ದಕ್ಷಿಣ ಕೊರಿಯ ಮೇಲೆ ಗಲೀಜು ತುಂಬಿದ ಬಲೂನ್‌ ಹಾರಿಸಿದ ಉ.ಕೊರಿಯ

Team Udayavani, May 30, 2024, 7:25 AM IST

ದಕ್ಷಿಣ ಕೊರಿಯ ಮೇಲೆ ಗಲೀಜು ತುಂಬಿದ ಬಲೂನ್‌ ಹಾರಿಸಿದ ಉ.ಕೊರಿಯ

ಸಿಯೋಲ್‌ (ಉ.ಕೊರಿಯ): 1950ರ ಬಳಿಕ ಉತ್ತರ ಕೊರಿಯ ಮತ್ತು ದಕ್ಷಿಣ ಕೊರಿಯ ನಡುವೆ ನಡೆಯುತ್ತಿರುವ “ಬಲೂನ್‌ ವಾರ್‌’ ಈಗ ವಿಪರೀತಕ್ಕೆ ಹೋಗಿದೆ. ಉತ್ತರ ಕೊರಿಯ ಬಲೂನ್‌ಗಳ ಮೂಲಕ ಮಲ, ಕಸ, ಗೊಬ್ಬರ ತುಂಬಿದ ಪ್ಲಾಸ್ಟಿಕ್‌ಗಳನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯ ಸಾಕ್ಷಿಸಮೇತ ಆರೋಪಿಸಿದೆ.

1950ರಿಂದ 1953ರ ವರೆಗೆ ಎರಡೂ ದೇಶಗಳ ನಡುವೆ ಯುದ್ಧ ನಡೆದಿತ್ತು. ಅನಂತರ ಹೀಗೆ ಬಲೂನ್‌ಗಳ ಮೂಲಕ ಕರಪತ್ರ, ಇತರ ವಸ್ತುಗಳನ್ನು ಹಾರಿಬಿಡುವುದು ನಡೆಯುತ್ತಿತ್ತು. ಈಗ ಪರಿಸ್ಥಿತಿ ಕೆಳಮಟ್ಟಕ್ಕೆ ಹೋಗಿದೆ.
“ಕಸ, ಗೊಬ್ಬರ, ಗಲೀಜು ಪದಾರ್ಥಗಳನ್ನು ಉತ್ತರ ಕೊರಿಯವು ದಕ್ಷಿಣ ಕೊರಿಯಕ್ಕೆ ಹಾರಿ ಬಿಡುತ್ತಿದೆ. ಈ ಅಮಾನವೀಯ ಹಾಗೂ ಕೀಳು ಮಟ್ಟದ ಕೃತ್ಯವನ್ನು ಆ ದೇಶ ನಿಲ್ಲಿಸಬೇಕು’ ಎಂದು ದ.ಕೊರಿಯ ಆರೋಪಿಸಿದೆ.

ದೇಶದ ಗಡಿಭಾಗಗಳಲ್ಲಿ, ರಾಜಧಾನಿ ಸಿಯೋಲ್‌, ಗಿಯಾಂಗ್‌ಸ್ಯಾಂಗ್‌ನಲ್ಲಿ ಕಸವನ್ನು ಉತ್ತರ ಕೊರಿಯ ಇಳಿಸಿದೆ. ಇದು ದೇಶದ ಸುರಕ್ಷೆ ಮತ್ತು ಜನರ ಆರೋಗ್ಯಕ್ಕೆ ಬೆದರಿಕೆಯೊಡ್ಡಿದೆ ಎಂದು ದಕ್ಷಿಣ ಕೊರಿಯ ಬೇಸರ ವ್ಯಕ್ತಪಡಿಸಿದೆ.

ಮಂಗಳವಾರ ರಾತ್ರಿಯಿಂದಲೇ ಉತ್ತರ ಕೊರಿಯ ಇಂತಹ ಕೃತ್ಯವನ್ನು ಆರಂಭಿಸಿದೆ. ಬುಧವಾರ ಬೆಳಗ್ಗೆ ಕಸ, ಗಲೀಜು ತುಂಬಿದ 260 ಬಲೂನ್‌ಗಳು ಪತ್ತೆಯಾಗಿವೆ ಎಂದು ದಕ್ಷಿಣ ಕೊರಿಯದ ಜೆಸಿಎಸ್‌ (ಭದ್ರತಾಪಡೆಗಳ ಜಂಟಿ ಮುಖ್ಯಸ್ಥರು) ಹೇಳಿದ್ದಾರೆ. ಜೆಸಿಎಸ್‌ ಬಿಡುಗಡೆ ಮಾಡಿರುವ ಚಿತ್ರಗಳಲ್ಲಿ, ಪ್ಲಾಸ್ಟಿಕ್‌ ಚೀಲಗಳನ್ನು ಹೊತ್ತಿರುವ ಬಲೂನ್‌ಗಳಲ್ಲಿ ಹರಿದ ಕಾಗದಗಳು, ಪ್ಲಾಸ್ಟಿಕ್‌ ರಾಶಿ, ಗೊಬ್ಬರ, ಇತರ ಕಸಗಳು ಪತ್ತೆಯಾಗಿವೆ. ಗಿಯಾಂಗ್‌ಸಾಂಗ್‌ ಪ್ರಾಂತದ ಆಡಳಿತ, ತನ್ನ ಜನರಿಗೆ ಎಚ್ಚರಿಕೆಯಿಂದಿರಲು ಸೂಚಿಸಿದ್ದು, ಮನೆಯಿಂದ ಹೊರಬರಬೇಡಿ ಎಂದು ಸೂಚಿಸಿದೆ.

ಈ ಕೃತ್ಯದ ಮೂಲಕ ಉತ್ತರ ಕೊರಿಯ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂ ಸಿದೆ ಎಂದು ಜೆಸಿಎಸ್‌ ಆರೋಪಿಸಿದೆ. ದಕ್ಷಿಣ ಕೊರಿಯದ ಹೋರಾಟಗಾರರು ಆಗಾಗ ಉತ್ತರ ಕೊರಿಯಕ್ಕೆ ಕರಪತ್ರ, ಆಹಾರ, ಔಷಧ, ರೇಡಿಯೋ, ದಕ್ಷಿಣ ಕೊರಿಯದ ಸುದ್ದಿ, ಟೀವಿ ಕಾರ್ಯಕ್ರಮಗಳಿರುವ ಯುಎಸ್‌ಬಿಗಳನ್ನು ಕಳುಹಿಸುತ್ತಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಉತ್ತರ ಕೊರಿಯ ಹೀಗೆ ಮಾಡಿದೆ ಎಂದು ವಿಶ್ಲೇಷಿಸಲಾಗಿದೆ.

ಏನಿದು ಬಲೂನ್‌ ವಾರ್‌?
-1950ರಿಂದ 1953ರ ನಡುವೆ ಎರಡೂ ದೇಶಗಳ ಯುದ್ಧ.
-ಅನಂತರ ಬಲೂನ್‌ಗಳ ಮೂಲಕ ಪರಸ್ಪರ ವಸ್ತುಗಳನ್ನು ಕಳಿಸುವ ಪದ್ಧತಿ ಆರಂಭ.
-ಈ ಬಾರಿ ದ. ಕೊರಿಯದ ಕೆಲವು ಹೋರಾಟಗಾರರಿಂದ ಉ. ಕೊರಿಯಕ್ಕೆ ಕರಪತ್ರ, ಔಷಧ, ಆಹಾರ, ಯುಎಸ್‌ಬಿ ರವಾನೆ.
-ಇದಕ್ಕೆ ಪ್ರತಿಯಾಗಿ ಉತ್ತರ ಕೊರಿಯದಿಂದ ಮಲ, ಕಸ ತುಂಬಿದ ಬಲೂನ್‌ಗಳ ರವಾನೆ?

ಟಾಪ್ ನ್ಯೂಸ್

5-kushtagi

Kushtagi: ಕೋತಿ ದಾಳಿಗೆ ಊರಿನ 15 ಜನರಿಗೆ ಗಾಯ; ಕೋತಿ ಸೆರೆಹಿಡಿಯಲು ಮುಂದಾದ ಅರಣ್ಯ ಇಲಾಖೆ

Ballari: ವಾಲ್ಮೀಕಿ ನಿಗಮದ ಪ್ರಕರಣ… ಎರಡನೇ ದಿನವೂ ಮುಂದುವರೆದ ಬಿಜೆಪಿ ಪ್ರತಿಭಟನೆ

Ballari: ವಾಲ್ಮೀಕಿ ನಿಗಮದ ಪ್ರಕರಣ… ಎರಡನೇ ದಿನವೂ ಮುಂದುವರೆದ ಬಿಜೆಪಿ ಪ್ರತಿಭಟನೆ

Mumbai-Nagpur ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಮಂದಿ ದುರ್ಮರಣ, ನಾಲ್ವರು ಗಂಭೀರ

Mumbai-Nagpur ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಮಂದಿ ದುರ್ಮರಣ, ನಾಲ್ವರು ಗಂಭೀರ

ಬಿಹಾರದಲ್ಲಿ ಕುಸಿದು ಬಿತ್ತು ಮತ್ತೊಂದು ಸೇತುವೆ… ಕಳೆದ 11 ದಿನದಲ್ಲಿ ನಡೆದ 5ನೇ ಪ್ರಕರಣ

Bihar: ಕುಸಿದು ಬಿತ್ತು ಮತ್ತೊಂದು ಸೇತುವೆ… ಕಳೆದ 9 ದಿನದಲ್ಲಿ ನಡೆದ 5ನೇ ಪ್ರಕರಣ

4-belthanagdy

Ujire: ಬೆಳ್ಳಂಬೆಳಗ್ಗೆ ಭೀಕರ ಅಪಘಾತ;ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಪ್ರಜ್ವಲ್ ನಿಧನ

3-Shivamogga

Shivamogga: ಅಂಬ್ಯುಲೆನ್ಸ್ – ಬೈಕ್ ಅಪಘಾತ ; ಮೂವರು ಬೈಕ್ ಸವಾರರು ಸಾವು

2-gadag

Gadag: ಪೊಲೀಸರ ಮೇಲೆ‌ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Terror 2

FATF;ಉಗ್ರರಿಗೆ ವಿತ್ತೀಯ ನೆರವು ತಡೆ: ಭಾರತದ ಕ್ರಮಕ್ಕೆ ಮೆಚ್ಚುಗೆ

1-al

Washington; ಬಿಸಿಲಿನ ಬೇಗೆಗೆ ಕರಗಿಯೇ ಹೋಯಿತು ಲಿಂಕನ್‌ ಪ್ರತಿಮೆ!

ISREL

Warning; ಶಿಲಾಯುಗಕ್ಕೆ ಮರಳಿಸುತ್ತೇವೆ ! : ಲೆಬನಾನ್ ಗೆ ಇಸ್ರೇಲ್ ಎಚ್ಚರಿಕೆ

1-telg

America ತೆಲುಗು ಭಾಷಿಗರು 4 ಪಟ್ಟು ಹೆಚ್ಚಳ

1-USSA

India ದಲ್ಲಿ ದ್ವೇಷ ಭಾಷಣ ಹೆಚ್ಚಳ: ಅಮೆರಿಕ ಕಳವಳ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

5-kushtagi

Kushtagi: ಕೋತಿ ದಾಳಿಗೆ ಊರಿನ 15 ಜನರಿಗೆ ಗಾಯ; ಕೋತಿ ಸೆರೆಹಿಡಿಯಲು ಮುಂದಾದ ಅರಣ್ಯ ಇಲಾಖೆ

Ballari: ವಾಲ್ಮೀಕಿ ನಿಗಮದ ಪ್ರಕರಣ… ಎರಡನೇ ದಿನವೂ ಮುಂದುವರೆದ ಬಿಜೆಪಿ ಪ್ರತಿಭಟನೆ

Ballari: ವಾಲ್ಮೀಕಿ ನಿಗಮದ ಪ್ರಕರಣ… ಎರಡನೇ ದಿನವೂ ಮುಂದುವರೆದ ಬಿಜೆಪಿ ಪ್ರತಿಭಟನೆ

Mumbai-Nagpur ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಮಂದಿ ದುರ್ಮರಣ, ನಾಲ್ವರು ಗಂಭೀರ

Mumbai-Nagpur ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಮಂದಿ ದುರ್ಮರಣ, ನಾಲ್ವರು ಗಂಭೀರ

ಬಿಹಾರದಲ್ಲಿ ಕುಸಿದು ಬಿತ್ತು ಮತ್ತೊಂದು ಸೇತುವೆ… ಕಳೆದ 11 ದಿನದಲ್ಲಿ ನಡೆದ 5ನೇ ಪ್ರಕರಣ

Bihar: ಕುಸಿದು ಬಿತ್ತು ಮತ್ತೊಂದು ಸೇತುವೆ… ಕಳೆದ 9 ದಿನದಲ್ಲಿ ನಡೆದ 5ನೇ ಪ್ರಕರಣ

4-belthanagdy

Ujire: ಬೆಳ್ಳಂಬೆಳಗ್ಗೆ ಭೀಕರ ಅಪಘಾತ;ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಪ್ರಜ್ವಲ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.