ಮಂಗಳನಲ್ಲಿ ಆಮ್ಲಜನಕ ಉತ್ಪಾದನೆ
Team Udayavani, Apr 23, 2021, 6:50 AM IST
ಕ್ಯಾಲಿಫೋರ್ನಿಯಾ: ಮಂಗಳದ ವಾತಾವರಣದಲ್ಲಿ ಜೀವಾನಿಲ ಆಮ್ಲಜನಕವನ್ನು ಉತ್ಪಾದಿಸುವ ಮೂಲಕ ನಾಸಾದ ಪರ್ಸೆವೆರನ್ಸ್ ನೌಕೆ ಮತ್ತೂಂದು ಚಾರಿತ್ರಿಕ ಋಜು ದಾಖಲಿಸಿದೆ. ಅಂಗಾರಕನಲ್ಲಿರುವ ದಟ್ಟ ಇಂಗಾ ಲದ ಡೈ ಆಕ್ಸೈಡ್ ಬಳಸಿಕೊಂಡು, ಉಸಿರಾಟಯೋಗ್ಯ ಆಮ್ಲಜನಕ ತಯಾರಿಸಿ ವಿಸ್ಮಯ ಮೂಡಿಸಿದೆ.
ಪರ್ಸೆವೆರನ್ಸ್‌ನ ಈ ಯಶಸ್ಸು ಭವಿಷ್ಯ ದಲ್ಲಿ ಮಂಗಳದಲ್ಲಿ ಇಳಿಯುವ ಗಗನಯಾತ್ರಿಕರಿಗೆ ಆಮ್ಲ ಜನಕದ ಕೊರತೆ ನೀಗಿಸುವ ಸಾಹಸಕ್ಕೆ ಪ್ರೇರಣೆ ಸಿಕ್ಕಂತಾಗಿದೆ.
5 ಗ್ರಾಂ ಆಮ್ಲಜನಕ!: ಟೋಸ್ಟ್ ತಯಾರಿಸುವ ಪುಟ್ಟ ಯಂತ್ರದ ಮಾದರಿಯಲ್ಲಿರುವ “ಮೋಕ್ಸಿ’ಯನ್ನು ಪರ್ಸೆ ವೆರನ್ಸ್‌ನಲ್ಲಿ ಅಳವಡಿಸಲಾಗಿದೆ. “ಮೋಕ್ಸಿ ಯಂತ್ರ ಪ್ರಾ ಯೋಗಿಕ ಹಂತದಲ್ಲಿ 5 ಗ್ರಾಂ ಆಕ್ಸಿಜನ್ ಉತ್ಪಾದಿಸಿದ್ದು, ಒಬ್ಬ ಗಗನಯಾತ್ರಿಗೆ 10 ನಿಮಿಷ ಉಸಿರಾಡಲು ಇಷ್ಟು ಜೀವಾನಿಲ ಸಾಕು’ ಎಂದು ನಾಸಾ ತಿಳಿಸಿದೆ.
ತಯಾರಿಸಿದ್ದು ಹೇಗೆ?: ಅಂಗಾರಕನ ವಾತಾವರಣದಲ್ಲಿ ಶೇ.95ರಷ್ಟು ಇಂಗಾಲದ ಡೈ ಆಕ್ಸೆ„ಡ್ ತುಂಬಿಕೊಡಿದೆ. ಮೊಕ್ಸಿ ತನ್ನ ಎಲೆಕ್ಟ್ರೊಲಿಸಿಸ್ ತಂತ್ರಜ್ಞಾನ ಮೂಲಕ ಭಾರೀ ಶಾಖ ಬಳಸಿಕೊಂಡು, ಇಂಗಾಲದ ಡೈ ಆಕ್ಸೆ„ಡ್ ಅಣು ವಿನಲ್ಲಿನ ಆಮ್ಲಜನಕ ಪರಮಾಣುವನ್ನು ಪ್ರತ್ಯೇಕಗೊಳಿಸಿ, ಸಂಗ್ರಹಿಸಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
ಈ ಪ್ರಾಯೋಗಿಕ ಯಶಸ್ಸು ಆಧರಿಸಿ, ಭವಿಷ್ಯದ ದಿನಗಳಲ್ಲಿ ಮೋಕ್ಸಿ “ಪರ್ಸೆವೆರನ್ಸ್’ ನೌಕೆ ಮರಳುವಿಕೆಗೆ ಅಗತ್ಯವಿರುವ ಇಂಧನಯೋಗ್ಯ ಆಮ್ಸಜನಕವನ್ನೂ ಸಂಗ್ರಹಿಸಲಿದೆ.
ಇಲ್ಲಿಂದ ರವಾನಿಸುವುದಕ್ಕಿಂತ ಅಲ್ಲಿ ಉತ್ಪಾದಿಸುವುದೇ ಉತ್ತಮ! :
ನಾಲ್ವರು ಗಗನಯಾತ್ರಿಕರನ್ನು ಮಂಗಳನಲ್ಲಿ ಹೊತ್ತೂಯ್ಯುವ ನೌಕೆಗೆ ಏನಿಲ್ಲವೆಂದರೂ 25 ಮೆಟ್ರಿಕ್ ಟನ್ ಆಮ್ಲಜನ ಅಗತ್ಯ.
ಈ ಪೈಕಿ 7 ಮೆಟ್ರಿಕ್ ಟನ್ ಆಮ್ಲಜನಕ ರಾಕೆಟ್‌ನ ಇಂಧನಕ್ಕೇ ಬೇಕು.
ಭೂಮಿಯಿಂದ 25 ಟನ್ ಆಮ್ಲಜನಕ ಟ್ಯಾಂಕ್ ರವಾನಿಸುವುದಕ್ಕಿಂತ, ಇಂಗಾಲದ ಡೈ ಆಕ್ಸೆ„ಡನ್ನು ಪರಿವರ್ತಿಸಿ 1 ಟನ್ ಆಮ್ಲಜನಕ ಉತ್ಪಾದಿಸುವ ಯಂತ್ರ ಕೊಂಡೊಯ್ಯುವುದೇ ಪ್ರಾಕ್ಟಿಕಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.