ಕಡುಕಷ್ಟದಲ್ಲೊಂದು ಭರವಸೆಯ ಬೆಳಕು
Team Udayavani, Apr 13, 2020, 6:15 PM IST
ಲಂಡನ್: ಇಡೀ ಭೂಮಂಡಲ ಕೋವಿಡ್-19 ಹಾವಳಿಗೆ ಥರ ಗುಟ್ಟುತ್ತಿರುವಾಗ ಅಲ್ಲಲ್ಲಿ ಚಿಕ್ಕಪುಟ್ಟ ಭರವಸೆಯ ಕಿರಣಗಳು ಗೋಚರಿಸುತ್ತಿವೆ. ನ್ಯೂ ಇಂಗ್ಲಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾಗಿರುವ ವರದಿಯೊಂದು ಕೋವಿಡ್‌ಗೆ ಗಿಲೀಡ್ ಸಯನ್ಸಸ್ ಇಂಕ್ ಅಭಿವೃದ್ಧಿಪಡಿಸಿರುವ ಒಂದು ಔಷಧ ಪರಿಣಾಮಕಾರಿಯಾಗಬಹುದು ಎಂಬ ಆಶಾಭಾವನೆ ಬಿತ್ತಿದೆ.
61 ಕೋವಿಡ್ ಸೋಂಕಿತರ ಮೇಲೆ ಈ ಔಷಧವನ್ನು ಪ್ರಯೋಗಿಸಿದಾಗ ಗುಣಾತ್ಮಕವಾದ ಫಲಿತಾಂಶ ಸಿಕ್ಕಿದೆ. ಆದರೆ ಸೋಂಕಿತರಿಗೆ ಬೇರೆ ಯಾವ ಚಿಕಿತ್ಸೆ ನೀಡಲಾಗಿತ್ತು ಎಂಬ ಮಾಹಿತಿ ಈ ವರದಿಯಲ್ಲಿಲ್ಲ. ಇದು ಪ್ರಾಥಮಿಕ ಹಂತದಲ್ಲಿರುವ ಚಿಕಿತ್ಸೆ. ಇತರ ಸೋಂಕಿತರ ಜತೆಗೆ ಈ ಚಿಕಿತ್ಸೆಯನ್ನು ಹೋಲಿಸಿ ನೋಡಿಲ್ಲ ಮತ್ತು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಿಲ್ಲ. ಆದರೂ ಇದೊಂದು ಆಶಾದಾಯಕ ಬೆಳವಣಿಗೆ ಎಂದಷ್ಟೇ ಹೇಳಬಹುದು ಎಂದು ವರದಿ ಹೇಳಿದೆ.
ರೆಮೆಡ್‌ಸಿವಿರ್ ಎಂಬ ಔಷಧಿಯನ್ನು ಸೋಂಕಿತರ ಮೇಲೆ ಪ್ರಯೋಗಿಸಲಾಗಿದೆ. 61 ಸೋಂಕಿತರ ಪೈಕಿ 30 ಮಂದಿ ಮೆಕಾನಿಕಲ್ ವೆಂಟಿಲೇಟರ್, ನಾಲ್ವರು ಶರೀರದಲ್ಲಿ ರಕ್ತವನ್ನು ಪಂಪ್ ಮಾಡುವ ಮೆಶಿನ್‌ನಲ್ಲಿದ್ದರು. 18 ದಿನಗಳ ಚಿಕಿತ್ಸೆಯ ಬಳಿಕ ಆಕ್ಸಿಜನ್ ಸಪೋರ್ಟ್ ಬೇಸ್‌ನಲ್ಲಿದ್ದ 36 ರೋಗಿಗಳಲ್ಲಿ ಅಂದರೆ ಶೇ. 68 ರೋಗಿಗಳಲ್ಲಿ ಗಣನೀಯವಾದ ಸುಧಾರಣೆ ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.