Earthquakes: ಎವರೆಸ್ಟ್‌ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ

ನೇಪಾಳ ಗಡಿ ಸಮೀಪದ ಟಿಬೆಟ್‌ನಲ್ಲಿ ದುರಂತ, ನಿಮಿಷಗಳ ಅಂತರದಲ್ಲಿ 3 ಬಾರಿ ಕಂಪನ, 150 ಬಾರಿ ಪಶ್ಚಾತ್‌ ಕಂಪನ, 200 ಮಂದಿಗೆ ಗಾಯ

Team Udayavani, Jan 7, 2025, 12:43 PM IST

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಬೀಜಿಂಗ್‌: ಎವರೆಸ್ಟ್‌ ಶಿಖರದ ತಪ್ಪಲಿನ ಟಿಬೆಟ್‌ನಲ್ಲಿ ಮಂಗಳವಾರ ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದೆ. 7.1 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು, ಘಟನೆಯಲ್ಲಿ 126 ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 1000ಕ್ಕೂ ಅಧಿಕ ಮನೆಗಳು ನೆಲೆಸಮವಾಗಿದೆ.

ಭೂಕಂಪದ ತೀವ್ರತೆಗೆ ಹಲವು ಹಳ್ಳಿಗಳೇ ನಿರ್ನಾಮಗೊಂಡಿದ್ದು,  ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಕಾರ್ಯ ನಡೆದಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಚೀನಾದ ಸ್ವಾಯತ್ತ ಪ್ರದೇಶವಾದ ಟಿಂಗ್ರಿ ಕೌಂಟಿಯ ಶಿಗಾತ್ಸೆ ನಗರ ಸಮೀಪದ ಸೇಗೋ ಟೌನ್‌ಶಿಪ್‌ನಲ್ಲಿ ಭೂಕಂಪದ ಕೇಂದ್ರ ಬಿಂದು ವರದಿಯಾಗಿದೆ. ಈ ಪ್ರದೇಶದಿಂದ 20 ಕಿ.ಮೀ.ವ್ಯಾಪ್ತಿಯಲ್ಲೇ 6,900ಕ್ಕೂ ಅಧಿಕ ಮಂದಿ ವಾಸವಿದ್ದು, ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ. ಮನೆಗಳು, ಕಟ್ಟಡಗಳು ನೆಲಸಮವಾಗಿದ್ದರೆ. ರಸ್ತೆ ಬದಿಯಲ್ಲಿದ್ದ ಕಾರುಗಳು ನಿಂತಲ್ಲೇ ಹೂತು ಹೋಗಿವೆ.

ಟಿಬೆಟ್‌ ರಾಜಧಾನಿ ಲಾಹ್ಸಾದಿಂದ 400 ಕಿ.ಮೀ.ದೂರದ ಟಿಂಗ್ರಿ 27 ಗ್ರಾಮಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಭೂಕಂಪನ ಅಧ್ಯಯನ ಕೇಂದ್ರದ ಮಾಹಿತಿಗಳ ಪ್ರಕಾರ, ಮಂಗಳವಾರ ಬೆಳಗ್ಗೆ 6.35ಕ್ಕೆ ಮೊದಲ ಬಾರಿಗೆ 7.1ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ಬಳಿಕ 7 ಗಂಟೆ 02 ನಿಮಿಷದಲ್ಲಿ 4.7ರ ತೀವ್ರತೆಯಲ್ಲಿ 10 ಕಿ.ಮೀ.ಆಳದಲ್ಲಿ ಕಂಪಿಸಿದೆ. ಇದಾಗುತ್ತಿದ್ದಂತೆ 4 ನಿಮಿಷದ ಅಂತರದಲ್ಲಿ ಅಂದರೆ 7.07ರ ವೇಳೆಗೆ 4.9ರ ತೀವ್ರತೆಯಲ್ಲಿ 30 ಕಿ.ಮೀ. ಆಳದಲ್ಲಿ ಕಂಪನ ವರದಿಯಾಗಿದೆ. ಜತೆಗೆ 150 ಬಾರಿ ಪಶ್ಚಾತ್‌ ಕಂಪನಗಳೂ ಸಂಭವಿಸಿವೆ.

ಪುಣ್ಯಭೂಮಿಯಲ್ಲಿ ದುರಂತ:
ಶಿಗಾತ್ಸೆ ಭಾರತದ ಗಡಿಗೆ ಸಮೀಪವಿರುವ ಪ್ರದೇಶ. ಟಿಬೆಟ್‌ನ ಪುಣ್ಯಭೂಮಿ ಎಂದೂ ಖ್ಯಾತಿ ಪಡೆದಿದ್ದು, ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳವೂ ಆಗಿದೆ.

ಎಲ್ಲೆಲ್ಲಿ ಕಂಪನದ ಅನುಭವ?
ಭಾರತದ ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ ಸೇರಿ ದಂತೆ ಉತ್ತರ ಭಾರ ತದ ಹಲವೆಡೆ ಕಂಪನದ ಅನುಭವವಾಗಿದೆ. ಜತೆಗೆ ನೇಪಾಳದ ಸಿಂಧುಪಾಲಂಚೋಕ್‌ ಧಾಂಡಿಂಗ್‌ ಹಾಗೂ ಸೋಲುಖುಂಬು ಜಿಲ್ಲೆಗಳಲ್ಲಿ ಪ್ರಬಲ ಭೂಕಂಪನದ ಅನುಭವ ಆಗಿದೆ. ರಾಜಧಾನಿ ಕಠ್ಮಂಡುವಿನಲ್ಲೂ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಭೂಕಂಪದ ಕೇಂದ್ರಬಿಂದುವಿನಿಂದ 400 ಕಿ.ಮೀ.ದೂರದಲ್ಲಿರುವ ನೇಪಾಳಾದ ಕಿಮಾತಾಂಕಾ ಎಂಬಲ್ಲಿ ಕಲ್ಲಿನಿಂದ ನಿರ್ಮಿಸಲಾದ 2 ಅಂತಸ್ತಿನ ಕಟ್ಟಡ ಹಾನಿಗೊಳಗಾಗಿದೆ.

A massive earthquake of 7.1 magnitude struck the Tibet-Nepal border, till now more than 30 people reported dead many injured…more updates awaited #Tibet #nepal #earthquake pic.twitter.com/qFTXX9ukwC

— Surabhi Tiwari Rathi🇮🇳 (@surabhi_tiwari_) January 7, 2025

 

ಭೂಕಂಪಕ್ಕೆ ಬೆಚ್ಚಿದ ಜನ
ಮುಂಜಾನೆ ಕಣ್ಣು ಬಿಡುವ ಮುಂಚೆಯೇ ಭೂಕಂಪ ಸಂಭವಿಸಿ ಮನೆಗಳು ನೆಲಕ್ಕುರುಳುತ್ತಿರುವ ಅತ್ಯಂತ ಭೀಕರ ಸನ್ನಿವೇಶಕ್ಕೆ ಟಿಬೆಟ್‌ ಜನತೆ ಸಾಕ್ಷಿಯಾಗಿದ್ದಾರೆ. ಮನೆಗಳಲ್ಲಿನ ವಸ್ತು ಗಳು, ಹಲವೆಡೆ ಸೂಪರ್‌ ಮಾರ್ಕೆಟ್‌ಗಳಲ್ಲಿ ವಸ್ತುಗಳು ತಾನಾಗೆ ಉರುಳಿ ಬಿದ್ದಿವೆ. ಹಲವು ಸನ್ನಿವೇಶಗಳನ್ನು ನೆಟ್ಟಿಗರು ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, 2015ರ ಬಳಿಕ ಸುದೀರ್ಘ‌ 1 ನಿಮಿಷ ಕಾಲ ಅನುಭವಕ್ಕೆ ಬಂದ ಮೊದಲ ಭೂಕಂಪನ ಇದೇ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಎವರೆಸ್ಟ್‌ ವೀಕ್ಷಣಾ ಸ್ಥಳಕ್ಕೆ ಚೀನಾ ನಿರ್ಬಂಧ
ಭೂಕಂಪ ಹಿನ್ನೆಲೆಯಲ್ಲಿ ಚೀನಾ ತನ್ನ ಬದಿಯಲ್ಲಿರುವ ಎವರೆಸ್ಟ್‌ ಶಿಖರದ ರಮಣೀಯ ದೃಶ್ಯ ವೀಕ್ಷಣಾ ಸ್ಥಳವಾದ “ಮೌಂಟ್‌ ಕೋಮಾಲಾಂಗ್ಮಾಗೆ’ ಪ್ರವೇಶ ನಿರ್ಬಂಧಿಸಿದೆ. ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರ ಹಿತದೃಷ್ಟಿಯಿಂದ ಪ್ರವೇಶ ರದ್ದುಗೊಳಿಸಿದ್ದಾಗಿ ಆಡಳಿತ ಹೇಳಿದೆ.

ಟಾಪ್ ನ್ಯೂಸ್

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

Indian-origin Anita in Canada’s Prime Ministerial race

Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?

Pakistan; 6 brothers marry 6 sisters to save expenses!

Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.