ಹತ್ಯೆಗೆ ಮುನ್ನ ಜೋಕ್ ಮಾಡಿದ್ದ ಕೊಲೆಗಾರರು!
Team Udayavani, Oct 2, 2019, 5:02 AM IST
ಲಂಡನ್: ಟರ್ಕಿ ರಾಜಧಾನಿ ಇಸ್ತಾಂಬುಲ್ನಲ್ಲಿರುವ ಸೌದಿ ಅರೇಬಿಯಾ ರಾಯಭಾರ ಕಚೇರಿಯಲ್ಲಿ ಪತ್ರಕರ್ತ ಜಮಾಲ್ ಕಶೋಗ್ಗಿ ಹತ್ಯೆಗೆ ಮುನ್ನ “ಜೋಕ್’ಗಳನ್ನು ಮಾಡಲಾಗಿತ್ತು. “ಹರಕೆಯ ಕುರಿ’ ಎಷ್ಟು ಹೊತ್ತಿಗೆ ಬರುತ್ತದೆ? ಆತನ ಧಡೂತಿ ದೇಹವನ್ನು ಈ ಚೀಲದೊಳಗೆ ತುಂಬಿಸಲು ಸಾಧ್ಯವೇ ಎಂಬಿತ್ಯಾದಿ ಮಾತುಗಳನ್ನು ಕೊಲೆಗಡುಕರು ಆಡಿದ್ದರು.
ವಿಶ್ವಸಂಸ್ಥೆಯ ಸಮಿತಿಗೆ ನೆರವು ನೀಡುತ್ತಿರುವ ಬ್ರಿಟನ್ ವಕೀಲ ಹೆಲೇನಾ ಕೆನೆಡಿ ರಹಸ್ಯ ಟೇಪ್ಗ್ಳನ್ನು ಉಲ್ಲೇಖೀಸಿ ಬಿಬಿಸಿಯ ಪನೋರಮಾ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಅಲ್ಲಿ ಈ ಮಾತುಗಳನ್ನಾಡಿದ್ದಾರೆ. ಸೌದಿ ರಾಯಭಾರ ಕಚೇರಿಗೆ ರಹಸ್ಯವಾಗಿ ಪ್ರವೇಶ ಮಾಡಿದ್ದ ಟರ್ಕಿ ಅಧಿಕಾರಿಗಳು ಖಶೋಗ್ಗಿ ಅವರ ದೇಹವನ್ನು ತುಂಡರಿಸುವ ಸಂದರ್ಭದಲ್ಲಿ “ನಾನು ಶವಗಳನ್ನು ತುಂಡರಿಸುವಾಗ ವಾದ್ಯ ಪರಿಕರ ನುಡಿಸುತ್ತೇನೆ. ಮಾತ್ರವಲ್ಲ ಕಾಫಿ ಕುಡಿಯುತ್ತಾ ಸಿಗಾರ್ ಎಳೆಯುತ್ತೇನೆ’ ಎಂದು ಹೇಳುವ ಮಾತುಗಳೂ ಇವೆ ಎಂದಿದ್ದಾರೆ. ಟರ್ಕಿ ಸರ್ಕಾರ 45 ನಿಮಿಷಗಳ ರಹಸ್ಯ ಟೇಪ್ ಅನ್ನು ವಿಶ್ವಸಂಸ್ಥೆ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.