ವಿಶ್ವವಿಜ್ಞಾನದ ತ್ರಿಮೂರ್ತಿಗಳಿಗೆ ಭೌತ ನೊಬೆಲ್
Team Udayavani, Oct 9, 2019, 4:49 AM IST
ಸ್ಟಾಕ್‌ಹೋಂ: ಬ್ರಹ್ಮಾಂಡದಲ್ಲಿ ಭೂಮಿಯ ಅಸ್ತಿತ್ವದ ಕುರಿತು ಹೆಚ್ಚಿನ ಮಾಹಿತಿ ಒದಗಿಸುವಲ್ಲಿ ಕೊಡುಗೆ ನೀಡಿರುವ ವಿಶ್ವವಿಜ್ಞಾನದ ತ್ರಿಮೂರ್ತಿಗಳಿಗೆ ಪ್ರಸಕ್ತ ಸಾಲಿನ ಭೌತ ನೊಬೆಲ್ ಸಂದಿದೆ.
ಕೆನಡಾ-ಅಮೆರಿಕನ್ ಕಾಸ್ಮಾಲಜಿಸ್ಟ್ ಜೇಮ್ಸ್ ಪೀಬಲ್ಸ್ ಮತ್ತು ಸ್ವಿಸ್ ಖಗೋಳ ವಿಜ್ಞಾನಿಗಳಾದ ಮೈಕಲ್ ಮೇಯರ್ ಮತ್ತು ಡಿಡಿಯೆರ್ ಕ್ವೆಲೊಸ್ ಅವರು ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
ಬಿಗ್ ಬ್ಯಾಂಗ್(ಮಹಾಸ್ಫೋಟ) ಬಳಿಕ ಬ್ರಹ್ಮಾಂಡವು ಹೇಗೆ ರೂಪುಗೊಂಡಿತು ಎಂಬುದನ್ನು ಅರ್ಥಮಾಡಿಸಿಕೊಡುವಂಥ ಸಂಶೋಧನೆ ಗಾಗಿ ಪೀಬಲ್ಸ್ ಅವರಿಗೆ ಈ ಪ್ರಶಸ್ತಿ ಸಂದಿದೆ.
ಇನ್ನು ಮೇಯರ್ ಹಾಗೂ ಕ್ವೆಲೊಸ್ ಅವರಿಗೆ ಸೌರವ್ಯವಸ್ಥೆಯ ಹೊರಗೆ ಇರುವಂಥ ಗೃಹ (ಎಕ್ಸೋಪ್ಲಾನೆಟ್)ವೊಂದನ್ನು ಆವಿಷ್ಕರಿ ಸಿದ್ದಕ್ಕಾಗಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಇವರ ಆವಿಷ್ಕಾರಗಳು ವಿಶ್ವದ ಕುರಿತ ನಮ್ಮ ಪರಿಕಲ್ಪನೆಗಳನ್ನೇ ಬದಲಾಯಿಸಿದವು ಎಂದು ಜೂರಿ ಹೇಳಿದೆ.
ಭೌತ ನೊಬೆಲ್ ಪ್ರಶಸ್ತಿಯು ಚಿನ್ನದ ಪದಕ, ಡಿಪ್ಲೊಮಾ ಮತ್ತು 9.14 ಲಕ್ಷ ಡಾಲರ್(6.50 ಕೋಟಿ ರೂ.) ನಗದು ಪುರಸ್ಕಾರವನ್ನು ಒಳಗೊಂಡಿದೆ.
ಡಿ. 10ರಂದು ಪ್ರದಾನ
ಡಿ. 10ರಂದು ಸ್ಟಾಕ್‌ಹೋಂನಲ್ಲಿ ನಡೆಯುವ ಸಮಾರಂಭದಲ್ಲಿ ನೊಬೆಲ್ ಪ್ರದಾನ ಮಾಡಲಾಗುತ್ತದೆ.
ಮೂವರಿಗೆ ವೈದ್ಯ ನೊಬೆಲ್
ಕೋಶಗಳು ಹೇಗೆ ಆಮ್ಲಜನಕದ ಲಭ್ಯತೆಯನ್ನು ಗ್ರಹಿಸಿ, ಅದನ್ನು ಅಳವಡಿಸಿಕೊಳ್ಳುತ್ತವೆ ಎಂಬುದರ ಬಗ್ಗೆ ಸಂಶೋಧನೆ ನಡೆಸಿದ ವಿಜ್ಞಾನಿಗಳಾದ ವಿಲಿಯಂ ಜೆ. ಕೇಲಿನ್ ಜೂನಿಯರ್, ಪೀಟರ್ ಜೆ. ರ್ಯಾಟ್‌ಕ್ಲಿಫ್ ಮತ್ತು ಗ್ರೆಗ್ ಎಲ್. ಸೆಮೆನಾl ಅವರು ಈ ಬಾರಿಯ ವೈದ್ಯ ನೊಬೆಲ್ ಅನ್ನು ಹಂಚಿಕೊಂಡಿದ್ದಾರೆ.
ಆಮ್ಲಜನಕದ ಮಟ್ಟದಲ್ಲಿ ಆಗುವ ಬದಲಾವಣೆಗಳಿಗೂ ಕೋಶಗಳು ಸ್ಪಂದಿಸುವಂತೆ ಮಾಡುವ ಆನುವಂಶಿಕ ಮೆಕ್ಯಾನಿಸಂ ಕುರಿತು ಈ ಮೂವರು ಅಧ್ಯಯನ ನಡೆಸಿದ್ದಾರೆ. ಇವರ ಸಂಶೋಧನೆಯಿಂದಾಗಿ ಕ್ಯಾನ್ಸರ್, ಅನೀಮಿಯಾ, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂಥ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ ಎಂದು ತೀರ್ಪುಗಾರರ ತಂಡ ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.