ಕುಖ್ಯಾತ ಸರಣಿ ಹಂತಕ, ಕಲ್ಟ್ ಲೀಡರ್ ಮ್ಯಾನ್‌ಸನ್ ಇನಿಲ್ಲ
Team Udayavani, Nov 20, 2017, 4:41 PM IST
ವಾಷಿಂಗ್ಟನ್ : ತನ್ನ ಯುವ ಹಿಂಬಾಲಕರನ್ನು ಮುಂದಿಟ್ಟುಕೊಂಡು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 1960ರ ದಶಕದ ಕೊನೆಯಲ್ಲಿ ಸರಣಿ ಹತ್ಯೆಗಳನ್ನು ನಡೆಸಿ ಜನ ಸಮೂಹದಲ್ಲಿದ್ದ ಶಾಂತಿ ಮತ್ತು ಪ್ರೀತಿಯ ಮೌಲ್ಯಗಳನ್ನು ಹೊಸಕಿ ಹಾಕಿ ಜನರ ನಿದ್ದೆಗೆಡಿಸಿದ್ದ ಕ್ರೂರ ಕಂಗಳ ಕುಖ್ಯಾತ ಸರಣಿ ಹಂತಕ, ಕಲ್ಟ್ ಲೀಡರ್, ಚಾರ್ಲ್ಸ್ ಮ್ಯಾನ್‌ಸನ್ ತನ್ನ 83ರ ಹರೆಯದಲ್ಲಿ ಮೃತಪಟ್ಟನೆಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ವಾರ್ಧಕ್ಯ ಸಹಜ ದೈಹಿಕ ತೊಂದರೆಗಳಿಂದ ಬಳಲುತ್ತಿದ್ದ ಮ್ಯಾನ್‌ಸನ್ ನಿನ್ನೆ ಭಾನುವಾರ ಸಂಜೆ ಕರ್ನ್ ಕೌಂಟಿ ಆಸ್ಪತ್ರೆಯಲ್ಲಿ ಮೃತಪಟ್ಟನೆಂದು ಕ್ಯಾಲಿಫೋರ್ನಿಯದ ಅಪರಾಧಿಗಳ ಸುಧಾರಣಾ ಮತ್ತು ಪುನರ್‌ವಸತಿ ಇಲಾಖೆ ತಿಳಿಸಿದೆ. ಆದರೆ ಮ್ಯಾನ್‌ಸನ್ ಸಾವಿನ ಸನ್ನಿವೇಶಗಳ ವಿವರಗಳನ್ನು ಅದು ಬಹಿರಂಗಪಡಿಸಿಲ್ಲ.
ಮ್ಯಾನ್‌ಸನ್ ಸಮೀಪದ ಕಾರ್ಕೋರಾನ್ ರಾಜ್ಯ ಬಂಧೀಖಾನೆಯಲ್ಲಿ ಜೀವಾವಧಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದ. ನಟಿ ಶ್ಯಾರನ್ ಟೇಟ್ ಸೇರಿದಂತೆ 9 ಮಂದಿಯನ್ನು ನಿಷ್ಕರುಣೆಯಿಂದ ಕೊಲೆಗೈದ ಅಪರಾಧವನ್ನು ಆತ ಎಸಗಿದ್ದ.
1969ರ ವೈಶಾಖದಲ್ಲಿ ಮ್ಯಾನ್‌ಸನ್ ಸರಣಿ ಹತ್ಯೆ ನಡೆಸಿ ಜನಮನದಲ್ಲಿ ಪ್ರಾಣ ಭೀತಿಯನ್ನು ಸೃಷ್ಟಿಸಿ ಎಲ್ಲರಿಗೂ ಯಮಸ್ವರೂಪಿಯಾಗಿದ್ದ.ಇಂದಿಗೂ ಆತನ ಹೆಸರು ನಿರ್ದಯ ಹತ್ಯೆಯ ಪ್ರತೀಕವಾಗಿ ಜನಮಾನಸದಲ್ಲಿ ಭೀತಿಯ ಕರಾಳ ಛಾಯೆಯನ್ನು ಶಾಶ್ವತವಾಗಿ ಉಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.