Norwegian ಲೇಖಕ ಜಾನ್ ಫೋಸ್ಸೆಯವರಿಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ
Team Udayavani, Oct 5, 2023, 5:28 PM IST
ಸ್ಟಾಕ್‌ಹೋಂ: ಈ ಸಾಲಿನ ಪ್ರತಿಷ್ಠಿತ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ನಾರ್ವೇಜಿಯನ್ ಲೇಖಕ ಜಾನ್ ಫೋಸ್ಸೆ ಅವರಿಗೆ ನೀಡಲಾಗುತ್ತಿದೆ. ಸ್ವೀಡಿಷ್ ಅಕಾಡೆಮಿಯ ಖಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಾಲ್ಮ್ ಗುರುವಾರ ಸ್ಟಾಕ್‌ಹೋಮ್‌ನಲ್ಲಿ ಬಹುಮಾನವನ್ನು ಘೋಷಿಸಿದ್ದಾರೆ.
ನೊಬೆಲ್ ಪ್ರಶಸ್ತಿಗಳು 11 ಮಿಲಿಯನ್ ಸ್ವೀಡಿಷ್ ಕ್ರೋನರ್ (1 ಮಿಲಿಯನ್ ಡಾಲರ್) ನಗದು, 18-ಕ್ಯಾರೆಟ್ ಚಿನ್ನದ ಪದಕ ಮತ್ತು ಪ್ರಶಸ್ತಿ ಪ್ರಮಾಣ ಪತ್ರವನ್ನೊಳಗೊಂಡಿರುತ್ತದೆ. ನೊಬೆಲ್ ಪ್ರಶಸ್ತಿ ಸೃಷ್ಟಿಕರ್ತ, ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರು ಬಿಟ್ಟುಹೋದ ಉಯಿಲಿನಿಂದ ಪ್ರಶಸ್ತಿ ನೀಡಲಾಗುತ್ತದೆ. ಡಿಸೆಂಬರ್‌ನಲ್ಲಿ ನಡೆಯುವ ಸಮಾರಂಭಗಳಲ್ಲಿ ವಿಜೇತರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
64 ರ ಹರೆಯದ ಜಾನ್ ಒಲಾವ್ ಫೋಸ್ಸೆ ಲೇಖಕ ಮತ್ತು ನಾಟಕಕಾರ. ಇವರ ನವ್ಯ ಸಾಹಿತ್ಯದ ನಾಟಕಗಳು ಧ್ವನಿಯಿಲ್ಲದವರಿಗೆ ಧ್ವನಿ ನೀಡುತ್ತವೆ. ಹೆನ್ರಿಕ್ ಇಬ್ಸೆನ್ ನಂತರ ಅವರು ಹೆಚ್ಚು ಪ್ರದರ್ಶನ ಕಂಡ ನಾರ್ವೇಜಿಯನ್ ನಾಟಕಕಾರ. ಇವರನ್ನು ಸಾಮಾನ್ಯವಾಗಿ ‘ನವ ಇಬ್ಸೆನ್” ಎಂದು ಉಲ್ಲೇಖಿಸಲಾಗುತ್ತದೆ, 19 ನೇ ಶತಮಾನದಲ್ಲಿ ಇಬ್ಸೆನ್ ಸ್ಥಾಪಿಸಿದ ನಾಟಕೀಯ ಸಂಪ್ರದಾಯದ ಆಧುನಿಕ ಮುಂದುವರಿಕೆಯನ್ನು ಪ್ರತಿನಿಧಿಸಲು ಫೋಸ್ಸೆ ಅವರ ಕೃತಿಗಳು ಗುರುತಿಸಲ್ಪಟ್ಟಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.