ಕರ್ತಾರ್‌ಪುರ ಕಾರಿಡಾರ್ ಪರಿಣತರ ಸಭೆ ಮರುನಿಗದಿಸಿದ ಭಾರತ; ಪಾಕ್ ಅಸಮಾಧಾನ
Team Udayavani, Mar 29, 2019, 3:16 PM IST
ಇಸ್ಲಾಮಾಬಾದ್ : ಕರ್ತಾರ್‌ಪುರ ಕಾರಿಡಾರ್ ಪರಿಣತರ ಮುಂಬರುವ ಸಭೆಯ ವೇಳಾಪಟ್ಟಿಯನ್ನು ಪುನರ್‌ನಿಗದಿಸಿರುವ ಭಾರತದ ನಿರ್ಧಾರವನ್ನು ”ಅರ್ಥಮಾಡಿಕೊಳ್ಳಲಾಗದು” ಎಂದು ಪಾಕಿಸ್ಥಾನ ಇಂದು ಶುಕ್ರವಾರ ಹೇಳಿದೆ.
ಭಾರತ ಇಂದು ಶುಕ್ರವಾರ ಹೊಸದಿಲ್ಲಿಯಲ್ಲಿನ ಪಾಕ್ ಉಪ ಹೈಕಮಿಷನರ್ ರನ್ನು ಕರೆಸಿಕೊಂಡು ಪಾಕಿಸ್ಥಾನ ನೇಮಿಸಿರುವ ಕರ್ತಾರ್‌ಪುರ ಕಾರಿಡಾರ್ ಸಮಿತಿಯಲ್ಲಿ ಅನೇಕ ಖಾಲಿಸ್ಥಾನ ಪ್ರತ್ಯೇಕತಾವಾದಿಗಳು ಇರುವ ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿತು.
ಕರ್ತಾರ್‌ಪುರ ಕಾರಿಡಾರ್ ತೆರೆದ ಬಳಿಕ ಪಾಕಿಸ್ಥಾನ ಸಚಿವ ಸಂಪುಟ ಹತ್ತು ಸದಸ್ಯರ ಪಾಕಿಸ್ಥಾನ್ ಸಿಕ್ಖ್ ಗುರದ್ವಾರ ಪ್ರಬಂಧಕ ಸಮಿತಿಯನ್ನು ರಚಿಸಿರುವುದಾಗಿ ಪಾಕ್ ಸರಕಾರದ ಒಡೆತನದಲ್ಲಿರುವ ರೇಡಿಯೋ ಪಾಕಿಸ್ಥಾನ್ ವರದಿ ಮಾಡಿದೆ. ಆದರೆ ಅದು ಸಮಿತಿ ಸದಸ್ಯರ ಹೆಸರನ್ನು ಬಹಿರಂಗಪಡಿಸಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.