ಜಗತ್ತಿನ ಹಸಿವು ನೀಗಿಸಲು ಹೊರಟ WFP ಸಂಸ್ಥೆಗೆ ನೊಬೆಲ್ ಶಾಂತಿ ಪುರಸ್ಕಾರದ ಗರಿ
Team Udayavani, Oct 9, 2020, 4:24 PM IST
ಮಣಿಪಾಲ: ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ) ಸಂಸ್ಥೆ 2020 ರ ಶಾಂತಿ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದೆ. ನಾರ್ವೇಯ ನೊಬೆಲ್ ಸಮಿತಿ ಅಧ್ಯಕ್ಷ ಬೆರಿಟ್ ರೈಸ್ ಆಂಡರ್ಸನ್ ಅವರು ಶಾಂತಿ ನೊಬೆಲ್ ಪ್ರಶಸ್ತಿಯನ್ನು ಶುಕ್ರವಾರ ಪ್ರಕಟಿಸಿದ್ದಾರೆ. 2019 ರಲ್ಲಿ 88 ದೇಶಗಳಿಂದ ಸುಮಾರು 97 ಮಿಲಿಯನ್ ಜನರು ವಿಶ್ವ ಆಹಾರ ಕಾರ್ಯಕ್ರಮದಿಂದ ಪ್ರಯೋಜನ ಪಡೆದುಕೊಂಡಿದ್ದು ಈ ಹಿನ್ನೆಲೆಯಲ್ಲಿ ಈ ಸಂಸ್ಥೆ ಅರ್ಹವಾಗಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಈ ವರ್ಷ ಶಾಂತಿ ನೊಬೆಲ್ ಪ್ರಶಸ್ತಿಗಾಗಿ 318 ನಾಮನಿರ್ದೇಶನಗಳು ಬಂದವು. ಇದರಲ್ಲಿ 211 ವ್ಯಕ್ತಿಗಳು ಮತ್ತು 107 ಸಂಸ್ಥೆಗಳು ಸೇರಿದ್ದವು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರೂ ಇದೆ ಎಂದು ವರದಿಯಾಗಿದೆ.
WFP is deeply humbled to receive the 2020 #NobelPeacePrize.
This is in recognition of the work of WFP staff who put their lives on the line every day to bring food and assistance to more than 100 million hungry children, women and men across the world. pic.twitter.com/cjHOtqLcLk
— World Food Programme (@WFP) October 9, 2020
ಡಬ್ಲ್ಯುಎಫ್‌ಪಿ ಕಾರ್ಯಕ್ರಮವು ಹಸಿವನ್ನು ನಿರ್ಮೂಲನೆ ಮಾಡಲು ಮತ್ತು ವಿಶ್ವಾದ್ಯಂತ ಆಹಾರ ಸುರಕ್ಷತೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿರುವ ದೊಡ್ಡ ಸಂಸ್ಥೆಯಾಗಿದೆ. ಕೋವಿಡ್ ಯುಗದಲ್ಲಿ ವಿಶ್ವದಾದ್ಯಂತ ಅಗತ್ಯವಿರುವವರಿಗೆ ಆಹಾರ ಮತ್ತು ಸಹಾಯ ಮಾಡುವಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸಿತ್ತು ಎಂಬುದು ಉಲ್ಲೇಖನೀಯ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವಿಶ್ವ ಆಹಾರ ಕಾರ್ಯಕ್ರಮದ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಕೋವಿಡ್ ಬಳಿಕ ಬಡತನದ ಪ್ರಮಾಣ ಹೆಚ್ಚಾಗಿದ್ದು, ಹಸಿವಿನೊಂದಿಗೆ ಹೋರಾಡುವ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕೋವಿಡ್‌ಗೆ ಲಸಿಕೆ ಲಭ್ಯವಿಲ್ಲದಿದ್ದರೂ ಜನರಿಗೆ ಆಹಾರವು ಅತ್ಯುತ್ತಮ ಲಸಿಕೆ ಎಂಬುದು ಸಂಸ್ಥೆ ಅಭಿಪ್ರಾಯ.
ನೊಬೆಲ್ ಪಡೆಯುವ ಮೂಲಕ ತನ್ನ ಸಿಬಂದಿಯ ಕಾರ್ಯವನ್ನು ಗುರುತಿಸಲಾಗಿದೆ ಎಂದು ವಿಶ್ವ ಆಹಾರ ಕಾರ್ಯಕ್ರಮ ಹೇಳಿದೆ. ಇದು 100 ದಶಲಕ್ಷಕ್ಕೂ ಹೆಚ್ಚು ಹಸಿದ ಮಕ್ಕಳು ಸೇರಿದಂತೆ ಎಲ್ಲರಿಗೂ ಸಹಾಯ ಮಾಡಲು ತನ್ನ ಸಂಪೂರ್ಣ ಪರಿಶ್ರಮದ ಮೂಲಕ ಹೋರಾಡಿದೆ.
ಏನಿದು ಡಬ್ಲ್ಯುಎಫ್‌ಪಿ ?
ವಿಶ್ವ ಆಹಾರ ಕಾರ್ಯಕ್ರಮವು ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮಕ್ಕೆ ಸಂಬಂಧಿಸಿದ ಒಂದು ಸಂಸ್ಥೆಯಾಗಿದೆ. ಇದು ತೀರಾ ಬಡತನದಲ್ಲಿರುವವರಿಗೆ ಮತ್ತು ಅಗತ್ಯವಿರುವವರಿಗೆ ಆಹಾರವನ್ನು ನೀಡುತ್ತದೆ. ಆಹಾರ ಭದ್ರತೆಯನ್ನು ಉತ್ತೇಜಿಸುವಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಸಂಘಟನೆಯನ್ನು 1961ರಲ್ಲಿ ರಚಿಸಲಾಯಿತು.
BREAKING NEWS:
The Norwegian Nobel Committee has decided to award the 2020 Nobel Peace Prize to the World Food Programme (WFP).#NobelPrize #NobelPeacePrize pic.twitter.com/fjnKfXjE3E— The Nobel Prize (@NobelPrize) October 9, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.