ಹಫೀಜ್ ಸಯೀದ್ ಬಂಧಿಸಿದ ಪಾಕ್
Team Udayavani, Jul 18, 2019, 5:42 AM IST
ಲಾಹೋರ್: ಹಠಾತ್ ಬೆಳವಣಿಗೆಯೊಂದರಲ್ಲಿ, 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ರೂವಾರಿ ಹಫೀಜ್ ಸಯೀದ್‌ನನ್ನು ಪಾಕಿಸ್ಥಾನ ಸರಕಾರ, ಬುಧವಾರ ಬಂಧಿಸಿ ಜೈಲಿಗಟ್ಟಿದೆ.
ಲಾಹೋರ್‌ನಿಂದ ಗುಜ್ರನ್‌ವಾಲಾ ಎಂಬಲ್ಲಿಗೆ ತೆರಳುತ್ತಿದ್ದ ಹಫೀಜ್‌ನನ್ನು ಪಾಕಿಸ್ಥಾನದ ಪಂಜಾಬ್ ಸರಕಾರದ ಉಗ್ರ ನಿಗ್ರಹ ದಳ (ಸಿಟಿಡಿ) ವಶಕ್ಕೆ ಪಡೆದು, ಆನಂತರ, ಲಾಹೋರ್‌ನ ಅತಿ ಬಿಗಿ ಭದ್ರತೆಯ ಬಂಧೀಖಾನೆಯಾದ ಕೋಟ್ ಲಖ³ತ್ ಜೈಲಿಗೆ ರವಾನಿಸಲಾಗಿದೆ. ಅದೇ ಜೈಲಿನಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಕೂಡ ಬಂಧಿಯಾಗಿದ್ದಾರೆ.
ಮುಂದಿನ ವಾರ, ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಾಷಿಂಗ್ಟನ್‌ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದು, ಅದಕ್ಕೂ ಮುನ್ನವೇ ಹಫೀಜ್ ಬಂಧನವಾಗಿರುವುದು ಗಮನಾರ್ಹ.
ಜತೆಗೆ, ಉಗ್ರ ಸಂಘಟನೆಗಳಿಗೆ ಆರ್ಥಿಕ ದೇಣಿಗೆ ನೀಡು ವಿಕೆಯ ಮೇಲೆ ಹದ್ದಿನ ಕಣ್ಣಿಟ್ಟಿರುವ ಫಿನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಈಗಾಗಲೇ ಪಾಕಿಸ್ಥಾನ ವನ್ನು ತನ್ನ ಗ್ರೇ ಲಿಸ್ಟ್‌ಗೆ ತಳ್ಳಿದ್ದು, ಉಗ್ರರ ನಿಗ್ರಹ ಮಾಡಲೇ ಬೇಕೆಂದು ಪಾಕಿಸ್ಥಾನ ಸರಕಾರದ ಮೇಲೆ ಒತ್ತಡ ಹೇರಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.