ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ ರಾಕೆಟ್ ದಾಳಿ: 1 ಸಾವು
Team Udayavani, Nov 13, 2018, 11:55 AM IST
ಜೆರುಸಲೇಂ : ಪ್ಯಾಲೆಸ್ತೀನ್ ಗಾಜಾ ಪಟ್ಟಿಯಿಂದ ಉಡಾಯಿಸಿದ ಒಂದು ಡಜನ್ ರಾಕೆಟ್‌ಗಳ ಪೈಕಿ ಒಂದು ರಾಕೆಟ್ ದಕ್ಷಿಣ ಇಸ್ರೇಲ್‌ನ ಕಟ್ಟಡದ ಮೇಲೆರಗಿ ಅದನ್ನು ಧ್ವಂಸಗೊಳಿಸಿದ್ದು ಕಟ್ಟಡದ ಅವಶೇಷಗಳಡಿಯಿಂದ 40ರ ಹರೆಯದ ಒಬ್ಬ ವ್ಯಕ್ತಿಯ ಶವವನ್ನು ಹೊರ ತೆಗೆಯಲಾಗಿದೆ ಎಂದು ತುರ್ತು ಸೇವಾ ದಳ ತಿಳಿಸಿದೆ.
ಇಸ್ರೇಲ್ ನ ವಿಶೇಷ ಪಡೆ ಗಾಜಾ ಎನ್‌ಕ್ಲೇವ್ ನಲ್ಲಿ ಕೈಗೊಂಡಿದ್ದ ಕಾರ್ಯಾಚರಣೆಗೆ ಪ್ರತಿಯಾಗಿ ನಿನ್ನೆ ಸೋಮವಾರದಿಂದೀಚೆಗೆ ಗಾಜಾ ಪಟ್ಟಿಯಿಂದ ಹನ್ನೆರಡಕ್ಕೂ ಅಧಿಕ ರಾಕೆಟ್‌ಗಳನ್ನು ದಕ್ಷಿಣ ಇಸ್ರೇಲ್ ಮೇಲೆ ಉಡಾಯಿಸಲಾಗಿದೆ. ಈ ದಾಳಿಗೆ ಮೊದಲ ವ್ಯಕ್ತಿ ಬಲಿಯಾಗಿರುವುದನ್ನು ದೃಢಪಡಿಸಲಾಗಿದೆ.
ರಾಕೆಟ್ ದಾಳಿಯಿಂದ ಧ್ವಂಸಗೊಂಡ ಕಟ್ಟಡದ ಅವಶೇಷಗಳಡಿಯಿಂದ ತೀವ್ರ ಗಾಯಗೊಂಡ ಓರ್ವ ಮಹಿಳೆಯನ್ನು ಕೂಡ ಮೇಲಕ್ಕೆತ್ತಲಾಗಿದ್ದು ಆಕೆಯ ಸ್ಥಿತಿ ಚಿಂತಾಜನಕವಿದೆ ಎಂದು ತುರ್ತು ಸೇವಾ ದಳದ ವಕ್ತಾರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.