ತೆರವು ಕಾರ್ಯಾಚರಣೆಗಳಲ್ಲಿ ಭಾರತದ ಯಶೋಗಾಥೆ ; ಆಪರೇಷನ್ ಸಕ್ಸಸ್!
Team Udayavani, Mar 3, 2022, 6:55 AM IST
ಉಕ್ರೇನ್‌ನಲ್ಲಿ ಅತಂತ್ರ ಪರಿಸ್ಥಿತಿಗೆ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆಯಿಸಿಕೊಳ್ಳಲು ಕೇಂದ್ರ ಸರಕಾರ “ಆಪರೇಷನ್ ಗಂಗಾ’ ಹೆಸರಿನ ಕಾರ್ಯಾಚರಣೆ ಆರಂಭಿಸಿದೆ. ಇತಿಹಾಸದಲ್ಲಿ ಭಾರತ ಕೈಗೊಂಡ ಇಂಥ ಕಾರ್ಯಾಚರಣೆಗಳು ಯಾವುವು, ಯಾವ ಪಡೆ, ವಿಮಾನ, ನೌಕೆಗಳನ್ನು ಇದಕ್ಕಾಗಿ ಬಳಸಲಾಗಿತ್ತು, ಇಂಥ ಕಾರ್ಯಾಚರಣೆಗಳಲ್ಲಿ ನಾಗರಿಕ ವಿಮಾನಗಳ ಬದಲಿಗೆ ಸೇನಾ ವಿಮಾನ ಬಳಸಿದರೆ ಏನು ಉಪಯೋಗ ಎಂಬ ಮಾಹಿತಿ ಇಲ್ಲಿದೆ.
ಕುವೈಟ್ ಏರ್‌ಲಿಫ್ಟ್ (1990)
1990ರಲ್ಲಿ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಇರಾನ್ ಮೇಲೆ ದಾಳಿ ನಡೆಸಿದಾಗ, 1,70,000 ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದರು. ಇರಾನ್ ಪಡೆಗಳು ಇರಾಕ್ ಅತಿಕ್ರಮಿಸಿ 12 ದಿನಗಳು ಕಳೆದ ಅನಂತರ ಭಾರತ, ಆ.13ರಂದು ಇರಾಕ್‌ನಿಂದ ಭಾರತೀಯರ ತೆರವು ಕಾರ್ಯಾಚರಣೆ ಆರಂಭಿಸಿ, ಯಶಸ್ವಿಯಾಗಿ ಮುಗಿಸಿತು. ಅತ್ಯಂತ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಜನರನ್ನು ಸ್ವದೇಶಕ್ಕೆ ಮರಳಿದ ಹೆಗ್ಗಳಿಕೆಯೊಂದಿಗೆ ಏರ್ ಇಂಡಿಯಾ ಸಂಸ್ಥೆ ಗಿನ್ನೆಸ್ ದಾಖಲೆ ಬರೆಯಿತು.
ಆಪರೇಷನ್ ರಾಹತ್ (2015)
2015ರಲ್ಲಿ ಯೆಮನ್‌ನಲ್ಲಿ, ಸರಕಾರ ಹಾಗೂ ಬಂಡುಕೋರರ ನಡುವಿನ ಆಂತರಿಕ ಸಂಘರ್ಷದ ವೇಳೆ, ಯೆಮನ್‌ನ ವಾಯು ಗಡಿಯೊಳಗೆ ಬೇರೆ ದೇಶಗಳ ವಿಮಾನಗಳಿಗೆ ನಿಷೇಧ ಹೇರಲಾಯಿತು. ಹಾಗಾಗಿ ಸಮುದ್ರ ಮಾರ್ಗಗಳ ಮೂಲಕ ಭಾರತ ಸರಕಾರ 4,640 ಭಾರತೀಯರನ್ನು, 41 ರಾಷ್ಟ್ರಗಳ 960 ವಿದೇಶಿಗರನ್ನು ಭಾರತಕ್ಕೆ ಕರೆತಂದಿತು.
ಆಪರೇಷನ್ ಮೈತ್ರಿ
2015ರಲ್ಲಿ ನೇಪಾಲದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಅನಂತರ 15 ನಿಮಿಷದಲ್ಲಿ ಅಲ್ಲಿದ್ದ ಭಾರತೀಯರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಭಾರತ ಆರಂಭಿಸಿತು. ಅಷ್ಟು ಕಡಿಮೆ ಅವಧಿಯಲ್ಲಿ ಪೂರ್ಣಪ್ರಮಾಣದ ತೆರವು ಕಾರ್ಯಾಚರಣೆ ಆರಂಭಿಸಿದ ದೇಶವೆಂಬ ಹೆಗ್ಗಳಿಕೆಯನ್ನೂ ಪಡೆಯಿತು. 5,000 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಯಿತು. ಯು.ಕೆ., ಅಮೆರಿಕ, ರಷ್ಯಾ, ಜರ್ಮನಿಗೆ ಸೇರಿದ 170 ಜನರನ್ನೂ ಕರೆತರಲಾಯಿತು.
ಆಪರೇಷನ್ ಸೇಫ್ ಹೋಂ ಕಮಿಂಗ್/ ಆಪರೇಷನ್ ಬ್ಲಾಸಮ್
2011ರಲ್ಲಿ ಲಿಬಿಯಾ ಆಂತರಿಕ ಸಂಘರ್ಷದ ವೇಳೆ 15,400 ಭಾರತೀಯರನ್ನು ವಾಯು ಮಾರ್ಗ, ಜಲಮಾರ್ಗಗಳ ಮೂಲಕ ಸ್ವದೇಶಕ್ಕೆ ಕರೆತರಲಾಯಿತು. ವಾಯುಪಡೆ, ನೌಕಾಪಡೆ ಈ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿಭಾಯಿಸಿದವು.
ಆಪರೇಷನ್ ಸುಕೂನ್
2006ರ ಜುಲೈಯಲ್ಲಿ ಇಸ್ರೇಲ್ ಹಾಗೂ ಲೆಬನಾನ್ ಯುದ್ಧ ನಡೆದಾಗ, ಭಾರತ ನಡೆಸಿದ ಕಾರ್ಯಾಚರಣೆಗೆ ಬೈರೂತ್ ಸೀಲಿಫ್ಟ್ ಎಂಬ ಮತ್ತೂಂದು ಹೆಸರೂ ಇದೆ. ಡಂಕಿರ್ಕ್ ಕಾರ್ಯಾಚರಣೆ ಆನಂತರ ಇದು ಭಾರತ ಕೈಗೊಂಡ 2ನೇ ಅತೀ ದೊಡ್ಡ ನೌಕಾಪಡೆ ಕಾರ್ಯಾಚರಣೆ. 2006ರ ಜು. 19ರಿಂದ ಆ.1ರ ನಡುವೆ, ಭಾರತೀಯರು, ನೇಪಾಲಿಗರು, ಶ್ರೀಲಂಕನ್ನರು ಸೇರಿ 2,280 ಜನರನ್ನು ಕರೆತರಲಾಯಿತು.
ವೈದ್ಯಕೀಯ ತೆರವು ಕಾರ್ಯಾಚರಣೆಗಳು
ವಂದೇ ಭಾರತ್
ಮಿಷನ್ (2021)
ಇಡೀ ಜಗತ್ತು ಕೊರೊನಾ ವೈರಾಣುವಿನ ಸಂಕಟದಿಂದ ನರಳುತ್ತಿದ್ದಾಗ, ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲು ಕೈಗೊಳ್ಳಲಾಗಿದ್ದ ಕಾರ್ಯಾಚರಣೆ. 2021ರ ಎ. 30ರ ಹೊತ್ತಿಗೆ 60 ಲಕ್ಷ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿತ್ತು.
ಆಪರೇಷನ್ ಸಮುದ್ರ ಸೇತು
ನಾನಾ ದೇಶಗಳಲ್ಲಿ ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದವರನ್ನು ಸ್ವದೇಶಕ್ಕೆ ಕರೆತರಲು 2021ರ ಮೇ ತಿಂಗಳಲ್ಲಿ ನಡೆಸಲಾದ ಕಾರ್ಯಾಚರಣೆ. 3,992 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಯಿತು. ಭಾರತೀಯ ನೌಕಾಪಡೆಯ ಜಲಾಶ್ವ, ಐರಾವತ, ಶಾರ್ದೂಲ್ ಮಗರ್ ಇದರಲ್ಲಿ ಭಾಗವಹಿಸಿದ್ದವು.
ಕಾರ್ಯಾಚರಣೆಗೆ ಬಳಸಲಾದ ವಿಮಾನ/ನೌಕೆಗಳು
– ಕಮರ್ಶಿಯಲ್ ಜೆಟ್ಸ್ – ಏರ್ ಇಂಡಿಯಾದ ಬೋಯಿಂಗ್ 777, 787
– ಸೇನಾ ಸರಕು ಸಾಗಣೆ ವಿಮಾನಗಳು – ಸಿ-17 ಗ್ಲೋಬ್ ಮಾಸ್ಟರ್, ಸಿ-130 ಜೆ ಸೂಪರ್ ಹಕ್ಯುಲ್ಸ್
– 3 ನೌಕೆಗಳು – ಐಎನ್‌ಎಸ್ ಜಲಾಶ್ವ, ಐಎನ್‌ಎಸ್ ಮಗರ್, ಐಎನ್‌ಎಸ್ ಶಾದೂìಲ್.
ಭಾರತದ ಈವರೆಗಿನ ತೆರವು ಕಾರ್ಯಾಚರಣೆಗಳು
ಯುಎಇ (10), ಯು.ಕೆ. (7), ಕತಾರ್ (2), ಸೌದಿ ಅರೇಬಿಯಾ (5), ಸಿಂಗಾಪುರ (5), ಮಲೇಷ್ಯಾ (7), ಫಿಲಿಪ್ಪೀನ್ಸ್ (5), ಬಾಂಗ್ಲಾದೇಶ (7), ಬಹ್ರೈನ್ (2), ಕುವೈಟ್(2), ಒಮನ್ (2).
ಬ್ರುಸೆಲ್ಸ್ ಕಾರ್ಯಾಚರಣೆ
2016ರಲ್ಲಿ ಬೆಲ್ಜಿಯಂನ ರಾಜಧಾನಿ ಬ್ರುಸೆಲ್ಸ್ ಮೇಲೆ ಉಗ್ರವಾದಿಗಳ ದಾಳಿಯಾಗಿತ್ತು. ಘಟನೆಯಿಂದ ತತ್ತರಿಸಿದ ಭಾರತೀಯರನ್ನು ಕರೆತರಲು ಭಾರತ, ಜೆಟ್ ಏರ್‌ವೆàಸ್ ವಿಮಾನವೊಂದನ್ನು ಕಳಿಸಿ 242 ಮಂದಿಯನ್ನು ಪಾರು ಮಾಡಿತ್ತು.
ಸೇನಾ ವಿಮಾನಗಳ ಅನುಕೂಲವೇನು?
ಈ ಹಿಂದೆ ಭಾರತ ಕೈಗೊಂಡಿದ್ದ ಅನೇಕ ತೆರವು ಕಾರ್ಯಾ ಚರಣೆಗಳಿಗೆ ಸೇನಾ ವಿಮಾನಗಳನ್ನು ಬಳಸಿಕೊಳ್ಳಲಾಗಿದೆ. ನಾಗರಿಕ ವಿಮಾನಗಳಿಗಿಂತ ಸೇನಾ ವಿಮಾನಗಳಿಂದಾಗುವ ಅನುಕೂಲ ಹೆಚ್ಚು. ಇವೆರಡರ ನಡುವಿನ ಪ್ರಮುಖ ವ್ಯತ್ಯಾಸ- ಕಂ- ಪ್ರಯೋಜನಗಳು ಹೀಗಿವೆ.
1 ನಾಗರಿಕ ವಿಮಾನದಲ್ಲಿ 200ರಿಂದ 250 ಜನರನ್ನು ಕರೆದೊಯ್ಯಬಹುದು. ಸೇನಾ ವಿಮಾನಗಳಲ್ಲಿ 400ರಿಂದ 450 ಜನರನ್ನು ಕೊಂಡೊಯ್ಯಬಹುದು.
ನಾಗರಿಕ ವಿಮಾನಗಳ ಟೇಕಾಫ್, ಲ್ಯಾಂಡಿಂಗ್‌ಗೆ ದೊಡ್ಡ ರನ್‌ವೇ ಅಗತ್ಯವಿರುತ್ತದೆ. ಆದರೆ ಸೇನಾ ವಿಮಾನಗಳಿಗೆ ಅದರ ಅಗತ್ಯವಿಲ್ಲ. ಅವು, ನಿಂತಲ್ಲಿಂದಲೇ ಮೇಲೆ ಹಾರಬಲ್ಲವು ಹಾಗೂ ಅದೇ ರೀತಿ ಇಳಿಯಬಲ್ಲವು.
ನಾಗರಿಕ ವಿಮಾನಗಳ ನಿಲುಗಡೆಗೆ ವಿಶಾಲವಾದ ಜಾಗ ಬೇಕು. ಸೇನಾ ವಿಮಾನಗಳ ನಿಲುಗಡೆಗೆ ಹೆಲಿಪ್ಯಾಡ್‌ನಷ್ಟು ಜಾಗ ಸಾಕು.
ನಾಗರಿಕ ವಿಮಾನಗಳಿಗಿಂತ ಸೇನಾ ವಿಮಾನಗಳ ಅನುಕೂಲತೆಗಳು ಹೆಚ್ಚಿರುವುದರಿಂದ ನೈಸರ್ಗಿಕ ವಿಕೋಪಗಳಿಂದ ತೊಂದರೆಗೀಡಾದ ಜನರನ್ನು ರಕ್ಷಿಸುವ ವೇಳೆಯಲ್ಲೂ ಅವುಗಳನ್ನು ಬಳಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.