ಡೋನಲ್ಡ್ ಟ್ರಂಪ್ ಗೆ ಅಮೆರಿಕ ಮಾಧ್ಯಮದ ಖಡಕ್ ಬಹಿರಂಗ ಪತ್ರ
Team Udayavani, Jan 19, 2017, 5:30 PM IST
ವಾಷಿಂಗ್ಟನ್ : ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಲ್ಡ್ ಟ್ರಂಪ್ ಮತ್ತು ಅಮೆರಿಕನ್ ಮಾಧ್ಯಮ ನಡುವಿನ ಸಂಬಂಧಗಳು ಈಗಾಗಲೇ ಹಳಸಲು ಆರಂಭಿಸಿದೆ. ಟ್ರಂಪ್ ಮಾಧ್ಯಮ ವಿಚಾರದಲ್ಲಿ ಪ್ರಭಾವ ಬೀರಿ ಹಸ್ತಕ್ಷೇಪ ನಡೆಸುವ ಸಾಧ್ಯತೆಗಳನ್ನು ಎಚ್ಚರಿಕೆಯಿಂದ ಕಂಡುಕೊಳ್ಳಲಾಗಿದೆ.
ಅಂತೆಯೇ ಅಮೆರಿಕನ್ ಪ್ರಸ್ ಕಾರ್ಪೊರೇಶನ್ ಮತ್ತು ಶ್ವೇತ ಭವನ ಪತ್ರಕರ್ತರು ಟ್ರಂಪ್ ಗೆ ಖಡಕ್ ಬಹಿರಂಗ ಬರೆದಿದ್ದಾರೆ. ಈ ಪತ್ರದಲ್ಲಿ ಪತ್ರಕರ್ತರು ಟ್ರಂಪ್ ಗೆ “ನಮ್ಮ ವರದಿಗಾರಿಕೆಯ ನಿಯಮಗಳನ್ನು ನಾವು ರೂಪಿಸುತ್ತೇವೆ; ನೀವಲ್ಲ; ನಮ್ಮ ಓದುಗರಿಗೆ, ವೀಕ್ಷಕರಿಗೆ ಏನನ್ನು ಕೊಡಬೇಕು ಎಂಬುದನ್ನು ನಾವೇ ತೀರ್ಮಾನಿಸುತ್ತೇವೆ; ನೀವಲ್ಲ’ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ಪತ್ರಕರ್ತರು ಟ್ರಂಪ್ ಗೆ ಬಿಸಿ ಮುಟ್ಟಿಸುವ ರೀತಿಯಲ್ಲಿ ಬರೆದಿರುವ ಈ ಖಡಕ್ ಬಹಿರಂಗ ಪತ್ರವನ್ನು ಕೊಲಂಬಯಾ ಜರ್ನಲಿಸಂ ರಿವ್ಯೂ ನಿಯತಕಾಲಿಕ ಪ್ರಕಟಿಸಿದೆ. ಕೊಲಂಬಿಯ ವಿಶ್ವವಿದ್ಯಾಲಯವು ವೃತ್ತಿಪರ ಪತ್ರಕರ್ತರಿಗಾಗಿ ಈ ನಿಯತಕಾಲಿಕವನ್ನು ಪ್ರಟಿಸುತ್ತಿದೆ.
ನಿಯೋಜಿತ ಅಧ್ಯಕ್ಷರು (ಟ್ರಂಪ್) ಮತ್ತು ಅಮೆರಿಕನ್ ಪ್ರಸ್ ಕಾರ್ಪೊರೇಶನ್ ನಡುವಿನ ಸಂಬಂಧ ಮಂದಿನ ನಾಲ್ಕು ವರ್ಷಗಳಲ್ಲಿ, ಅಥವಾ ಸಂಭವನೀಯ ಎಂಟು ವರ್ಷಗಳಲ್ಲಿ, ಚೆನ್ನಾಗಿ ಇರಲಾರದೆಂಬುದು ನಿಮಗೆ (ಟ್ರಂಪ್ ಗೆ) ಅಚ್ಚರಿಯ ವಿಷಯವಾಗೇನೂ ಇರಲಾರದೆಂದು ನಾವು ಭಾವಿಸುತ್ತೇವೆ’ ಎಂದು ಪತ್ರದಲ್ಲಿ ಮುಲಾಜಿಲ್ಲದೆ ಹೇಳಲಾಗಿದೆ.
“ನೀವು (ಟ್ರಂಪ್) ನಿಮ್ಮ ಪ್ರಭಾವ ಬೀರಲು ಬಯಸುವ ಟಿವಿ ಪ್ರಸಾರ ಸಮಯ, ಪತ್ರಿಕೆಗಳಲ್ಲಿನ ಕಾಲಂ ಗಳು ನಮ್ಮವು; ನಮ್ಮ ವೀಕ್ಷಕರಿಗೆ, ಓದುಗರಿಗೆ ಯಾವುದೇ ಅಗತ್ಯ, ಯಾವುದು ಹಿತ ಎಂಬುದನ್ನು ತೀರ್ಮಾನಿಸುವವರು ನಾವು; ನೀವಲ್ಲ’ ಎಂದು ಪತ್ರದಲ್ಲಿ ಹೇಳಲಾಗಿದೆ.
“ಚುನಾವಣಾ ಪ್ರಚಾರಾಭಿಯಾನದ ವೇಳೆಯೇ ನೀವು ಸುದ್ದಿ ಮಾಧ್ಯಮಗಳನ್ನು ಬಹಿಷ್ಕರಿಸಿದ್ದೀರಿ; ನಮಗೆ ಟಾಂಟ್ ನೀಡಲು ಟ್ವಿಟರ್ ಬಳಸಿಕೊಂಡಿದ್ದೀರಿ; ಹಾಗೆಯೇ ವೈಯಕ್ತಿಕವಾಗಿ ಪತ್ರಕರ್ತರಿಗೆ ಬೆದರಿಕೆ ಹಾಕಲು ನಿಮ್ಮ ಜನರನ್ನು ಉಪಯೋಗಿಸಿಕೊಂಡಿದ್ದೀರಿ; ನೀವೇ ಖುದ್ದು ಹಲವಾರು ಮಾನನಷ್ಟ ದಾವೆಗಳನ್ನು ಮಾಧ್ಯಮ ಸಂಸ್ಥೆ ಹಾಗೂ ಮಾಧ್ಯಮ ಮಂದಿಯ ವಿರುದ್ಧ ಹೂಡಿದ್ದೀರಿ; ಆದರೆ ಅದರಿಂದ ನಿಮಗೆ ಯಾವ ಲಾಭವೂ ಆಗಿಲ್ಲ. ಮಾಧ್ಯಮದೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ನಿರ್ಧರಿಸುವ ನೀತಿ ನಿಮಯಗಳನ್ನು ರೂಪಿಸುವ ಹಕ್ಕು, ಅಧಿಕಾರ ನಿಮಗಿದೆ; ಹಾಗೆಯೇ ನಮಗೂ ಇದೆ. ನಮಗೆ ಸರಕಾರದೊಳಗಿನಅತ್ಯಮೂಲ್ಯ ಸುದ್ದಿಗಳನ್ನು ನಿರಾಕರಿಸುವ ಬೆದರಿಕೆಯನ್ನೂ ಹಾಕಿದ್ದೀರಿ; ಆದರೆ ಅವುಗಳನ್ನು ಹೇಗೆ ಪಡೆಯಬೇಕೆಂಬುದು ನಮಗೂ ಗೊತ್ತಿದೆ’ ಎಂದು ಪತ್ರದಲ್ಲಿ ಟ್ರಂಪ್ ಗೆ ಎಚ್ಚರಿಸಲಾಗಿದೆ.
“ನಮ್ಮ ವೃತ್ತಿಯನ್ನು ಹೇಗೆ ಮತ್ತು ಯಾವ ಉನ್ನತ ಧ್ಯೇಯೋದ್ದೇಶಗಳೊಂದಿಗೆ ನಡೆಸಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ; ಆದರೂ ಅತ್ಯಂತ ಮೂಲಭೂ ಪ್ರಶ್ನೆಗಳ ಬಗ್ಗೆ ಮರು ಚಿಂತನೆ ನಡೆಸುವ, ನಾವು ಯಾರೆಂಬ ಆತ್ಮಾವಲೋಕನ ನಡೆಸುವ ಮತ್ತು ನಾವು ಈ ಕ್ಷೇತ್ರದಲ್ಲಿ ಯಾಕೆ ಇದ್ದೇವೆ ಎಂಬುದನ್ನು ಅರಿಯುವ ಅಗತ್ಯವನ್ನು ಮನಗಾಣಿಸಿರವುದಕ್ಕೆ ನಿಮಗೆ ನಾವು ಕೃತಜ್ಞರಾಗಿದ್ದೇವೆ’ ಎಂದು ಬಹಿರಂಗ ಪತ್ರದಲ್ಲಿ ಟ್ರಂಪ್ ಗೆ ಮಾಧ್ಯಮಗಳು ಎಚ್ಚರಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್ ಟ್ರಕ್ ಸ್ಫೋ*ಟದ ವ್ಯಕ್ತಿ!
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.