ಲಾಡೆನ್ ಮನೆ ಮಾರಾಟಕ್ಕಿದೆ…! ವರ್ಷದ ಹಿಂದೆ ಮಾರಾಟಕ್ಕಾಗಿ ಜಾಹೀರಾತು ಸಿಗದ ಸ್ಪಂದನೆ
ಅಮೆರಿಕದಲ್ಲಿರುವ ಲಾಡೆನ್ ಸಹೋದರನ ಮನೆ
Team Udayavani, Feb 21, 2022, 8:00 AM IST
ಅಮೆರಿಕ: ಜಾಗತಿಕ ಉಗ್ರ, ಅಮೆರಿಕ ಪಡೆಗಳಿಂದ ಹತನಾದ ಒಸಾಮ ಬಿನ್ ಲಾಡೆನ್ ಮಲ ಸಹೋದರ ಇಬ್ರಾಹಿಂ ಬಿನ್ ಲಾಡೆನ್ ಮನೆ ಮಾರಾಟಕ್ಕಿದೆ. ಅಮೆರಿಕದ ಲಾಸ್ ಏಂಜಲೀಸ್‌ನ ಬೆಲ್ ಏರ್‌ನಲ್ಲಿ ಇರುವ ಈ ಮನೆ 7,106 ಚದರ ಅಡಿ ಇದೆ. ಕಳೆದ ವರ್ಷವೇ ಇದನ್ನು ಮಾರಾಟಕ್ಕಿಡಲಾಗಿದ್ದರೂ, ಇದುವರೆಗೆ ಯಾರೂ ಖರೀದಿಸಿಲ್ಲ.
28 ಮಿಲಿಯನ್ ಡಾಲರ್ ದರ
2021ರ ಜುಲೈನಲ್ಲಿ ಈ ಮನೆಯನ್ನು ಮಾರಾಟಕ್ಕಿಡಲಾಗಿತ್ತು. ಆಗ ಈ ಮನೆಗೆ 28 ಮಿಲಿಯನ್ ಅಮೆರಿಕನ್ ಡಾಲರ್ ದರ ನಿಗದಿ ಮಾಡಲಾಗಿತ್ತು. ಆದರೆ, ಇದುವರೆಗೆ ಒಬ್ಬರೂ ಆಸಕ್ತಿ ತೋರಿಸಿಲ್ಲ. ಹೀಗಾಗಿ, ದರವನ್ನು 2 ಮಿಲಿಯನ್ ಡಾಲರ್‌ಗೆ ಇಳಿಕೆ ಮಾಡಿ ಮತ್ತೆ ಮಾರಾಟಕ್ಕಿಡಲಾಗಿದೆ. ಈಗಲೂ ಯಾರೂ ಬಂದಿಲ್ಲ.
20 ವರ್ಷಗಳಿಂದ ಖಾಲಿ
2001ರ ಸೆಪ್ಟೆಂಬರ್ 11ರ ಅಮೆರಿಕದ ಅವಳಿ ಕಟ್ಟಡಗಳ ಮೇಲಿನ ದಾಳಿ ನಂತರ ಇಬ್ರಾಹಿಂ ಬಿನ್ ಲಾಡೆನ್ ಈ ಮನೆ ತೊರೆದಿದ್ದಾನೆ. ಆಗಿನಿಂದಲೂ ಈ ಮನೆ ಖಾಲಿಯಾಗಿಯೇ ಉಳಿದಿದೆ. 1931ರಲ್ಲಿ ಈ ಮನೆಯನ್ನು ಕಟ್ಟಲಾಗಿದ್ದು, 2 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಇದೆ. ಮೆಡಿಟೇರಿಯನ್ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದ್ದು 7 ಬೆಡ್‌ರೂಂ, ಐದು ಬಾತ್‌ರೂಂಗಳಿವೆ. ಒಂದು ಸ್ವಿಮ್ಮಿಂಗ್ ಫೂಲ್ ಕೂಡ ಇದೆ.
ಶ್ರೀಮಂತ ಕುಟುಂಬ
ಸೌದಿ ಅರೆಬಿಯಾದ ರಾಯಲ್ ಕುಟುಂಬದ ರೀತಿಯಲ್ಲೇ ಒಸಾಮ ಬಿನ್ ಲಾಡೆನ್ ಅವನದ್ದು ಆಗರ್ಭ ಶ್ರೀಮಂತ ಕುಟುಂಬ. ವಿಶೇಷವೆಂದರೆ ಬಿನ್‌ಲಾದಿನ್ ಗ್ರೂಪ್ ಜಗತ್ತಿನ ಅತಿ ಎತ್ತರದ ಕಟ್ಟಡವೆಂದೇ ಖ್ಯಾತಿ ಪಡೆಯಲಿರುವ ಜೆಡ್ಡಾ ಟವರ್ ಅನ್ನು ನಿರ್ಮಿಸುತ್ತಿದೆ.
1983ರಲ್ಲಿ ಖರೀದಿ
ಈ ಐಷಾರಾಮಿ ವಿಲ್ಲಾವನ್ನು ಇಬ್ರಾಹಿಂ 1987ರಲ್ಲಿ ಖರೀದಿಸಿದ್ದ. 1987ರಲ್ಲಿ ಈತ ಕ್ರಿಸ್ಟೇನ್ ಹಾಟೇìನಿಯನ್ ಎಂಬಾಕೆಯನ್ನು ವಿವಾಹವಾಗಿದ್ದ. ಈ ಜೋಡಿಗೆ ಒಬ್ಬ ಮಗಳಿದ್ದಾಳೆ. ಆದರೆ, 1991ರಲ್ಲಿ ದಂಪತಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದಾರೆ. ಪತ್ನಿ ಮತ್ತು ಮಗಳು ಬೇರೆಯಾಗಿದ್ದರು. ಅಲ್ಲದೆ, 1994ರಲ್ಲಿ ಬಿನ್‌ಲಾಡೆನ್ ಕುಟುಂಬ ಒಸಾಮಾ ಬಿನ್ ಲಾಡೆನ್‌ನನ್ನು ಕುಟುಂಬದಿಂದ ಹೊರಹಾಕಿದ್ದು, ಈ ವಿಲ್ಲಾಗೆ ಆತ ಬಂದಿಲ್ಲ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.