Nobel ವಿಜೇತ ಅರ್ಥಶಾಸ್ತ್ರಜ್ಞ ಡಾ. ಮಹಮ್ಮದ್ ಯೂನಸ್ ಅವರಿಗೆ ಜೈಲು ಶಿಕ್ಷೆ
Team Udayavani, Jan 1, 2024, 7:29 PM IST
ಢಾಕಾ: ಕಾರ್ಮಿಕ ಕಾನೂನು ಉಲ್ಲಂಘನೆಯ ಆರೋಪದ ಮೇಲೆ ಬಾಂಗ್ಲಾದೇಶದ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಡಾ. ಮಹಮ್ಮದ್ ಯೂನಸ್ ಅವರಿಗೆ ನ್ಯಾಯಾಲಯವು ಸೋಮವಾರ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಈ ಬೆಳವಣಿಗೆಯನ್ನು ಯೂನಸ್ ಅವರ ಬೆಂಬಲಿಗರು ರಾಜಕೀಯ ಪ್ರೇರಿತ ಎಂದು ಆಕ್ರೋಶ ಹೊರ ಹಾಕಿದ್ದಾರೆ.
“ಯೂನಸ್ ವಿರುದ್ಧ ಕಾರ್ಮಿಕ ಕಾನೂನು ಉಲ್ಲಂಘಿಸಿದ ಆರೋಪ ಸಾಬೀತಾಗಿದ್ದು, ಆಪಾದನೆಯನ್ನು ಮಿತಿಯಿಂದ ತಡೆಹಿಡಿಯಲಾಗಿಲ್ಲ ಎಂದು ತೋರುತ್ತದೆ ”ಎಂದು ಲೇಬರ್ ನ್ಯಾಯಾಲಯದ ನ್ಯಾಯಾಧೀಶೆಯಾದ ಶೇಖ್ ಮೆರಿನಾ ಸುಲ್ತಾನಾ ತೀರ್ಪು ಪ್ರಕಟಿಸುವಾಗ ಹೇಳಿದ್ದಾರೆ.
ಮೂರನೇ ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶರು, ನ್ಯಾಯಾಲಯದಲ್ಲಿ ಹಾಜರಿದ್ದ 83 ವರ್ಷದ ಯೂನಸ್ ಅವರು ಸಾಮಾಜಿಕ ವ್ಯವಹಾರದ ಇತರ ಮೂವರು ಕಾರ್ಯನಿರ್ವಾಹಕರೊಂದಿಗೆ ಗ್ರಾಮೀಣ ಟೆಲಿಕಾಂ ಅಧ್ಯಕ್ಷರಾಗಿ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಆರು ತಿಂಗಳ ಸರಳ ಅಥವಾ ಕಠಿಣವಲ್ಲದ ಜೈಲು ಶಿಕ್ಷೆಯನ್ನು ಅನುಭವಿಸಲಿದ್ದಾರೆ ಎಂದು ತೀರ್ಪು ನೀಡಿ,25,000 ಟಕಾ ದಂಡವನ್ನು ವಿಧಿಸಿ, ತಪ್ಪಿದಲ್ಲಿ ಇನ್ನೂ 10 ದಿನ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ತೀರ್ಪಿನ ನಂತರ, ಯೂನಸ್ ಮತ್ತು ಇತರ ಮೂವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. 5,000 ಬಾಂಡ್‌ಗೆ ಬದಲಾಗಿ ನ್ಯಾಯಾಧೀಶರು ತತ್ ಕ್ಷಣವೇ ಒಂದು ತಿಂಗಳ ಜಾಮೀನು ನೀಡಿದ್ದಾರೆ. ಕಾನೂನಿನ ಪ್ರಕಾರ, ಯೂನಸ್ ಮತ್ತು ಇತರ ಮೂವರು ಹೈಕೋರ್ಟ್‌ನಲ್ಲಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ.
ಯೂನಸ್ ಅವರು ಗ್ರಾಮೀಣ ಬ್ಯಾಂಕ್ ಮೂಲಕ ಬಡತನ ವಿರೋಧಿ ಅಭಿಯಾನಕ್ಕಾಗಿ 2006 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.