ಬಂದಿದೆ ನೋಕಿಯಾದ 48 ಮೆಗಾಪಿಕ್ಸೆಲ್ ಕೆಮರಾ ಫೋನ್
Team Udayavani, Sep 19, 2019, 6:00 PM IST
ಬೀಜಿಂಗ್: ಹಬ್ಬಗಳ ಸೀಸನ್ ಆರಂಭವಾಗುತ್ತಿರುವಂತೆಯೇ, ವಿವಿಧ ಕಂಪೆನಿಗಳು ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡತೊಡಗಿವೆ. ಮೊಬೈಲ್ ಮಾರುಕಟ್ಟೆಯಲ್ಲೂ ಪಾರಮ್ಯ ಸಾಧಿಸಲು ಯತ್ನಿಸುತ್ತಿರುವ ನೋಕಿಯಾ ಮೊಬೈಲ್ ತಯಾರಿಸುತ್ತಿರುವ ಎಚ್‌ಎಂಡಿ ಗ್ಲೋಬಲ್ ಕಂಪೆನಿ ಹೊಸ ನೋಕಿಯಾ 7.2 ಮೊಬೈಲ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
48 ಮೆಗಾಪಿಕ್ಸೆಲ್‌ನ ಕೆಮೆರಾ ಹೊಂದಿರುವ ಈ ಫೋನ್ 4ಜಿಬಿ ರ್ಯಾಮ್ ಮತ್ತು 64 ಜಿಬಿ ರೋಮ್, 6ಜಿಪಿ ರ್ಯಾಮ್ ಮತ್ತು 64 ಹಿಬಿ ರೋಮ್ ಆವೃತ್ತಿಯಲ್ಲಿ ಲಭ್ಯವಿದೆ. ಇವುಗಳ ಬೆಲೆ ತಲಾ 18,599 ರೂ. ಮತ್ತು 19599 ರೂ. ಆಗಿದೆ. ಒಟ್ಟು ಎರಡು ಬಣ್ಣಗಳಲ್ಲಿ ಮೊಬೈಲ್ ಲಭ್ಯವಿದೆ. ಫೋನ್‌ನ ಹಿಂಭಾಗದಲ್ಲಿ ಮೂರು ಕೆಮರಾಗಳು ಇವೆ. ಇದರಲ್ಲಿ 48 ಮೆಗಾಪಿಕ್ಸೆಲ್‌ನ ಪ್ರೈಮರಿ ಕೆಮರಾ, 5 ಮೆಗಾಪಿಕ್ಸೆಲ್‌ನ ಡೆಪ್ತ್ ಸೆನ್ಸರ್, 8 ಮೆಗಾಪಿಕ್ಸೆಲ್‌ನ ವೈಡ್ ಆ್ಯಂಗಲ್ ಲೆನ್ಸ್ ಇರಲಿದೆ. ಸೆಲ್ಫಿà ಪ್ರಿಯರಿಗಾಗಿ ಮುಂಭಾಗದಲ್ಲಿ 20 ಮೆಗಾಪಿಕ್ಸೆಲ್‌ನ ಕೆಮರಾ ಇರಲಿದೆ. ಝೈಸ್ ಆಪ್ಟಿಕ್ಸ್‌ನ ಕೆಮರಾ ಇದಾಗಿದ್ದು, ಹೆಚ್ಚು ಸ್ಪಷ್ಟ ಚಿತ್ರಗಳನ್ನು ಕೊಡಲಿದೆ.
ವಿಶೇಷತೆಯೇನು?
ಆ್ಯಂಡ್ರಾಯಿಡ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಈ ಫೋನ್ ಆ್ಯಂಡ್ರಾಯಿಡ್ ಪೈ ಹೊಂದಿದ್ದು ಮುಂದೆ ಆ್ಯಂಡ್ರಾಯಿಡ್ 10 ಆವೃತ್ತಿಗೆ ಮುಂದಿನ ದಿನಗಳಲ್ಲಿ ಅಪ್ಡೆàಟ್ ಆಗಲಿದೆ.6.3 ಇಂಚಿನ ಎಫ್ಎಚ್‌ಡಿ ಡಿಸ್ಪೆ$Éà, ಗೊರಿಲ್ಲಾ ಗ್ಲಾಸ್ 3 ಸುರಕ್ಷತೆ, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್, 3500 ಎಮ್‌ಎಚ್‌ನ ಬ್ಯಾಟರಿ ಹೊಂದಿದೆ. ಜತೆಗೆ ಯುಎಸ್‌ಬಿ ಟೈಪ್ ಸಿ ಪೋರ್ಟ್ ಇದೆ. ಇದರೊಂದಿಗೆ ಗೂಗಲ್ ಅಸಿಸ್ಟೆನ್ಸ್ ಬಟನ್, ರಿಯರ್ ಫೇಸಿಂಗ್ ಫಿಂಗರ್ ಪ್ರಿಂಟ್ ಸೆನ್ಸರ್, ಎನ್‌ಎಫ್ಸಿ, ಬ್ಲೂಟೂತ್ 5.0 ಸೌಲಭ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.