ಸೋಂಕು ನಿರ್ವಹಣೆಗೆ ಪ್ಯಾಕೇಜ್; ಬಿರುಸಿನ ಚರ್ಚೆಯ ಬಳಿಕ ಅಮೆರಿಕ ಸಂಸತ್ ಸಮ್ಮತಿ
Team Udayavani, Jul 22, 2020, 9:22 AM IST
ವಾಷಿಂಗ್ಟನ್: ಅಮೆರಿಕದಲ್ಲಿ ಸೋಂಕಿನ ಪರಿಸ್ಥಿತಿ ನಿರ್ವಹಣೆಗಾಗಿ 3 ಟ್ರಿಲಿಯನ್ ಡಾಲರ್‌ಗಳ ಪ್ಯಾಕೇಜ್ ಅಂಗೀಕರಿಸಲಾಗಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆ ಯಲ್ಲಿ ಈ ಅಂಶ ರಿಪಬ್ಲಿಕನ್, ಡೆಮಾಕ್ರಾಟಿಕ್ ಪಕ್ಷಗಳಿಗೆ ಪ್ರಮುಖವಾಗಿದೆ. ಆದರೆ ಪ್ಯಾಕೇಜ್ ಅಂಗೀಕರಿಸುವ ಮೊದಲು ಅಧ್ಯಕ್ಷ ಟ್ರಂಪ್ ಭಾರಿ ಸವಾಲನ್ನೇ ಎದುರಿಸಬೇಕಾಯಿತು. ಸೆನೆಟ್‌ನಲ್ಲಿ ಆಡಳಿತ ಪಕ್ಷದ ನಾಯಕರಾಗಿರುವ ಮಿಶ್ ಮೆಕ್‌ಕಾನೆಲ್ ಅವರು ಕೊರೊನಾಗಾಗಿ 1 ಟ್ರಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್‌ನ್ನು ಬಿಡುಗಡೆ ಮಾಡುವ ಪ್ರಸ್ತಾವನೆ ಮಂಡಿಸಿದರು. ಆದರೆ, ಪ್ಯಾಕೇಜ್ ಘೋಷಣೆ ವಿಷಯದಲ್ಲಿ ಟ್ರಂಪ್ ಮತ್ತು ರಿಪಬ್ಲಿಕನ್ ಸಂಸದರ ನಡುವೆ ಒಡ ಮೂಡದ ಸಹಮತ ಹಾಗೂ ಡೆಮಾಕ್ರೆಟಿಕ್ ಸಂಸದರೊಂದಿಗಿನ ಭಿನ್ನಾಭಿಪ್ರಾಯ, ಪ್ಯಾಕೇಜ್‌ನ ಸುಲಭ ಅಂಗೀಕಾರಕ್ಕೆ ತೊಂದರೆ ಒಡ್ಡಿತು. ಬಿರುಸಿನ ಚರ್ಚೆಯ ಬಳಿಕ 3 ಟ್ರಿಲಿಯನ್ ಪ್ಯಾಕೇಜ್ ಅಂಗೀಕರಿಸಿರುವ ಬಗ್ಗೆ ಸ್ಪೀಕರ್ ನಾನ್ಸಿ ಪೆಲೊಸಿ ಘೋಷಣೆ ಮಾಡಿದರು.
ನಾನೇ ದೇಶಭಕ್ತ: ಮತ್ತೆ ಕೋವಿಡ್ ಬಿಕ್ಕಟ್ಟಿನ ಬಗ್ಗೆ ಪತ್ರಿಕಾಗೋಷ್ಠಿ ನಡೆಸುವ ಮಾತನ್ನಾಡಿದ್ದಾರೆ ಟ್ರಂಪ್. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ 100 ದಿನ ಇರುವಂತೆಯೇ ಪ್ರಚಾರ ಕಾರ್ಯ ಬಿರುಸುಗೊಂಡಿದೆ. ಇದೇ ವೇಳೆ ಮಾಸ್ಕ್ ಹಾಕಿರುವ ತಮ್ಮ ಫೋಟೋ ಟ್ವೀಟ್ ಮಾಡಿದ ಟ್ರಂಪ್ “ನಾನೇ ದೇಶಭಕ್ತ’ ಎಂದು ಹೇಳಿಕೊಂಡಿ ದ್ದಾರೆ. ಜತೆಗೆ ಎಲ್ಲೆಡೆ ಕೊರೊನಾ ಹರಡಲಿ ಎಂಬ ದುರುದ್ದೇಶದಿಂದಲೇ ಆರಂಭದಲ್ಲಿ ಚೀನ ಸೋಂಕು ಹರಡುವಿಕೆಯನ್ನು ತಡೆಯ ಲಿಲ್ಲ ಎಂದು ದೂರಿದರು.
ವಿಧೇಯಕ ಮಂಡನೆ: ಕೋವಿಡ್ ಸಂಕಷ್ಟಕ್ಕೆ ಕಾರಣವಾದ ಚೀನದ ವಿರುದ್ಧ ಫೆಡರಲ್ ನ್ಯಾಯಾಲ ಯಗಳಲ್ಲಿ ಮೊಕದ್ದಮೆ ಹೂಡಲು ಅಮೆರಿಕನ್ನರಿಗೆ ಅವಕಾಶ ಮಾಡಿಕೊಡುವ ವಿಧೇಯಕವೊಂದನ್ನು ಸೆನೆಟ್‌ನಲ್ಲಿ ಮಂಡಿಸಲಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀಲಿ ಚಿತ್ರ ತಾರೆಗೆ ಲಂಚ: ಅಧಿಕಾರಕ್ಕೆ ಮೊದಲೇ ಟ್ರಂಪ್ ಕೇಸಿನ ತೀರ್ಪು
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.