ಹಳೇ ಮೊಬೈಲನ್ನು ಕರಗಿಸಿ ಒಲಿಂಪಿಕ್ ಪದಕ!
Team Udayavani, Feb 3, 2017, 3:45 AM IST
ಟೋಕಿಯೊ: ಜಗತ್ತಿಗೆ ತಂತ್ರಜ್ಞಾನದ ಪಾಠ ಹೇಳಿದ ಜಪಾನ್‌ನ ಯಾವುದೇ ಮನೆಗಳಲ್ಲಿಯೂ ಹಳೇ ಮೊಬೈಲ್‌ಗಳ ಸದ್ದಿರುವುದಿಲ್ಲ. ಹತ್ತಾರು ವರ್ಷಗಳ ಹಿಂದಿನ ಲ್ಯಾಪ್‌ಟಾಪ್‌ಗಳೂ ಕಾಣಿಸುವುದಿಲ್ಲ. ಟಿವಿ, ರೆಫ್ರೀಜರೇಟರುಗಳೂ ಜಾಗ ಖಾಲಿ ಮಾಡಲಿವೆ! ಅವುಗಳೆಲ್ಲವನ್ನೂ ಕರಗಿಸಿ, 2020ರ ಒಲಿಂಪಿಕ್‌ನ ವಿಜೇತರ ಕೊರಳಿಗೆ ಪದಕ ಹಾಕಲು ನಿರ್ಧರಿಸಿದೆ!
ಹೌದು, 2020ರಲ್ಲಿ ಟೋಕಿಯೋದಲ್ಲಿ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ ನಡೆಯಲಿದ್ದು, ವಿಶ್ವವೇ ಪಾಲ್ಗೊಳ್ಳುವ ಈ ಬೃಹತ್ ಕ್ರೀಡಾಕೂಟಕ್ಕೆ ಏನಿಲ್ಲವೆಂದರೂ 5000 ಪದಕಗಳು ಬೇಕಾಗುತ್ತವೆ. ಈಗಾಗಲೇ ಇದಕ್ಕೆ 40 ಕೆಜಿ ಚಿನ್ನ, 4920 ಕೆಜಿ ಬೆಳ್ಳಿ ಮತ್ತು 2944 ಕೆಜಿ ಕಂಚನ್ನು ಹೊಂದಿಸಲಾಗಿದೆ. ಆದರೆ, ಆ ಪ್ರಮಾಣದ ಪದಕಗಳ ತಯಾರಿಕೆಗೆ ಇನ್ನಷ್ಟು ಚಿನ್ನ, ಬೆಳ್ಳಿ, ಕಂಚನ್ನು ಹೊಂದಿಸಲು ಈ ಪುಟ್ಟ ದೇಶದಲ್ಲಿ ಸಾಕಷ್ಟು ಸಂಪತ್ತಿನ ಕೊರತೆಯಿದೆ. ಹೊರದೇಶಗಳಿಂದ ತರಿಸಿಕೊಂಡು, ಅದೇ ಲೋಹವನ್ನು ಆ ದೇಶಗಳ ಕ್ರೀಡಾಪಟುಗಳಿಗೆ ನೀಡಿ ಗೌರವಿಸುವ ಬದಲು, ಇಲ್ಲೂ “ಮೇಡ್ ಇನ್ ಜಪಾನ್’ ನೀತಿ ಅನುಸರಿಸಲು ಅಲ್ಲಿನ ಒಲಿಂಪಿಕ್ ಆಯೋಜನಾ ಸಮಿತಿ ನಿರ್ಧರಿಸಿದೆ. ಪರಿಸರಸ್ನೇಹಿ ಒಲಿಂಪಿಕ್ ಆಯೋಜಿಸುವ ಉದ್ದೇಶ ಸಂಘಟಕರದ್ದು.
ಹಳೇ ಮಾಲು ಕೊಡಿ: ಉಪಯೋಗಕ್ಕೆ ಬಾರದ ಹಳೇ ಇಲೆಕ್ಟ್ರಾನಿಕ್ ಉಪಕರಣ (ಇ- ವೇಸ್ಟ್) ಪಟ್ಟಿಯಲ್ಲಿ, 2000 ನೇ ಇಸ್ವಿಯ ಹಿಂದಿನ ಡಿಜಿಟಲ್ ಕ್ಯಾಮೆರಾ, ಹಳೇ ಮೊಬೈಲು, ಲ್ಯಾಪ್‌ಟಾಪ್, ಗೇಮ್ ಯೂನಿಟ್, ಹಳೇ ಟಿವಿ- ಫ್ರಿಡುjಗಳು ಇದ್ದು ಸಾರ್ವಜನಿಕರು ಇದನ್ನು ಸರಕಾರಕ್ಕೆ ನೀಡಬಹುದು. ಅಲ್ಲದೆ, ದೇಶಾದ್ಯಂತ ಇರುವ 2,400ಕ್ಕೂ ಅಧಿಕ ಎಲೆಕ್ಟ್ರಾನಿಕ್ ಅಂಗಡಿಗಳಿಂದಲೂ ಹಳೇ ಉಪಕರಣಗಳನ್ನು ತರಿಸಿಕೊಳ್ಳಲು ಜಪಾನಿನ ಪರಿಸರ ನೈರ್ಮಲೀಕಣ ಕೇಂದ್ರ ಚಿಂತಿಸಿದೆ.
ಹೇಗೆ ತಯಾರಿಸ್ತಾರೆ?: ಈ ಎಲ್ಲ ಹಳೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಪ್ಲಾಟಿನಂ, ಪಲ್ಲಾಡಿಯಂ, ಚಿನ್ನ, ಬೆಳ್ಳಿ, ಲಿಥಿಯಂ, ಕೊಬಾಲ್ಟ್, ನಿಕ್ಕಲ್, ಕಬ್ಬಿಣ, ಸತು ಸೇರಿದಂತೆ ಅತ್ಯಮೂಲ್ಯ ಹಾಗೂ ಕೆಲವು ಅಪರೂಪದ ಲೋಹಗಳಿವೆ. ಇವುಗಳನ್ನೇ ಕರಗಿಸಿ, ಬಂಗಾರ, ಬೆಳ್ಳಿ ಹಾಗೂ ಕಂಚಿನ ಪದಕಗಳ ತಯಾರಿಕೆ ವೇಳೆ ಮಿಶ್ರಣ ಮಾಡುತ್ತಾರೆ.
ಈ ಲೋಹ ನವೀಕರಣ ಮಾದರಿಯನ್ನು ಮೊದಲು ಅನುಸರಿಸಿದ್ದು ಕೇವಲ ಜಪಾನ್ ಅಲ್ಲ. ಈ ಹಿಂದೆ ರಿಯೋ ಒಲಿಂಪಿಕ್‌ನಲ್ಲೂ ಇದೇ ಮಾದರಿ ಅನುಸರಿಸಲಾಗಿತ್ತು. ಆದರೆ, ಅಲ್ಲಿ ಈ ಲೋಹಗಳನ್ನು ಬೆಳ್ಳಿ ಮತ್ತು ಕಂಚಿನ ಪದಕಗಳ ತಯಾರಿಕೆಯಲ್ಲಿ ಬೆರೆಸಲಾಗಿತ್ತು. ಅಲ್ಲಿ ಹೀಗೆ ನವೀಕರಿಸಿದ ಲೋಹವನ್ನು ಶೇ.30ರಷ್ಟು ಬೆರೆಸಲಾಗಿತ್ತು. ಜಪಾನ್ ಈಗ ಚಿನ್ನದ ಪದಕದಲ್ಲೂ ಈ ಲೋಹಗಳನ್ನು ಸೇರಿಸಲಿದ್ದು, ನವೀಕರಿಸಿದ ಲೋಹದ ಪ್ರಮಾಣವನ್ನೂ ಹೆಚ್ಚಿಸಲು ಹೊರಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.