ಪಾಕ್ ವಿರುದ್ಧ ಆಕ್ರೋಶ :ಪೋಸ್ಟರ್ ಪ್ರತಿಭಟನೆ
Team Udayavani, Sep 15, 2019, 5:43 AM IST
ವಾಷಿಂಗ್ಟನ್/ಜಿನೇವಾ: ಪಾಕಿಸ್ಥಾನ ಸರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಉಗ್ರರನ್ನು ಒಳನುಸುಳುವಂತೆ ಮಾಡುವುದು ಹೊಸತೇನಲ್ಲ. ಇದರ ಜತೆಗೆ ತನ್ನದೇ ಆಡಳಿತ ಇರುವ ಬಲೂಚಿಸ್ಥಾನದಲ್ಲಿ ವ್ಯಾಪಕವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ. ಅದರ ವಿರುದ್ಧ ಅಲ್ಲಿನ ನಾಗರಿಕರು ಮತ್ತು ಸಂಘಟನೆಗಳು ಈಗಾಗಲೇ ಧ್ವನಿಯೆತ್ತಿದ್ದಾರೆ. ಇದೀಗ ಜಿನೇವಾದಲ್ಲಿಯೂ ಕೂಡ ಪ್ರತಿಭಟನೆ ಶುರುವಾಗಿದೆ. ಬಲೂಚ್ ಮಾನವಹಕ್ಕುಗಳ ಮಂಡಳಿ (ಬಿಎಚ್‌ಆರ್‌ಸಿ) ನೇತೃತ್ವದಲ್ಲಿ ಸ್ವಿಜರ್ಲೆಂಡ್‌ನ ಜಿನೇವಾದಲ್ಲಿ ಪಾಕ್ ಕ್ರೌರ್ಯದ ವಿರುದ್ಧ ಪೋಸ್ಟರ್ ಚಳವಳಿ ನಡೆದಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಸಭೆಯ ನಡುವೆಯೇ ಈ ಬೆಳವಣಿಗೆ ನಡೆದಿರುವುದು ಗಮನಾರ್ಹ. “ಬಲೂಚಿಸ್ಥಾನದಲ್ಲಿ ನರ ಹತ್ಯೆ ನಿಲ್ಲಿಸಿ’ ಎಂದು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿರುವ ಪೋಸ್ಟರ್‌ಗಳನ್ನು ನಗರದಲ್ಲಿ ಅಂಟಿಸಲಾಗಿದೆ.
ಜಿನೇವಾದ “ಬ್ರೋಕನ್ ಚೇರ್’ ಎಂಬ ಪ್ರದೇಶದಲ್ಲಿ ಬಿಎಚ್‌ಆರ್‌ಸಿ ಪ್ರತಿಭಟನೆಯನ್ನೂ ನಡೆಸಿದೆ. “ಬಲೂಚಿಸ್ಥಾನ ಪಾಕಿಸ್ಥಾನದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಸ್ಥಳ. ಚೀನ- ಪಾಕಿಸ್ಥಾನ ಆರ್ಥಿಕ ಕಾರಿಡಾರ್‌ನಿಂದ ಪಾಕಿಸ್ಥಾನ ಮತ್ತು ಚೀನಕ್ಕೆ ನೆರವಾಗಲಿದೆಯೇ ಹೊರತು, ಬಲೂಚಿಸ್ಥಾನಕ್ಕೆ ಅನುಕೂಲವಾಗುವುದಿಲ್ಲ. ಬಲೂಚಿಸ್ಥಾನದ ಫಲವತ್ತಾದ ಭೂಮಿಯಿಂದ ಲಾಭ ಪಡೆದ ಪಾಕ್, ಬದಲಾಗಿ ನೋವನ್ನೇ ನೀಡುತ್ತದೆ’ ಎಂದು ಸಂಘಟನೆ ಆರೋಪಿಸಿದೆ. ಪೋಸ್ಟರ್‌ಗಳಲ್ಲಿ ಪಾಕಿಸ್ಥಾನ ನಡೆಸಿದ ವಿವಿಧ ರೀತಿಯ ದೌರ್ಜನ್ಯಗಳನ್ನು ಪ್ರತಿಬಿಂಬಿಸಲಾಗಿದೆ.
ಸಂಸದರ ಒತ್ತಾಯ: ಅಮೆರಿಕ ಸಂಸತ್ ಸದಸ್ಯರ ತಂಡ ವೊಂದು ಭಾರತ ಮತ್ತು ಪಾಕಿಸ್ಥಾನ ನಡುವಿನ ಬಿಕ್ಕಟ್ಟು ತಗ್ಗಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಹೊಸದಿಲ್ಲಿ ಮತ್ತು ಇಸ್ಲಾಮಾಬಾದ್‌ನಲ್ಲಿರುವ ರಾಯಭಾರಿಗಳು ಮುಖ್ಯ ಭೂಮಿಕೆ ವಹಿಸಬೇಕು ಎಂದು ಒತ್ತಾಯಿಸಿದೆ.
ಗುಂಡು ಹಾರಾಟ: ಜಮ್ಮು ಮತ್ತು ಕಾಶ್ಮೀರದ ಪೂಂಛ…ಗೆ ಹೊಂದಿಕೊಂಡಿರುವ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ಥಾನದ ಸೇನಾಪಡೆಗಳು ಗ್ರಾಮಗಳನ್ನು ಗುರಿಯಾಗಿಸಿ ಗುಂಡು ಹಾರಿಸಿವೆ. ಶನಿವಾರ ಈ ಘಟನೆ ನಡೆದಿದೆ. ಬಾಲಕೋಟ್, ಮನ್‌ಕೋಟ್ ಪ್ರದೇಶಗಳಲ್ಲಿಯೂ ಪಾಕ್ ಸೇನೆ ಕದನ ವಿರಾಮ ಉಲ್ಲಂ ಸಿದೆ.
ಇಮ್ರಾನ್ ವಿರುದ್ಧ ಘೋಷಣೆ
ಮುಝಾಫರಾಬಾದ್‌ನಲ್ಲಿ ಶುಕ್ರವಾರ ನಡೆದಿದ್ದ ಬೃಹತ್ ರ್ಯಾಲಿಯಲ್ಲಿ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್‌ಗೆ ಮುಜುಗರವಾಗುವ ಸಂಗತಿ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಾರದೇ ಇದ್ದುದರಿಂದ ಹೆಚ್ಚಿನರವನ್ನು ಆಮಿಷವೊಡ್ಡಿ ಕರೆತರಲಾಗಿತ್ತು. ಬಂದಿದ್ದವರೂ ಕೂಡ “ಗೋ ನಾಝಿ ಗೋ ಬ್ಯಾಕ್’ ಎಂದು ಘೋಷಣೆ ಕೂಗಿದ್ದರು. ಜತೆಗೆ “ಕಾಶ್ಮೀರ್ ಬನೇಗಾ ಹಿಂದುಸ್ತಾನ್’ ಎಂದು ಕೂಗು ಹಾಕಿದ್ದಾರೆ.
ಕಿಶಾ¤$Ìರ್‌ನಲ್ಲಿ ಕರ್ಫ್ಯೂ ಹಿಂದೆಗೆತ
ಜಮ್ಮು ಮತ್ತು ಕಾಶ್ಮೀರದ ಕಿಶಾ¤$Ìರ್ ಜಿಲ್ಲೆಯಲ್ಲಿ ಹಗಲಿನ ವೇಳೆಯಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ಹಿಂಪಡೆಯಲಾಗಿದೆ. ಇದೇ ವೇಳೆ ಸ್ಥಳೀಯ ಪಿಡಿಪಿ ನಾಯಕ ಶೇಖ್ ನಾಸಿರ್ ಹುಸೇನ್ ಅವರ ಭದ್ರತಾ ಸಿಬಂದಿಯಿಂದ ಉಗ್ರರು ರೈಫಲ್ ಕಸಿದುಕೊಂಡು ಪರಾರಿಯಾದ ಬಳಿಕ ಶೋಧ ಕಾರ್ಯ ಮುಂದುವರಿಸಲಾಗಿದೆ. ಇದೇ ವೇಳೆ ರಾತ್ರಿ ವೇಳೆ ವಿಧಿಸಲಾಗಿರುವ ಕರ್ಫ್ಯೂ ಮುಂದಿನ ಆದೇಶದ ವರೆಗೆ ಮುಂದುವರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.