ಉತ್ತರ ಕೊರಿಯಾ: ಸರ್ವಾಧಿಕಾರಿ ಕಿಮ್ ಮಗಳ ಹೆಸರು ಯಾರೂ ಇಡುವಂತಿಲ್ಲ!
Team Udayavani, Feb 17, 2023, 7:45 AM IST
ಪ್ಯಾಂಗ್ಯಾಂಗ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ನ ಆಡಳಿತದಲ್ಲಿ ದೇಶದ ಹೆಣ್ಣು ಮಕ್ಕಳಿಗಿರುವ ಕಟ್ಟುಪಾಡುಗಳು ಜಗತ್ತಿಗೆ ಗೊತ್ತಿಲ್ಲದ ವಿಚಾರವೇನಲ್ಲ.ಇದೀಗ ಆ ಕಟ್ಟುಪಾಡು ಹೆಸರಿಗೂ ಅನ್ವಯಿಸಲಿದ್ದು, ಇನ್ನು ಮುಂದೆ ತನ್ನ ಮಗಳ ಹೆಸರನ್ನು ದೇಶದ ಯಾವ ಹೆಣ್ಣುಮಕ್ಕಳು ಇಟ್ಟುಕೊಳ್ಳುವಂತಿಲ್ಲ ಎಂದು ಕಿಮ್ ಆದೇಶ ಹೊರಡಿಸಿದ್ದಾರಂತೆ.
ಹೌದು, ಇತ್ತೀಚೆಗಷ್ಟೇ ಮಿಲಿಟರಿ ಪರೇಡ್‌ನಲ್ಲಿ ಕಿಮ್ ಮಗಳು ಜು-ಎ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಳು.
ಇದರ ನಡುವೆ ದೇಶದ ರಕ್ಷಣಾ ಸಚಿವಾಲಯ ಪ್ರಕಟಣೆಯೊಂದನ್ನು ಹೊರಡಿಸಿದೆ. ಅದೇನಂದರೆ ಇನ್ನು ಮುಂದೆ ದೇಶದಲ್ಲಿ ಹುಟ್ಟಲಿರುವ ಯಾವ ಹೆಣ್ಣುಮಕ್ಕಳಿಗೂ ಕಿಮ್ ಪುತ್ರಿ ಜು-ಎ ಹೆಸರು ಇಡುವಂತಿಲ್ಲ. ಅಷ್ಟೇ ಅಲ್ಲ,ಈಗಾಗಲೇ ಈ ಹೆಸರಿನಲ್ಲಿ ಯಾರಾದರೂ ಹೆಣ್ಣು ಮಕ್ಕಳು, ಮಹಿಳೆಯರು ಇದ್ದರೆ ಅವರು ತಮ್ಮ ಹೆಸರನ್ನು ಬದಲಿಸಿಕೊಳ್ಳಬೇಕು. ಹೆಸರು ಬದಲಿಸಿಕೊಳ್ಳಲು 1 ವಾರದ ಗಡುವಷ್ಟೇ ನೀಡುವುದಾಗಿ ಸ್ಥಳೀಯ ಸಂಸ್ಥೆಗಳು ಕೂಡ ಸುತ್ತೋಲೆ ಹೊರಡಿಸಿವೆ ಎಂದು ಸ್ಥಳೀಯರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.