿವೇಶನವು ಪ್ರತಿಪಕ್ಷದ ಶಾಸಕರ ಗದ್ದಲದ ಪ್ರತಿಭಟನೆಯ ನಡುವೆ ನಿರ್ಣಯವನ್ನು ಮಂಡಿಸದೆ ಮುಂದೂಡಲ್ಪಟ್ಟಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.